For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್ ನಂತರ ವರುಣ್ ತೇಜಗೆ ಕೊರೊನಾ ಪಾಸಿಟಿವ್

  |

  ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂದು ಮಂಗಳವಾರ ಬೆಳಗ್ಗೆ ತಿಳಿಯಿತು. ಇದರ ಬೆನ್ನಲ್ಲೆ ಮೆಗಾ ಕುಟುಂಬದ ಮತ್ತೊಬ್ಬ ನಟ ವರುಣ್ ತೇಜ ಅವರಿಗೂ ಕೊವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ.

  ಈ ಕುರಿತು ಸ್ವತಃ ವರುಣ್ ತೇಜ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದು, ''ಇಂದು ಕೊರೊನಾ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ರೋಗಲಕ್ಷಣಗಳು ಕಂಡು ಬಂದಿದೆ. ಪ್ರಸ್ತುತ, ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದೇನೆ. ಆದಷ್ಟೂ ಬೇಗ ಚೇತರಿಕೆ ಕಂಡು ವಾಪಸ್ ಬರುತ್ತೇನೆ, ಧನ್ಯವಾದಗಳು'' ಎಂದು ತಿಳಿಸಿದ್ದಾರೆ.

  ನಟ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್: ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳ ಹಾರೈಕೆನಟ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್: ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳ ಹಾರೈಕೆ

  ರಾಮ್ ಚರಣ್ ಹಾಗೂ ವರುಣ್ ತೇಜ ಇಬ್ಬರಿಗೂ ಕೊರೊನಾ ಸೋಂಕು ದೃಢವಾಗುತ್ತಿದ್ದಂತೆ ಮೆಗಾ ಕುಟುಂಬದ ಸದಸ್ಯರಿಗೆ ಆತಂಕ ಕಾಡುತ್ತಿದೆ. ಏಕಂದ್ರೆ, ಇತ್ತೀಚಿಗಷ್ಟೆ ಮೆಗಾ ಫ್ಯಾಮಿಲಿಯ ಎಲ್ಲ ಸದಸ್ಯರು ಒಟ್ಟಿಗೆ ಕ್ರಿಸ್‌ಮಸ್ ಆಚರಣೆ ಮಾಡಿದ್ದರು.

  ಅದಕ್ಕೂ ಮುಂಚೆ ರಾಜಸ್ಥಾನದಲ್ಲಿ ನಾಗಬಾಬು ಮಗಳು ನಿಹಾರಿಕಾ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಇಬ್ಬರು ನಟರಿಗೆ ಸೋಂಕು ಅಂಟಿಕೊಂಡಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ, ಮದುವೆ ಹಾಗೂ ಕ್ರಿಸ್‌ಮಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲರೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

  ರಾಮ್ ಚರಣ್ ಮನೆಯಲ್ಲಿ ನಡೆದ ಕ್ರಿಸ್‌ಮಸ್ ಪಾರ್ಟಿಯಲ್ಲಿ ಅಲ್ಲು ಅರ್ಜುನ್, ನಿಹಾರಿಕ ದಂಪತಿ, ಅಲ್ಲು ಸಿರೀಶ್, ಬಾಬಿ, ಸಾಯಿ ಧರಮ್ ತೇಜ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

  Tollywood Actor Varun Tej Tests Positive for Covid-19

  ಇದಕ್ಕೂ ಮುಂಚೆ ವರುಣ್ ತೇಜ ಅವರ ತಂದೆ ನಾಗಬಾಬು (ಚಿರಂಜೀವಿ ಸಹೋದರ)ಗೂ ಕೊರೊನಾ ವೈರಸ್ ಅಂಟಿಕೊಂಡಿತ್ತು. ನಂತರ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದ ಗುಣಮುಖರಾಗಿದ್ದರು.

  ಇನ್ನುಳಿದಂತೆ ವರುಣ್ ತೇಜ ಸಹ ಎರಡು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ವಿಕ್ಟರಿ ವೆಂಕಟೇಶ್ ಜೊತೆ ಎಫ್ 3 ಹಾಗೂ ಇನ್ನು ಹೆಸರಿಡದ ಪ್ರಾಜೆಕ್ಟ್‌ವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  After Ram charan teja tested positive for Covid 19, now actor Varun Tej also Tested Positive for coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion