For Quick Alerts
  ALLOW NOTIFICATIONS  
  For Daily Alerts

  ಆಂಧ್ರದ ಪ್ರದೇಶದಲ್ಲಿ ಐಎಎಸ್ ಅಕಾಡೆಮಿಗೆ ಸೋನು ಸೂದ್ ಹೆಸರು

  |

  ಬಾಲಿವುಡ್ ನಟ ಸೋನು ಸೂದ್ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿರುವ ಶಿಕ್ಷಣ ಸಂಸ್ಥೆ ಪ್ರಖ್ಯಾತ ಐಎಎಸ್ ಅಕಾಡೆಮಿಗೆ ಸೋನು ಸೂದ್ ಹೆಸರಿಟ್ಟಿದೆ.

  ಹೈದರಾಬಾದ್‌ನಲ್ಲಿರುವ ಶರತ್ ಚಂದ್ರ ಐಎಎಸ್ ಅಕಾಡೆಮಿ ಹಾಗೂ ಶರತ್ ಚಂದ್ರ ಪದವಿ ಕಾಲೇಜು, ಶರತ್ ಚಂದ್ರ ಜೂನಿಯರ್ ಕಾಲೇಜಿನ ಆರ್ಟ್ ಮತ್ತು ಹ್ಯುಮಾನಿಟೀಸ್ ವಿಭಾಗಕ್ಕೆ ಸೋನು ಸೂದ್ ಹೆಸರನ್ನು ಮರುನಾಮಕರಣ ಮಾಡಲಾಗಿದೆ.

  ಸೋನು ಸೂದ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ; ಎಚ್ಚರವಿರಲಿ ಎಂದ ನಟ

  ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ನಟ ಸೋನು ಸೂದ್ ಅವರು ಮಾಡಿದ ಒಳ್ಳೆಯ ಕೆಲಸಗಳ ಪ್ರತೀಕವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

  ಈ ವಿಚಾರದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟ ಸೋನು ಸೂದ್ ''ನಾನು ತುಂಬಾ ವಿನಮ್ರ ಮತ್ತು ಕೃತಜ್ಞನಾಗಿದ್ದೇನೆ'' ಎಂದಿದ್ದಾರೆ.

  ''ಅಗತ್ಯವಿರುವವರಿಗೆ ಸಹಾಯ ಮಾಡುವ ಅವಕಾಶವನ್ನು ನಾನು ಪಡೆದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಇಂತಹ ದೊಡ್ಡ ಸಂಸ್ಥೆ ನನ್ನ ಕಾರ್ಯಗಳನ್ನು ಗೌರವಿಸಿದೆ'' ಎಂದು ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ, ಐಎಎಸ್ ಆಕಾಂಕ್ಷಿಗಳಿಗೆ ತಮ್ಮ ಕನಸುಗಳನ್ನು ಈಡೇರಿಸಲು ಮತ್ತು ಅವರ ಗುರಿಗಳನ್ನು ತಲುಪಲು ಬೆಂಬಲಿಸುವ ಉದ್ದೇಶದಿಂದ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

  ಸೋನು ಸೂದ್‌ಗೆ ಮತ್ತೊಂದು ಗೌರವ: ಪಂಜಾಬ್ ಚುನಾವಣಾ ರಾಯಭಾರಿಯಾಗಿ ಘೋಷಣೆ

  ಹರಿಯಾಣದ ಗ್ರಾಮವೊಂದರ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ನೀಡುವ ಮೂಲಕ ಸಹಾಯ ಮಾಡಿದ್ದರು. ಜೆಇಇ ಮತ್ತು ನೀಟ್ ಪರೀಕ್ಷೆಯ ಆಕಾಂಕ್ಷಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸೋನು ಸೂದ್ ನೆರವಾಗಿದ್ದರು.

  English summary
  One of the most reputed IAS & IPS training academy called "Sarat Chandra IAS Academy" has named a department on the name of Sonu Sood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X