For Quick Alerts
  ALLOW NOTIFICATIONS  
  For Daily Alerts

  ಟ್ರೆಂಡ್ ಸೆಟ್ ಮಾಡಿದ 'ಅರ್ಜುನ್ ರೆಡ್ಡಿ' ಒಟ್ಟಾರೆ ಗಳಿಸಿದ ಹಣವೆಷ್ಟು?

  |

  ನಾಲ್ಕು ವರ್ಷಗಳ ಹಿಂದೆ ತೆರೆಕಂಡಿದ್ದ 'ಅರ್ಜುನ್ ರೆಡ್ಡಿ' ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಲವ್ ಸ್ಟೋರಿ ಕಥಾಹಂದರ ಹೊಂದಿದ್ದ ಈ ಚಿತ್ರ ಸಖತ್ ಹಾಟ್ ಹಾಗೂ ಬೋಲ್ಡ್ ಆಗಿ ಮೂಡಿ ಬಂದಿತ್ತು. ಕೆಲವು ದೃಶ್ಯಗಳನ್ನಂತೂ ಸಂಪ್ರದಾಯಸ್ಥ ಪ್ರೇಕ್ಷಕರು ಒಪ್ಪಿಕೊಳ್ಳಲೇ ಇಲ್ಲ. ಅನೇಕರು ಈ ಚಿತ್ರದ ಬೋಲ್ಡ್ ದೃಶ್ಯಗಳನ್ನು ವಿರೋಧಿಸಿದರು. ಆದರೆ, ಯುವ ಪ್ರೇಕ್ಷಕರು ವಿಜಯ್ ದೇವರಕೊಂಡ ನಟನೆಯ ಮೆಚ್ಚಿದರು. ಇದರ ಪರಿಣಾಮ ದೇವರಕೊಂಡ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿಬಿಟ್ಟರು. ಅಲ್ಲಿಯವರೆಗೂ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ವಿಜಯ್ ದೇವರಕೊಂಡಗೆ 'ಅರ್ಜುನ್ ರೆಡ್ಡಿ' ಸಿನಿಮಾ ಏಕಾಏಕಿ ಸ್ಟಾರ್ ಪಟ್ಟ ತಂದು ಕೊಡ್ತು.

  ನಾಯಕನಟನಾಗಿ 'ಪೆಳ್ಳಿಚೂಪುಲು' ಅಂತಹ ಸಿನಿಮಾ ಮಾಡಿದ್ದರೂ ಅಷ್ಟಾಗಿ ಗುರುತು ಪಡೆದುಕೊಂಡಿರಲಿಲ್ಲ. ಅದ್ಯಾವಾಗ 'ಅರ್ಜುನ್ ರೆಡ್ಡಿ' ಹಿಟ್ ಆಯ್ತೋ ಆಮೇಲೆ ದೇವರಕೊಂಡ ನಡೆದು ಬಂದ ಹಾದಿ ಸರ್ಪ್ರೈಸ್. 2017 ಆಗಸ್ಟ್ 25 ರಂದು ರಿಲೀಸ್ ಆಗಿದ್ದ ಸಿನಿಮಾಗೆ ಆರಂಭದಲ್ಲಿ ಅಷ್ಟು ದೊಡ್ಡ ಓಪನಿಂಗ್ ಸಿಕ್ಕಿರಲಿಲ್ಲ. ಮೌತ್ ಟಾಕ್‌ನಿಂದ ಚಿತ್ರಕ್ಕೆ ಪ್ರೇಕ್ಷಕರು ಹೆಚ್ಚಾದರು. ಪರಿಣಾಮ ಸಿನಿಮಾ ಹಿಟ್ ಆಯಿತು. ಗಳಿಕೆಯಲ್ಲೂ ಅರ್ಜುನ್ ರೆಡ್ಡಿ ಆಗಿನ ಸಮಯಕ್ಕೆ ಒಳ್ಳೆಯ ಬಿಸಿನೆಸ್ ಮಾಡಿದೆ. ಒಟ್ಟಾರೆ ಅರ್ಜುನ್ ರೆಡ್ಡಿ ಗಳಿಸಿದೆಷ್ಟು? ಮುಂದೆ ಓದಿ...

  ದೇವರಕೊಂಡ-ಶಾಲಿನಿಗೆ ಲೈಫ್ ಕೊಟ್ಟ ಚಿತ್ರ

  ದೇವರಕೊಂಡ-ಶಾಲಿನಿಗೆ ಲೈಫ್ ಕೊಟ್ಟ ಚಿತ್ರ

  ವಿಜಯ್ ದೇವರಕೊಂಡ ಮತ್ತು ಚಿತ್ರದ ನಾಯಕಿ ಶಾಲಿನಿ ಪಾಂಡೆ ಅರ್ಜುನ್ ರೆಡ್ಡಿ ಲೈಫ್ ಕೊಡ್ತು. ಸಂದೀಪ್ ರೆಡ್ಡಿ ವಂಗಾ ಈ ಚಿತ್ರ ನಿರ್ದೇಶಿಸಿದ್ದರು. ಆಗಸ್ಟ್ 24ಕ್ಕೆ ಈ ಸಿನಿಮಾ ಬಂದು ನಾಲ್ಕು ವರ್ಷ ಕಳೆಯಿತು. ಈ ವಿಶೇಷವಾಗಿ ನಟಿ ಶಾಲಿನಿ ಪಾಂಡೆ ಸಂತಸ ವ್ಯಕ್ತಪಡಿಸಿದ್ದರು. "ನಾನು ಅರ್ಜುನ್ ರೆಡ್ಡಿ ಚಿತ್ರಕ್ಕೆ ಋಣಿಯಾಗಿದ್ದೀನಿ. ಯಾಕೆಂದರೆ ಅದು ನನ್ನನ್ನು ಅದ್ಭುತ ನಟಿಯಾಗಿ ಒಂದು ನಕ್ಷೆಯಲ್ಲಿ ಇರಿಸಿದೆ. ನಾನು ಅತ್ಯಂತ ಹೆಮ್ಮೆಪಡುವಂತ ನಟನೆ ಮಾಡಲು ನಾನು ಎಷ್ಟು ಸಾಧ್ಯವಾಗುತ್ತೋ ಅಷ್ಟು ಪ್ರಯತ್ನ ಮಾಡಿದ್ದೇನೆ. ಪ್ರೇಕ್ಷಕರು ನನ್ನ ಪಾತ್ರವನ್ನು ಮೆಚ್ಚಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದಿದ್ದರು.

  ನಾನು 'ಅರ್ಜುನ್ ರೆಡ್ಡಿ' ಗೆ ಋಣಿಯಾಗಿದ್ದೀನಿ; ನಟಿ ಶಾಲಿನಿ ಪಾಂಡೆನಾನು 'ಅರ್ಜುನ್ ರೆಡ್ಡಿ' ಗೆ ಋಣಿಯಾಗಿದ್ದೀನಿ; ನಟಿ ಶಾಲಿನಿ ಪಾಂಡೆ

  ಕಲೆಕ್ಷನ್ ವಿವರ ಇಲ್ಲಿದೆ

  ಕಲೆಕ್ಷನ್ ವಿವರ ಇಲ್ಲಿದೆ

  'ಅರ್ಜುನ್ ರೆಡ್ಡಿ' ಸಿನಿಮಾದ ಗಳಿಕೆ ಅಷ್ಟು ದೊಡ್ಡದೇನು ಅಲ್ಲ. ಆದರೆ ಹೊಸಬರ ಸಿನಿಮಾ ಆ ಮಟ್ಟಕ್ಕೆ ಕ್ರೇಜ್ ಸೃಷ್ಟಿಸಿದ್ದು ಮತ್ತು ಟ್ರೆಂಡ್ ಕ್ರಿಯೇಟ್ ಮಾಡಿದ್ದು ವಿಶೇಷ. ಮೊದಲ ದಿನ ಈ ಚಿತ್ರಕ್ಕೆ 4.64 ಕೋಟಿ ಗಳಿಸಿರುವ ದಾಖಲೆ ಇದೆ. ಮೊದಲ ಮೂರು ದಿನಕ್ಕೆ 11.43 ಕೋಟಿ ಬಾಚಿಕೊಂಡಿದೆ. ಒಂದು ವಾರದ ಮುಕ್ತಾಯಕ್ಕೆ 17.20 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.

  ಒಟ್ಟು ಗಳಿಕೆ ಎಷ್ಟು?

  ಒಟ್ಟು ಗಳಿಕೆ ಎಷ್ಟು?

  'ಅರ್ಜುನ್ ರೆಡ್ಡಿ' ಸಿನಿಮಾ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 14.10 ಕೋಟಿ ಗಳಿಸಿದೆ. ಭಾರತದ ಇತರೆ ಪ್ರದೇಶ ಹಾಗೂ ವಿದೇಶದಲ್ಲಿ ಸೇರಿ 7.25 ಕೋಟಿ ಬಾಚಿದೆ. ಒಟ್ಟಾರೆ ವರ್ಲ್ಡ್‌ವೈಡ್ ಕಲೆಕ್ಷನ್ 21.35 ಕೋಟಿ ಬಂದಿದೆ ಎಂದು ತೆಲುಗು ಫಿಲ್ಮಿಬೀಟ್ ವರದಿ ಮಾಡಿದೆ. ರಿಲಿಸ್‌ಗೂ ಮುಂಚೆ 5 ಕೋಟಿ ಪ್ರಿ-ರಿಲೀಸ್ ಬಿಸಿನೆಸ್ ಮಾಡಿತ್ತು. ಹಾಗ್ನೋಡಿದ್ರೆ, 16 ಕೋಟಿವರೆಗೂ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆಯಂತೆ.

  ಪ್ಯಾನ್ ಇಂಡಿಯಾ ಸ್ಟಾರ್

  ಪ್ಯಾನ್ ಇಂಡಿಯಾ ಸ್ಟಾರ್

  'ಅರ್ಜುನ್ ರೆಡ್ಡಿ' ಸಿನಿಮಾದ ನಂತರ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈ ಸಿನಿಮಾ ಬೇರೆ ಭಾಷೆಯಲ್ಲಿ ರಿಮೇಕ್‌ಗೆ ಬೇಡಿಕೆ ಹೆಚ್ಚಾಯಿತು. ಹಿಂದಿಯಲ್ಲಿ 'ಕಬೀರ್ ಸಿಂಗ್' ಹೆಸರಿನಲ್ಲಿ ರಿಲೀಸ್ ಆಯಿತು. ಕನ್ನಡದಲ್ಲಿ ಹಕ್ಕು ಸೇಲ್ ಆದರೂ ಸಿನಿಮಾ ಇನ್ನು ತಯಾರಾಗಿಲ್ಲ. ತಮಿಳಿನಲ್ಲಿ ರಿಮೇಕ್ ಆಯ್ತು. ಅರ್ಜುನ್ ರೆಡ್ಡಿ ನಂತರ ಬಂದ 'ಗೀತಾ ಗೋವಿಂದಂ', 'ಡಿಯರ್ ಕಾಮ್ರೇಡ್', 'ವರ್ಲ್ಡ್‌ ಫೇಮಸ್ ಲವರ್' ಅಂತಹ ಹಿಟ್ ಸಿನಿಮಾದಲ್ಲಿ ದೇವರಕೊಂಡ ನಟಿಸಿದರು. ಈಗ ಪೂರಿ ಜಗನ್ನಾಥ್ ಜೊತೆ 'ಲೈಗರ್' ಸಿನಿಮಾ ಮಾಡ್ತಿದ್ದಾರೆ. ಆ ಕಡೆ ಶಾಲಿನಿ ಪಾಂಡೆ ಬಾಲಿವುಡ್ ಪ್ರವೇಶಿಸಿದ್ದು, ರಣ್ವೀರ್ ಸಿಂಗ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  English summary
  Telugu Blockbuster Arjun Reddy Completes 4 Years: here is the Total Collection Of Trend setter film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X