For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ಸೆಟ್‌ನಲ್ಲಿ ಪವನ್ ಕಲ್ಯಾಣ್ ಎದುರು ಆದಿವಾಸಿಗಳ ಹಾಡು-ಪಾಡು

  |

  ನಟ ಪವನ್ ಕಲ್ಯಾಣ್ ಪ್ರಸ್ತುತ 'ವಕೀಲ್ ಸಾಬ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ತುರುಸಾಗಿ ಸಾಗಿದೆ. ಕೊರೊನಾ ಕಾರಣಕ್ಕೆ ಸಿನಿಮಾ ತಡವಾಗಿರುವ ಕಾರಣ, ಪವನ್ ಕಲ್ಯಾಣ್ ಸಹ ಹೆಚ್ಚಿನ ಸಮಯ ನೀಡಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  ಬಿಡುವಿಲ್ಲದ ಚಿತ್ರೀಕರಣದ ಮಧ್ಯೆಯೇ ಸಾಕಷ್ಟು ಮಂದಿ ಅಭಿಮಾನಿಗಳು, ನಿರ್ಮಾಪಕರು, ರಾಜಕೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಪವನ್ ಅವರನ್ನು ಭೇಟಿಯಾಗಲು ಸೆಟ್‌ಗೆ ಭೇಟಿ ನೀಡುತ್ತಲೇ ಇರುತ್ತಾರೆ.

  ಆದರೆ ಇಂದು (ಡಿಸೆಂಬರ್ 24) ವಿಶೇಷ ವ್ಯಕ್ತಿಗಳು ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಲು ಸೆಟ್‌ಗೆ ಬಂದಿತ್ತು. ಹೌದು, ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಸೆಟ್‌ಗೆ ಆದಿವಾಸಿಗಳ ತಂಡವೊಂದು ಭೇಟಿ ನೀಡಿತ್ತು.

  ಆದಿವಾಸಿಗಳೊಟ್ಟಿಗೆ ಸಂವಾದ ನಡೆಸಿದ ಪವನ್ ಕಲ್ಯಾಣ್, ಕೊನೆಗೆ ಆದಿವಾಸಿ ಮಹಿಳೆಯೊಬ್ಬಳು ಹಾಡಿದ ಹಾಡನ್ನು ಕೇಳಿ ಸಂತಸಪಟ್ಟರು. ಆದಿವಾಸಿ ಮಹಿಳೆ ಹಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಪವನ್ ಕಲ್ಯಾಣ್.

  ತೆಲುಗು-ಒರಿಯಾ ಭಾಷೆಯಲ್ಲಿ ಕಾಡುಮಕ್ಕಳ ಕಷ್ಟ-ಕಾರ್ಪಣ್ಯ, ಬದುಕುನ್ನು ವಿವರಿಸುವ ಹಾಡನ್ನು ಅರುಕು ಆದಿವಾಸಿ ಮಹಿಳೆ ಹಾಡಿರುವುದಾಗಿ ಪವನ್ ಕಲ್ಯಾಣ್ ಬರೆದುಕೊಂಡಿದ್ದಾರೆ. ಹಾಡನ್ನು ಕೇಳುತ್ತಿದ್ದಂತೆ ಬಿಬೂತಿ ಭೂಷಣ್ ಬಂಡೋಪಾಧ್ಯಾಯ ರಚಿಸಿರುವ 'ವನವಾಸಿ' ನೆನಪಿಗೆ ಬಂತು ಎಂದಿದ್ದಾರೆ ಪವನ್ ಕಲ್ಯಾಣ್.

  ಪವನ್ ಕಲ್ಯಾಣ್ ಪ್ರಸ್ತುತ 'ವಕೀಲ್ ಸಾಬ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಸಿದ ಬಳಿಕ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್‌ ನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಕ್ರಿಶ್ ನಿರ್ದೇಶನದ ಐತಿಹಾಸಿಕ ಸಿನಿಮಾ ಸೇರಿ ಹೆಸರಿಡದ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಪವನ್.

  English summary
  Tribe people visited Pawan Kalyan's 'Vakeel Saab' set. they song their tribe song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X