For Quick Alerts
  ALLOW NOTIFICATIONS  
  For Daily Alerts

  ನನ್ನ ಜೀವನದಲ್ಲಿ ಈ 2 ದಿನಗಳನ್ನು ಮರೆಯಲು ಸಾಧ್ಯವಿಲ್ಲ: ನಟ ನಾಗಾರ್ಜುನ

  By ಫಿಲ್ಮ್ ಡೆಸ್ಕ್
  |

  ತೆಲುಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಎರಡು ವಿಶೇಷ ದಿನಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ನಾಗಾರ್ಜುನ 'ನನ್ನ ಜೀವನದಲ್ಲಿ ಈ ಎರಡು ದಿನಗಳನ್ನು ಮರೆಯಲು ಸಾಧ್ಯವಿಲ್ಲ' ಎಂದಿದ್ದಾರೆ.

  ಯಶ್ ಬಗ್ಗೆ ರಾನಾ ಬಾಯಿಂದ ಬಂದ ಮಾತುಗಳೇನು? | YASH | Rana Daggubati. |

  ಆ ಎರಡು ದಿನಗಳು ಮೇ 22 ಮತ್ತು ಮೇ 23. ಈ ಎರಡು ದಿನ ಯಾವಾಗಲು ವಿಶೇಷವಾಗಿರುತ್ತಂತೆ. ಕಾರಣ ಮೇ 22 ನಾಗಾರ್ಜುನ ಅಭಿನಯದ ಅನ್ನಮಯ್ಯ ಸಿನಿಮಾ ರಿಲೀಸ್ ಆದ ದಿನ. ಇನ್ನೂ ಮೇ 23 ಮನಮ್ ಸಿನಿಮಾ ತೆರೆಗೆ ಬಂದ ದಿನ. ಈ ಎರಡು ಸೂಪರ್ ಹಿಟ್ ನಿಮಾಗಳು ತೆರೆಗೆ ಬಂದ ದಿನ ನಾಗಾರ್ಜುನ ಅವರಿಗೆ ತಂಬಾ ವಿಶೇಷವಂತೆ. ಈ ಬಗ್ಗೆ ನಾಗಾರ್ಜುನ ಬರೆದುಕೊಂಡಿದ್ದು ಹೀಗೆ. ಮುಂದೆ ಓದಿ..

  ಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆ

  1997ರಲ್ಲಿ ಅನ್ನಮಯ್ಯ ರಿಲೀಸ್

  1997ರಲ್ಲಿ ಅನ್ನಮಯ್ಯ ರಿಲೀಸ್

  1997ರಲ್ಲಿ ತೆರೆಗೆ ಬಂದ ಅನ್ನಮಯ್ಯ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಆ ಕಾಲದಲ್ಲಿಯೇ ಬಾಕ್ಸ್ ಆಫೀಸ್ ದೊಡ್ಡ ಮೊತ್ತದ ಹಣವನ್ನು ದೋಚಿತ್ತು. ಭಕ್ತಿ ಪ್ರಧಾನ ಚಿತ್ರ ಇದಗಿದ್ದು, ನಾಗಾರ್ಜುನ ಅನ್ನಮಯ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ನಟ ಸುಮನ್, ಮೋಹನ್ ಬಾಬು, ರಮ್ಯಾ ಕೃಷ್ಣ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ಇದೆ.

  ನಟ ನಾಗಾರ್ಜುನ ಕೆನ್ನೆಗೆ ಹೊಡೆದು ತಪ್ಪು ಮಾಡಿದೆ: ನಟ ಸುಮಂತ್ನಟ ನಾಗಾರ್ಜುನ ಕೆನ್ನೆಗೆ ಹೊಡೆದು ತಪ್ಪು ಮಾಡಿದೆ: ನಟ ಸುಮಂತ್

  2014ರಲ್ಲಿ ಮನಮ್ ರಿಲೀಸ್

  2014ರಲ್ಲಿ ಮನಮ್ ರಿಲೀಸ್

  ಇನ್ನೂ 2014ರಲ್ಲಿ ತೆರೆಗೆ ಬಂದ ಮನಂ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ವಿಶೇಷ ಅಂದರೆ ಸಿನಿಮದಲ್ಲಿ ನಾಗಾರ್ಜುನ ಕುಟುಂಬದ ಎಲ್ಲರೂ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್, ಪುತ್ರ ನಾಗಾರ್ಜುನ, ಮೊಮ್ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಎಲ್ಲರೂ ಈ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಈ ಸಿನಿಮಾ ನಾಗಾರ್ಜುನ ಅವರಿಗೆ ಭಾವನಾತ್ಮಕವಾಗಿ ತುಂಬಾ ಹತ್ತಿರವಾದ ಸಿನಿಮಾವಾಗಿದೆಯಂತೆ.

  ಟ್ವೀಟ್ ಮಾಡಿರುವ ನಾಗಾರ್ಜುನ

  ಟ್ವೀಟ್ ಮಾಡಿರುವ ನಾಗಾರ್ಜುನ

  "ಮೇ 22 ಮತ್ತು ಮೇ 23 ಈ ಎರಡು ದಿನಗಳನ್ನು ನಾನು ಎಂದಿಗೂ ಮರೆಯಲ್ಲ. ಅನ್ನಮಯ್ಯ ಮತ್ತು ಮನಂ ಎರಡೂ ಮರೆಯಲಾಗದ ಸಿನಿಮಾಗಳು ತೆರೆಗೆ ಬಂದ ದಿನ" ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಎರಡೂ ಸಿನಿಮಾಗಳ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

  ಹಿಂದಿ ಸಿನಿಮಾದಲ್ಲಿ ನಾಗಾರ್ಜುನ

  ಹಿಂದಿ ಸಿನಿಮಾದಲ್ಲಿ ನಾಗಾರ್ಜುನ

  ನಾಗಾರ್ಜುನ ಸದ್ಯ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಗಾರ್ಜುನ ಕೊನೆಯದಾಗಿ ಮನ್ಮದುಡು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Two dates I cannot forget May 22 and May 23 said Actor Akkineni Nagarjuna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X