For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬ್‌ನಿಂದ ಅಲ್ಲು ಅರ್ಜುನ್ ಸಿನಿಮಾ ಡಿಲೀಟ್: ಮತ್ತೊಬ್ಬ ನಾಯಕ ನಟನಿಗೆ ಲಾಭ!

  |

  ಅಲ್ಲು ಅರ್ಜುನ್ ಪ್ರಸ್ತುತ ಲಕ್ಕಿ ನಟ. ಅವರ ನಟನೆಯ ಅಲಾ ವೈಕುಂಟಪುರಂಲೋ ಸಿನಿಮಾ ಭರ್ಜರಿ ಹಿಟ್ ಆಗಿದ್ದು, ಡಿಜಿಟಲ್‌ ಮಾರುಕಟ್ಟೆಯಲ್ಲೂ ದಾಖೆಗಳನ್ನು ಸೃಷ್ಟಿಸಿದೆ.

  ಅಲಾ ವೈಕುಂಟಪುರಂಲೋ ಸಿನಿಮಾ ಹಿಟ್ ಆದದ್ದೇ ತಡ ಅಲ್ಲು ಅರ್ಜುನ್‌ ಅವರ ಹಿಂದಿನ ಸಿನಿಮಾಗಳಿಗೆ ಬೇಡಕೆ ಹೆಚ್ಚಿದ್ದವು. ಅಲ್ಲು ಅರ್ಜುನ್ ಅಭಿನಯದ ಸರೈನೋಡು, ದುವ್ವಾಡ ಜಗನ್ನಾಥಂ ಸಿನಿಮಾಗಳು ಹಿಂದಿ ಡಬ್ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾದ ತೆಲುಗು ಸಿನಿಮಾ ಎಂಬ ದಾಖಲೆ ಸ್ಥಾಪಿಸಿತ್ತು.

  ಆದರೆ ಈಗ ಏಕಾ-ಏಕಿ ಯೂಟ್ಯೂಬ್‌ನಿಂದ ಅಲ್ಲು ಅರ್ಜುನ್ ಅಭಿನಯದ ಕೆಲವು ಸಿನಿಮಾಗಳ ಹಿಂದಿ ಡಬ್ ಆವೃತ್ತಿಯನ್ನು ಡಿಲೀಟ್ ಮಾಡಲಾಗಿದೆ. ಇದು ಅಲ್ಲು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

  ಎರಡು ಸಿನಿಮಾಗಳನ್ನು ಹೆಚ್ಚು ಮಂದಿ ನೋಡಿದ್ದರು

  ಎರಡು ಸಿನಿಮಾಗಳನ್ನು ಹೆಚ್ಚು ಮಂದಿ ನೋಡಿದ್ದರು

  ಅಲ್ಲು ಅರ್ಜುನ್ ಅಭಿನಯದ 'ಸರೈನೋಡು', ದುವ್ವಾಡ ಜಗನ್ನಾದ ಸಿನಿಮಾಗಳೆರಡರ ಹಿಂದಿ ಡಬ್ ವರ್ಶನ್ ಯೂಟ್ಯೂಬ್‌ನಲ್ಲಿ ಸಖತ್ ಹಿಟ್ ಆಗಿದ್ದವು. ದುವ್ವಾಡ ಜಗನ್ನಾದ ಸಿನಿಮಾವನ್ನು 270 ಮಿಲಿಯನ್‌ಗೂ ಹೆಚ್ಚು ಮಂದಿ ನೋಡಿದ್ದರೆ, ಸರೈನೋಡು ಸಿನಿಮಾವನ್ನು 300 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದರು.

  ಯೂಟ್ಯೂಬ್‌ನಿಂದ ಸಿನಿಮಾ ಡಿಲೀಟ್

  ಯೂಟ್ಯೂಬ್‌ನಿಂದ ಸಿನಿಮಾ ಡಿಲೀಟ್

  ಆದರೆ ಈಗ ಸರೈನೋಡು ಹಾಗೂ ದುವ್ವಾಡ ಜಗನ್ನಾದ ಸಿನಿಮಾಗಳ ಹಿಂದಿ ಡಬ್ ಅವತರಣಿಕೆಯನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದ್ದು. ಈ ಎರಡು ಸಿನಿಮಾಗಳು ಇದ್ದಕ್ಕಿಂದ್ದಂತೆ ಕಾಣೆಯಾಗಿವೆ. ಇದು ಅಲ್ಲು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

  ಮತ್ತೊಬ್ಬ ನಾಯಕನಿಗೆ ವರ

  ಮತ್ತೊಬ್ಬ ನಾಯಕನಿಗೆ ವರ

  ಅಲ್ಲು ಅರ್ಜುನ್ ಸಿನಿಮಾ ಡಿಲೀಟ್ ಆಗಿದ್ದ ಮತ್ತೊಬ್ಬ ತೆಲುಗು ನಾಯಕನಿಗೆ ವರವಾಗಿ ಪರಿಣಮಿಸಿದೆ. ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್ ಅಭಿನಯದ ಜಯಜಾನಕಿ ನಾಯಕ ಸಿನಿಮಾದ ಹಿಂದಿ ಡಬ್ ಆವೃತ್ತಿ ಯೂಟ್ಯೂಬ್‌ನಲ್ಲಿ ಹೆಚ್ಚು ಜನ ನೋಡಿದ ತೆಲುಗು ಸಿನಿಮಾ ಆಗಿದೆ.

  ಅಲ್ಲು ಅಭಿಮಾನಿಗಳ ಆಕ್ರೋಶ

  ಅಲ್ಲು ಅಭಿಮಾನಿಗಳ ಆಕ್ರೋಶ

  ಬೆಲ್ಲಂಕೊಂಡ ಶ್ರೀನಿವಾಸ್ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲದಿದ್ದರೂ ಸಹ ಆತನ ಸಿನಿಮಾವನ್ನು 283 ಮಿಲಿಯನ್‌ಗಳು ಹೆಚ್ಚು ಮಂದಿ ಯೂಟ್ಯೂಬ್‌ನಲ್ಲಿ ನೋಡಿದ್ದಾರೆ. ಸಹಜವಾಗಿಯೇ ಇದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಕೆರಳಿಸಿದೆ.

  English summary
  Two Hindi dubbed movies of Allu Arjun deleted from YouTube. Allu fans express their anger on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X