For Quick Alerts
  ALLOW NOTIFICATIONS  
  For Daily Alerts

  'ಉಪ್ಪೇನಾ' ಹೀರೋ ಜೊತೆ ರಕುಲ್ ಪ್ರೀತ್ ಸಿಂಗ್ ರೊಮ್ಯಾನ್ಸ್

  |

  ತೆಲುಗು ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದ ಸಿನಿಮಾ ಉಪ್ಪೆನಾ. 2021ರಲ್ಲಿ ತೆರೆಗೆ ಬಂದ ಉಪ್ಪೆನಾ ಸಿನಿಮಾ ತೆಲುಗು ಮಾತ್ರವಲ್ಲದೇ ದಕ್ಷಿಣ ಭಾರತೀಯ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಸಿನಿಮಾ ಮೂಲಕ ನಟ ವೈಷ್ಣವ್ ತೇಜ್ ಮತ್ತು ಕೃತಿ ಶೆಟ್ಟಿ ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದರು.

  ಮೊದಲ ಸಿನಿಮಾದಲ್ಲಿ ನಟ ವೈಷ್ಣವ್ ಮತ್ತು ಕೃತಿ ಇಬ್ಬರು ಅದ್ಭುತ ನಟನೆಯ ಮೂಲಕ ಚಿತ್ರಾಭಿಮಾನಿಗಳ ಹೃದಯ ಗೆದ್ದರು. ಈ ಸಿನಿಮಾ ಬಳಿಕ ಇಬ್ಬರೂ ಈಗ ಬೇಡಿಕೆಯ ಕಲಾವಿದರಾಗಿದ್ದಾರೆ. ನಟಿ ಕೃತಿ ಶೆಟ್ಟಿ ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೈಷ್ಣವ್ ತೇಜ್ ಈಗ ಎರಡನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ಕೃತಿ ಶೆಟ್ಟಿಗೆ ಬಂಪರ್ ಆಫರ್; ಸ್ಟಾರ್ ನಟನ ಚಿತ್ರದಲ್ಲಿ 'ಉಪ್ಪೆನಾ' ಸುಂದರಿಕೃತಿ ಶೆಟ್ಟಿಗೆ ಬಂಪರ್ ಆಫರ್; ಸ್ಟಾರ್ ನಟನ ಚಿತ್ರದಲ್ಲಿ 'ಉಪ್ಪೆನಾ' ಸುಂದರಿ

  ವೈಷ್ಣವ್ ಮುಂದಿನ ಸಿನಿಮಾದ ಬಗ್ಗೆ ಈಗಾಗಲೇ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು, ಇದೀಗ ಸಿನಿಮಾದ ಅಧಿಕೃತ ಟೈಟಲ್ ಮತ್ತು ಫಸ್ಟ್ ಲುಕ್ ಲಾಂಚ್ ಆಗಿದೆ. ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿನಿಮಾದ ಚಿತ್ರದ ಶೀರ್ಷಿಕೆ ರಿವೀಲ್ ಮಾಡುವ ಮೂಲಕ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ.

  ಅಂದಹಾಗೆ ವೈಷ್ಣವ್ ತೇಜ್ ಸಿನಿಮಾಗೆ 'ಕೊಂಡ ಪೋಲಂ' ಎಂದು ಟೈಟಲ್ ಇಡಲಾಗಿದೆ. ಇದೊಂದು ಅದ್ಭುತ ಸಾಹಸಮಯ ಸಿನಿಮಾವಾಗಿದೆ. ಇದೊಂದು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ಅದೇ ಟೈಟಲ್ ಅನ್ನು ಚಿತ್ರಕ್ಕೂ ಇಡಲಾಗಿದೆ. ಚಿತ್ರದಲ್ಲಿ ವೈಷ್ಣವ್ ತೇಜ್ ಕಟಾರು ರವೀಂದ್ರ ಯಾದವ್ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಫಸ್ಟ್ ಲುಕ್ ಮಾತ್ರ ರಿವೀಲ್ ಆಗಿದ್ದು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

  ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಹೀರೋ ವೈಷ್ಣವ್ ಹೊಸ ಸಿನಿಮಾದಲ್ಲಿ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ನಟಿ ರಕುಲ್ ಅಧಿಕೃತ ಪಡಿಸಿದ್ದಾರೆ. ರಕುಲ್ ಹೆಸರು ಅನೇಕ ದಿನಗಳಿಂದ ಕೇಳಿಬರುತ್ತಿತ್ತು, ಇದೀಗ ಅಂತಿಮವಾಗಿದೆ.

  ಅಂದಹಾಗೆ ಚಿತ್ರಕ್ಕೆ ನಿರ್ದೇಶಕ ಕ್ರಿಶ್ ಜಗರ್ಮುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಡಿನಲ್ಲಿ ನಡೆಯುವ ಸಾಹಸ ಪ್ರೇಮ ಕಥೆಯಾಗದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಫಸ್ಟ್ ಮತ್ತು ಟೈಟಲ್ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗ ಪಡಿಸಿದೆ ಸಿನಿಮಾತಂಡ. ಅಕ್ಟೋಬರ್ 8ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬರಲಿದೆ ಎಂದು ಸಿನಿಮಾತಂಡ ಘೋಷಿಸಿದೆ.

  Uppena actor Panja Vaishnav Tej new movie titled Konda Polam

  ಉಪ್ಪೆನಾ ಅಂಥ ಸೂಪರ್ ಹಿಟ್ ಸಿನಿಮಾ ಬಳಿಕ ವೈಷ್ಣವ್ ಎರಡನೇ ಬಾರಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಇಂದು (ಆಗಸ್ಟ್ 20) ಕೃತಿ ಶೆಟ್ಟಿ ಕೂಡ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ನಾಗ ಚೈತನ್ಯ ನಟಿಸುತ್ತಿರುವ ಬಂಗಾರಾಜು ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿಯಾಗಿದ್ದಾರೆ. ಇಂದು ಸಿನಿಮಾದ ಮುಹೂರ್ತ ನೆರವೇರಿದ್ದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  English summary
  Uppena actor Panja Vaishnav Tej new movie first look and Title reveal. movie titled Konda Polam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X