For Quick Alerts
  ALLOW NOTIFICATIONS  
  For Daily Alerts

  ತೆಲುಗು ಸ್ಟಾರ್ ನಿತಿನ್ ಜೊತೆ 'ಉಪ್ಪೆನಾ' ಸುಂದರಿ ಕೃತಿ ಶೆಟ್ಟಿ ರೊಮ್ಯಾನ್ಸ್

  By ಫಿಲ್ಮಿಬೀಟ್ ಡೆಸ್ಕ್
  |

  ಚೊಚ್ಚಲ ಚಿತ್ರದಲ್ಲೇ ದಕ್ಷಿಣ ಭಾರತೀಯ ಸಿನಿ ಪ್ರಿಯರ ಹೃದಯ ಗೆದ್ದವರು ಕರಾವಳಿ ಸುಂದರಿ ಕೃತಿ ಶೆಟ್ಟಿ. ತೆಲುಗಿನ ಉಪ್ಪೆನಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕೃತಿಗೆ ಮೊದಲ ಚಿತ್ರವೇ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತು.

  ಉಪ್ಪೆನಾ ಸೂಪರ್ ಸಕ್ಸಸ್ ಬಳಿಕ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ಕೃತಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೊಂದೇ ಸಿನಿಮಾ ಮುಗಿಸಿ ಹೊಸ ಸಿನಿಮಾಗೆ ಸಹಿ ಮಾಡುತ್ತಾ ಮುನ್ನುಗ್ಗುತ್ತಿರುವ ಕೃತಿ ಈಗ ಮತ್ತೊಂದು ಸ್ಟಾರ್ ನಟನ ಚಿತ್ರಕ್ಕೆ ಸಹಿ ಮಾಡಿದ್ದಾರೆ.

  ಮೊದಲ ಸಿನಿಮಾದಲ್ಲೇ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿರುವ ಕೃತಿ ಈಗ ತೆಲುಗಿನ ಸ್ಟಾರ್ ನಟ ನಿತಿನ್ ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೆ ನಾಗ ಚೈತನ್ಯ ಚಿತ್ರಕ್ಕೆ ಸಹಿ ಮಾಡಿದ ಬೆನ್ನಲ್ಲೇ ಕೃತಿ ಈಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಕೃತಿ ತೆಲುಗಿನ ಸ್ಟಾರ್ ನಟರಾದ ನಾಗ್ ಚೈತನ್ಯ ಮತ್ತು ಅಕ್ಕಿನೇನಿ ನಾಗಾರ್ಜುನ್ ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವ ಬಂಗಾರಾಜು ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಈ ಮೂಲಕ ಇಬ್ಬರು ಸ್ಟಾರ್ ನಟರ ಜೊತೆ ಕೃತಿ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದರು. ವರಮಹಾಲಕ್ಷ್ಮಿ ಹಬ್ಬದ ದಿನ ಬಂಗಾರಾಜು ಸಿನಿಮಾ ಸೆಟ್ಟೇರಿತ್ತು.

  ಚಿತ್ರದಲ್ಲಿ ಕೃತಿ ನಾಗ ಚೈತನ್ಯ ಪ್ರೇಯಸಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೋರ್ವ ಸ್ಟಾರ್ ನಟ ನಿತಿನ್ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಇಂದು (ಸೆಪ್ಟಂಬರ್ 10) ಗಣೇಶ ಹಬ್ಬದ ವಿಶೇಷವಾಗಿ ಚಿತ್ರದ ಮುಹೂರ್ತ ನೆರವೇರಿದೆ. ನಿತಿನ್ ಮತ್ತು ಕೃತಿ ಶೆಟ್ಟಿ ಹೊಸ ಸಿನಿಮಾಗೆ ಎಂ ಎಸ್ ರಾಜ ಶೇಖರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮಾಸ್ ಎಂಟಟೈನ್ ಮೆಂಟ್ ಸಿನಿಮಾವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಚಿತ್ರಕ್ಕೆ ಸದ್ಯ ನಿತಿನ್ 31 ಎಂದು ಹೆಸರಿಲಾಗಿದೆ.

  ಇಂದು ಹೈದರಾಬಾದ್‌ನಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಅನಿಲ್ ರವಿಪುಡಿ, ವೆಂಕಿ ಕುಡುಮುಲಾ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಮೂಲಗಳ ಪ್ರಕಾರ ಇಂದು ಸಂಜೆ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಟೈಟಲ್ ಅನಾವರಣ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

  ಉಪ್ಪೆನಾ ಸಿನಿಮಾ ಬಳಿಕ ಕೃತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕೃತಿ ನಟ ನಾನಿ ನಟನೆಯ ಶ್ಯಾಮ್ ಸಿಂಗ ರಾಯ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ತೆಲುಗಿನ ಮತ್ತೋವ ನಟ ಸುಧೀರ್ ಬಾಬು ನಟನೆಯ ಸಿನಿಮಾದಲ್ಲೂ ಕೃತಿ ನಾಯಕಿಯಾಗಿ ಮಿಂಚಿದ್ದಾರೆ. ಇತ್ತೀಚಿಗಷ್ಟೆ ಬಂಗಾರಾಜು ಸಿನಿಮಾಗೆ ಸಹಿ ಮಾಡಿದ್ದ ಕೃತಿ ಇದೀಗ ನಿತಿನ್ ಜೊತೆ ನಟಿಸಲು ಸಜ್ಜಾಗಿದ್ದಾರೆ.

  ಇನ್ನು ನಟ ನಿತಿನ್ ಕೊನೆಯದಾಗಿ ರಂಗ್ ದೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ನಿತಿನ್ ಗೆ ಜೋಡಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಕಸ್ಸಸ್ ತಂದುಕೊಟ್ಟಿಲ್ಲ. ಈ ಸಿನಿಮಾ ಬಳಿಕ ಬಾಲಿವುಡ್‌ನ ಸೂಪರ್ ಹಿಟ್ ಅಂಧಾಧುನ್ ಸಿನಿಮಾ ರಿಮೇಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ರಿಮೇಕ್‌ಗೆ ಮಾಸ್ಟ್ರೋ ಎಂದು ಟೈಟಲ್ ಇಡಲಾಗಿದ್ದು, ಈಗಾಗಲೇ ಚಿತ್ರೀಕರಣ ಮುಕ್ತಾಯಗೊಳಿಸಲಾಗಿದೆ. ಚಿತ್ರದಲ್ಲಿ ನಿತಿನ್ ಜೊತೆ ಕನ್ನಡ ನಟಿ ನಭಾ ನಟೇಶ್ ನಟಿಸಿದ್ದಾರೆ. ನಟಿ ತಮನ್ನಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾದ ಚಿತ್ರೀಕರಣ ಮುಗಿಸಿರುವ ನಿತಿನ್ ಇಂದು ಗಣೇಶ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ಲಾಂಚ್ ಮಾಡುವ ಮೂಲಕ ಮತ್ತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ.

  English summary
  Uppena Actress Krithi Shetty Romance with Telugu Actor Nithin in his Next movie,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X