For Quick Alerts
  ALLOW NOTIFICATIONS  
  For Daily Alerts

  'ವಕೀಲ್ ಸಾಬ್' ನಟಿ ಹಾಗೂ ನಿರ್ಮಾಪಕ ಅಲ್ಲು ಅರವಿಂದ್‌ಗೆ ಕೊರೊನಾ

  |

  ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ಸೆಲೆಬ್ರಿಟಿಗಳು ಟಾರ್ಗೆಟ್ ಆಗಿದ್ದಾರೆ ಎಂದೆನಿಸುತ್ತಿದೆ. ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಈ ಕಡೆ ಒಬ್ಬರ ಹಿಂದೆ ಮತ್ತೊಬ್ಬರಂತೆ ಸೆಲೆಬ್ರಿಟಿಗಳಿಗೆ ಸೋಂಕು ತಗುಲುತ್ತಿದೆ.

  ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ವೈರಸ್ ತಗುಲಿದೆ ಎಂದು ಭಾನುವಾರ ಬೆಳಗ್ಗೆ ತಿಳಿಯಿತು. ಅದರ ಬೆನ್ನಲ್ಲೆ ದಕ್ಷಿಣದ ಖ್ಯಾತ ನಟಿ ನಿವೇತಾ ಥಾಮಸ್‌ಗೆ ಸೋಂಕು ಅಂಟಿಕೊಂಡಿದೆ ಎಂಬ ವಿಚಾರ ಬಹಿರಂಗವಾಗಿದೆ.

  ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ವೈರಸ್ ಪಾಸಿಟಿವ್ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ವೈರಸ್ ಪಾಸಿಟಿವ್

  'ವಕೀಲ್ ಸಾಬ್' ಚಿತ್ರದಲ್ಲಿ ಪ್ರಮುಖ ನಾಯಕಿ ನಟಿಯಾಗಿ ಕಾಣಿಸಿಕೊಂಡಿರುವ ನಿವೇತಾ ಥಾಮಸ್‌ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಕುರಿತು ಸ್ವತಃ ನಿವೇತಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

  ಮೂರುವರೆ ವರ್ಷದ ಬಳಿಕ ಪವನ್ ಕಲ್ಯಾಣ್ ಕಂಬ್ಯಾಕ್ ಮಾಡುತ್ತಿರುವ ವಕೀಲ್ ಸಾಬ್ ಚಿತ್ರದಲ್ಲಿ ನಿವೇತಾ ಅಭಿನಯಿಸಿದ್ದಾರೆ. ಏಪ್ರಿಲ್ 9 ರಂದು ಈ ಸಿನಿಮಾ ತೆರೆಗೆ ಬರ್ತಿದೆ. ಈ ನಿಟ್ಟಿನಲ್ಲಿ ಪ್ರಚಾರ ಕಾರ್ಯ ಆರಂಭವಾಗಿದ್ದು, ಇತ್ತೀಚಿಗಷ್ಟೆ ನಡೆದಿದ್ದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ನಿವೇತಾ ಭಾಗಿಯಾಗಿದ್ದರು.

  ಮತ್ತೊಂದೆಡೆ ತೆಲುಗಿನ ಹಿರಿಯ ನಿರ್ಮಾಪಕ ಹಾಗೂ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್‌ಗೂ ಕೊರೊನಾ ಪಾಸಿಟಿವ್ ಬಂದಿದೆ. ಅಂದ್ಹಾಗೆ, ಅಲ್ಲು ಅರವಿಂದ್ ಅವರು ಕೊರೊನಾ ಲಸಿಕೆ ಪಡೆದಿದ್ದರಂತೆ. ಕೊರೊನಾ ಲಸಿಕೆ ಪಡೆದ ನಂತರ ಪಾಸಿಟಿವ್ ಬಂದಿದೆಯಂತೆ.

  ಇದಕ್ಕೂ ಮುಂಚೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರಿಗೂ ಕೊರೊನಾ ಲಸಿಕೆ ಪಡೆದ ನಂತರ ಪಾಸಿಟಿವ್ ಬಂದಿತ್ತು. ಎರಡು ದಿನದ ಬಳಿಕ ಪರೀಕ್ಷೆಯಲ್ಲಿ ನೆಗಿಟಿವ್ ಬಂದಿದೆ ಎಂದು ವರದಿಯಾಗಿದೆ.

  Recommended Video

  ದುನಿಯಾ ವಿಜಯ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ | Filmibeat Kannada

  ಇತ್ತೀಚಿಗೆ ಕೊರೊನಾ ಪಾಸಿಟಿವ್ ಆದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಆರ್‌ಸಿಬಿ ತಂಡದ ಆಟಗಾರ ದೇವದತ್ ಪಡಿಕ್ಕಲ್, ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್, ಅಮೀರ್ ಖಾನ್, ಆಲಿಯಾ ಭಟ್ ಸೇರಿದಂತೆ ಹಲವರು ಇದ್ದಾರೆ.

  English summary
  Vakeel Saab Actress nivetha thomas and tollywood producer allu aravind test Positive For Covid19.
  Monday, April 5, 2021, 10:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X