twitter
    For Quick Alerts
    ALLOW NOTIFICATIONS  
    For Daily Alerts

    ವೀರಸಿಂಹ ರೆಡ್ಡಿ ಮೊದಲ ದಿನದ ಕಲೆಕ್ಷನ್: ವಾರಿಸು, ತುನಿವುಗಿಂತ ಹೆಚ್ಚು ಗಳಿಸಿದ ಬಾಲಯ್ಯ ಸಿನಿಮಾ!

    |

    ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ತಮಿಳು ಹಾಗೂ ತೆಲುಗಿನ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿವೆ. ತಮಿಳು ನಾಡು ಹಾಗೂ ತೆಲುಗು ರಾಜ್ಯಗಳಲ್ಲಿ ಸಂಕ್ರಾಂತಿ ಪ್ರಯುಕ್ತ ಸಾಲು ಸಾಲು ರಜೆ ಇರುವ ಕಾರಣ ಸಿನಿ ರಸಿಕರು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದು ಚಿತ್ರಗಳು ಕೋಟಿ ಕೋಟಿ ಬಾಚಲಿವೆ ಎನ್ನುವುದು ನಿರ್ಮಾಪಕರ ಲೆಕ್ಕಾಚಾರ.

    ಅದರಂತೆಯೇ ಸಂಕ್ರಾಂತಿ ರೇಸ್‌ನಲ್ಲಿ ಮೊದಲು ಕಣಕ್ಕಿಳಿದ ತಮಿಳಿನ ವಾರಿಸು ಹಾಗೂ ತುನಿವು ಚಿತ್ರಗಳು ಒಳ್ಳೆಯ ಓಪನಿಂಗ್ ಪಡೆದುಕೊಂಡವು. ಎರಡೂ ಚಿತ್ರಗಳೂ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಕಲೆಕ್ಷನ್ ವಿಷಯದಲ್ಲಿ ಚಿತ್ರಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇನ್ನು ಈ ಎರಡು ಚಿತ್ರಗಲ್ಲಿ ಒಂದು ಚಿತ್ರ ಸಂಕ್ರಾಂತಿ ರೇಸ್‌ನಲ್ಲಿ ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ಹೊರಹೊಮ್ಮಲಿದೆ ಎಂದು ಊಹಿಸಿದ್ದವರಿಗೆ ಮರುದಿನ ಬಿಡುಗಡೆಗೊಂಡ ವೀರಸಿಂಹ ರೆಡ್ಡಿ ಶಾಕ್ ಕೊಟ್ಟಿದೆ.

    ಹೌದು, ನಿನ್ನೆ ( ಜನವರಿ 12 ) ಬಿಡುಗಡೆಗೊಂಡ ನಟ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಕೂಡ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಭಾರತ ಬಾಕ್ಸ್ ಆಫೀಸ್‌ನಲ್ಲಿ ಮೊದಲನೇ ದಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ನಟನೆಯ ತುನಿವು ಚಿತ್ರಗಳು ಮಾಡಿದ್ದ ಕಲೆಕ್ಷನ್‌ಗಿಂತ ಹೆಚ್ಚು ಕಲೆಕ್ಷನ್ ಅನ್ನು ವೀರಸಿಂಹ ರೆಡ್ಡಿ ಮಾಡಿದೆ.

    ವೀರಸಿಂಹ ರೆಡ್ಡಿ ಮೊದಲ ದಿನ ಗಳಿಸಿದ್ದೆಷ್ಟು?

    ವೀರಸಿಂಹ ರೆಡ್ಡಿ ಮೊದಲ ದಿನ ಗಳಿಸಿದ್ದೆಷ್ಟು?

    ಬಾಲಯ್ಯ ನಟನೆಯ ವೀರಸಿಂಹ ರೆಡ್ಡಿ ಮೊದಲನೇ ದಿನ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 32 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಜನಪ್ರಿಯ ಬಾಕ್ಸ್ ಆಫೀಸ್ ರಿಪೋರ್ಟ್ ವೆಬ್‌ಸೈಟ್ ಆದ ಸಾಕ್‌ನಿಲ್ಕ್ ತಿಳಿಸಿದೆ. ವಿಜಯ್ ನಟನೆಯ ವಾರಿಸು ಚಿತ್ರ ಮೊದಲ ದಿನ ಭಾರತದಲ್ಲಿ 31 ಕೋಟಿ ಹಾಗೂ ಅಜಿತ್ ನಟನೆಯ ತುನಿವು ಮೊದಲ ದಿನ 28.60 ಕೋಟಿ ಗಳಿಸಿದ್ದವು. ಈ ಮೂಲಕ ವೀರಸಿಂಹ ರೆಡ್ಡಿ ಭಾರತ ಬಾಕ್ಸ್ ಆಫೀಸ್‌ನಲ್ಲಿ ವಾರಿಸು ಹಾಗೂ ತುನಿವು ಚಿತ್ರಗಳನ್ನು ಮೊದಲನೇ ದಿನ ಹಿಂದಿಕ್ಕಿದೆ.

    ಹೈದರಾಬಾದ್‌ನಲ್ಲಿ ಪುಷ್ಪಕ್ಕಿಂತ ಹೆಚ್ಚು ಗಳಿಕೆ

    ಹೈದರಾಬಾದ್‌ನಲ್ಲಿ ಪುಷ್ಪಕ್ಕಿಂತ ಹೆಚ್ಚು ಗಳಿಕೆ

    ತೆಲುಗು ಚಿತ್ರಗಳಿಗೆ ಹೆಚ್ಚಿನ ಕಲೆಕ್ಷನ್ ತಂದುಕೊಡುವ ಚಿತ್ರಮಂದಿರಗಳು ಎನಿಸಿಕೊಂಡಿರುವ ಹೈದರಾಬಾದ್‌ನ ಆರ್‌ಟಿಸಿ ಎಕ್ಸ್ ರಸ್ತೆಯ ಚಿತ್ರಮಂದಿರಗಳಲ್ಲಿ ಮೊದಲ ದಿನ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ವೀರಸಿಂಹ ರೆಡ್ಡಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರವನ್ನೇ ಹಿಂದಿಕ್ಕಿರುವುದು ವಿಶೇಷವಾಗಿದೆ. ಪುಷ್ಪ ಆರ್‌ಟಿಸಿ ಎಕ್ಸ್ ರಸ್ತೆಯಲ್ಲಿ ಮೊದಲ ದಿನ 41 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು ಹಾಗೂ ವೀರಸಿಂಹ ರೆಡ್ಡಿ ಮೊದಲ ದಿನ ಇಲ್ಲಿ 43 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನುಳಿದಂತೆ ಆರ್‌ಟಿಸಿ ಎಕ್ಸ್ ರಸ್ತೆಯ ಚಿತ್ರಮಂದಿರಗಳಲ್ಲಿ ಮೊದಲ ದಿನ ಕೆಜಿಎಫ್ ಚಾಪ್ಟರ್ 2 51 ಲಕ್ಷ ರೂಪಾಯಿ, ಸರ್ಕಾರು ವಾರಿ ಪಾಟ 54 ಲಕ್ಷ ರೂಪಾಯಿ ಹಾಗೂ ಆರ್ ಆರ್ ಆರ್ 75 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿವೆ.

    ಮೆಗಾಸ್ಟಾರ್ ಚಿತ್ರದ ಮೇಲೆ ಎಲ್ಲರ ಕಣ್ಣು!

    ಮೆಗಾಸ್ಟಾರ್ ಚಿತ್ರದ ಮೇಲೆ ಎಲ್ಲರ ಕಣ್ಣು!

    ಇನ್ನು ಸಂಕ್ರಾಂತಿ ರೇಸ್‌ನಲ್ಲಿರುವ ಸ್ಟಾರ್ ನಟರ ಚಿತ್ರಗಳ ಪೈಕಿ ಇನ್ನೂ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಮೊದಲ ದಿನ ಎಷ್ಟು ಗಳಿಸಲಿದೆ ಎಂಬ ಮಾಹಿತಿ ಹೊರಬೀಳಬೇಕಿದೆ. ಇಂದು ( ಜನವರಿ 13 ) ವಾಲ್ತೇರು ವೀರಯ್ಯ ಬಿಡುಗಡೆಗೊಂಡಿದ್ದು, ಚಿತ್ರ ಗಳಿಕೆಯಲ್ಲಿ ವಾರಿಸು, ತುನಿವು ಹಾಗೂ ವೀರಸಿಂಹ ರೆಡ್ಡಿ ಚಿತ್ರಗಳಿಗಿಂತ ಹೆಚ್ಚು ಗಳಿಸುತ್ತಾ ಅಥವಾ ಕಡಿಮೆ ಗಳಿಸಿ ಹಿನ್ನಡೆ ಅನುಭವಿಸಲಿದೆಯಾ ಎಂಬ ಕುತೂಹಲ ಮೂಡಿದೆ.

    English summary
    Simha Reddy beats Varisu and Thunivu in 1st Day Box Office Collection. Take a look.
    Friday, January 13, 2023, 10:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X