For Quick Alerts
  ALLOW NOTIFICATIONS  
  For Daily Alerts

  'ವೀರಯ್ಯ' Vs 'ವೀರಸಿಂಹ': ಸಂಕ್ರಾಂತಿ ಸಂಭ್ರಮದಲ್ಲಿ 9ನೇ ಬಾರಿ ಚಿರು- ಬಾಲಯ್ಯ ಮಧ್ಯೆ ಫೈಟ್!

  |

  ಸಂಕ್ರಾಂತಿ ಹಬ್ಬಕ್ಕೆ ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟಸಿಂಹ ಬಾಲಕೃಷ್ಣ ಎದುರುಬದಿರಾಗುತ್ತಿದ್ದಾರೆ. ಚಿರು ನಟನೆಯ 'ವಾಲ್ತೇರು ವೀರಯ್ಯ' ವರ್ಸಸ್ ಬಾಲಯ್ಯ 'ವೀರಸಿಂಹ ರೆಡ್ಡಿ' ನಡುವೆ ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಚಿರಂಜೀವಿ, ಬಾಲಕೃಷ್ಣ ಹೀಗೆ ಏಕಕಾಲಕ್ಕೆ ಥಿಯೇಟರ್‌ ಅಖಾಡಕ್ಕೆ ಇಳಿಯುತ್ತಿರುವುದು ಇದು 25ನೇ ಬಾರಿ ಅನ್ನೋದು ವಿಶೇಷ.

  ತೆಲುಗು ಚಿತ್ರರಂಗದಲ್ಲಿ ಎನ್‌ಟಿಆರ್, ಎಎನ್‌ಆರ್ ನಂತರ ಸರಿಸಮನಾಗಿ ಬೆಳೆದು ಬಂದ ಇಬ್ಬರು ಸೂಪರ್ ಸ್ಟಾರ್‌ಗಳು ಅಂದರೆ ಚಿರಂಜೀವಿ ಹಾಗೂ ಬಾಲಕೃಷ್ಣ. ನಂದಮೂರಿ ಹಾಗೂ ಮೆಗಾ ಫ್ಯಾಮಿಲಿ ನಡುವಿನ ಪೈಪೋಟಿ ಇಂದು ನೆನ್ನೆಯದಲ್ಲ. ಎರಡೂ ಫ್ಯಾಮಿಲಿ ಅಭಿಮಾನಿಗಳ ನಡುವೆ ಆಗ್ಗಾಗ್ಗೆ ವಾರ್ ನಡಿತ್ತಾನೇ ಇರುತ್ತದೆ. 'RRR' ಚಿತ್ರದಲ್ಲಿ ಚರಣ್- ಜ್ಯೂ. ಎನ್‌ಟಿಆರ್ ಒಟ್ಟಿಗೆ ನಟಿಸುವ ಮೂಲಕ ಈ ಗೊಂದಲಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಗಿತ್ತು. ಚಿರು, ಬಾಲಯ್ಯ ಫ್ಯಾಮಿಲಿ ನಡುವೆ ಆತ್ಮೀಯ ಅನುಬಂಧ ಇದ್ದರೂ ಸಿನಿಮಾಗಳ ವಿಚಾರದಲ್ಲಿ ಸ್ಟಾರ್ ವಾರ್ ಮುಂದುವರೆದಿದೆ.

  'ಸಂಕ್ರಾಂತಿ'ಯಲ್ಲಿ ನಾಲ್ವರು ಸೂಪರ್‌ಸ್ಟಾರ್‌ಗಳ ಸಿನಿಮಾ ರಿಲೀಸ್: ಟಾಲಿವುಡ್‌ನಲ್ಲಿ ಬಿಗ್ ಫೈಟ್!'ಸಂಕ್ರಾಂತಿ'ಯಲ್ಲಿ ನಾಲ್ವರು ಸೂಪರ್‌ಸ್ಟಾರ್‌ಗಳ ಸಿನಿಮಾ ರಿಲೀಸ್: ಟಾಲಿವುಡ್‌ನಲ್ಲಿ ಬಿಗ್ ಫೈಟ್!

  ಸಂಕ್ರಾಂತಿ ಹಬ್ಬಕ್ಕೆ ಟಾಲಿವುಡ್, ಕಾಲಿವುಡ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಏಕಕಾಲಕ್ಕೆ ತೆರೆಗಪ್ಪಳಿಸುತ್ತದೆ. ದೊಡ್ಡ ವೀಕೆಂಡ್ ಟಾರ್ಗೆಟ್ ಮಾಡಿ ಸಿನಿಮಾಗಳನ್ನು ರಿಲೀಸ್ ಮಾಡುತ್ತಾರೆ. ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಭಯಪಡದೇ ಸಿನಿಮಾಗಳನ್ನು ತೆರೆಗೆ ತರುತ್ತಾರೆ. ಈ ಬಾರಿ ಸುಗ್ಗಿ ಹಬ್ಬಕ್ಕೆ 9ನೇ ಬಾರಿಗೆ 'ವಾಲ್ತೇರು ವೀರಯ್ಯ' ಚಿರಂಜೀವಿಗೆ 'ವೀರಸಿಂಹ ರೆಡ್ಡಿ' ಬಾಲಯ್ಯ ಸವಾಲು ಹಾಕಲಿದ್ದಾರೆ.

  25ನೇ ಬಾರಿ ಚಿರು Vs ಬಾಲಯ್ಯ

  25ನೇ ಬಾರಿ ಚಿರು Vs ಬಾಲಯ್ಯ

  ಖಡಕ್ ಟೈಟಲ್, ಚಿರು, ಬಾಲಯ್ಯ ಲುಕ್ಕು, ಮಾಸ್ ಅಪೀಲ್‌ನಿಂದ 'ವಾಲ್ತೇರು ವೀರಯ್ಯ' ಹಾಗೂ 'ವೀರಸಿಂಹ ರೆಡ್ಡಿ' ಸಿನಿಮಾಗಳು ಸದ್ದು ಮಾಡ್ತಿವೆ. ಟೈಟಲ್‌ಗೆ ತಕ್ಕಂತೆ ಎರಡೂ ಕೂಡ ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾಗಳು. ಕೆ.ಎಸ್ ರವೀಂದ್ರ ನಿರ್ದೇಶನದ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ಚರು ಲುಂಗಿ ಉಟ್ಟು ಬೀಡಿ ಹಿಡಿದು 'ಮುಠ್ಠಾಮೇಸ್ತ್ರಿ' ದಿನಗಳನ್ನು ನೆನಪಿಸುತ್ತಿದ್ದಾರೆ. ಮತ್ತೊಂದ್ಕಡೆ ಬಾಲಕೃಷ್ಣ ಕೂಡ ಲುಂಗಿ ಉಟ್ಟು 'ವೀರಸಿಂಹ ರೆಡ್ಡಿ' ಆಗಿ ಮೀಸೆ ತಿರುವಿದ್ದಾರೆ. ಬಾಲಕೃಷ್ಣ ಲುಕ್ 'ಮಫ್ತಿ' ಚಿತ್ರದ ಭೈರತಿ ರಣಗಲ್ ಪಾತ್ರವನ್ನು ನೆನಪಿಸುತ್ತಿದೆ. ಎರಡು ಸಿನಿಮಾಗಳು ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರಲಿದೆ.

  ಜಪಾನ್‌ನಲ್ಲಿ RRR ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ದಾಖಲೆ ಅಳಿಸಿ ಹಾಕುತ್ತಾ?ಜಪಾನ್‌ನಲ್ಲಿ RRR ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ದಾಖಲೆ ಅಳಿಸಿ ಹಾಕುತ್ತಾ?

  ಸಂಕ್ರಾಂತಿಗೆ 8 ಬಾರಿ ಪೈಪೋಟಿ

  ಸಂಕ್ರಾಂತಿಗೆ 8 ಬಾರಿ ಪೈಪೋಟಿ

  ಚಿರಂಜೀವಿ ಮತ್ತು ಬಾಲಕೃಷ್ಣ ಇದುವರೆಗೆ 24 ಬಾರಿ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನಡೆಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಅವರ ಚಿತ್ರಗಳೇ ಹೆಚ್ಚು ಜನಪ್ರಿಯತೆ ಗಳಿಸಿರುವುದು ಗಮನಾರ್ಹ. ಇಬ್ಬರೂ ಎಂಟು ಬಾರಿ ಸುಗ್ಗಿ ಸಂಭ್ರಮದಲ್ಲಿ ಅಖಾಡಕ್ಕೆ ಇಳಿದಿದ್ದರು. 1987ರಲ್ಲಿ ಮೊಟ್ಟಮೊದಲ ಬಾರಿಗೆ ಸಂಕ್ರಾಂತಿ ಸಂಭ್ರಮದಲ್ಲಿ ಚಿರಂಜೀವಿ 'ದೊಂಗಮೊಗಡು' ಹಾಗೂ ಬಾಲಕೃಷ್ಣ 'ಭಾರ್ಗವರಾಮುಡು' ಚಿತ್ರಕ್ಕೆ ಸೆಡ್ಡು ಹೊಡೆದಿದ್ದರು. ಕೆಲ ಏರಿಯಾಗಳಲ್ಲಿ ಚಿರು ಗೆದ್ದರೆ ಮತ್ತೆ ಕೆಲವೆಡೆ ಬಾಲಯ್ಯ ಗೆಲುವಿನ ನಗೆ ಬೀರಿದ್ದರು. ಮರುವರ್ಷ ಚಿರಂಜೀವಿ 'ಮಂಚಿದೊಂಗ' ಆಗಿ ಬಂದರೆ 'ಇನ್‌ಸ್ಪೆಕ್ಟರ್ ಪ್ರತಾಪ್' ಆಗಿ ಬಾಲಯ್ಯ ಫೀಲ್ಡ್‌ಗೆ ಇಳಿದಿದ್ದರು. ಇಲ್ಲೂ ಸರಿಸಮ ಹೋರಾಟ ನಡೆದಿತ್ತು.

  ಹಿಟ್ಲರ್ Vs ಪೆದ್ದನ್ನಯ್ಯ

  ಹಿಟ್ಲರ್ Vs ಪೆದ್ದನ್ನಯ್ಯ

  1997ರಲ್ಲಿ 'ಹಿಟ್ಲರ್' ಆಗಿ ಚಿರಂಜೀವಿ, 'ಪೆದ್ದಣ್ಣಯ್ಯ' ಆಗಿ ಬಾಲಕೃಷ್ಣ ಎಂಟ್ರಿ ಕೊಟ್ಟಿದ್ದರು. ಎರಡೂ ದೊಡ್ಡ ಯಶಸ್ಸು ಕಂಡವು. ಚಿರಂಜೀವಿ ಅಭಿನಯದ 'ಹಿಟ್ಲರ್' ಬಹುತೇಕ ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡರೆ, ಬಾಲಕೃಷ್ಣ ಅವರ 'ಪೆದ್ದಣ್ಣಯ್ಯ' ಆ ವರ್ಷ ಸಂಕ್ರಾಂತಿಗೆ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ನಿಂತಿತು. 1999ರಲ್ಲಿ ಚಿರಂಜೀವಿ 'ಸ್ನೇಹಂಕೋಸಂ' ಮೂಲಕ ತೆರೆಗೆ ಬಂದರೆ, 'ಸಮರಸಿಂಹ ರೆಡ್ಡಿ' ಆಗಿ ಬಾಲಯ್ಯ ಸದ್ದು ಮಾಡಿದ್ದರು. ಆಗ ಬಾಲಯ್ಯ ಮೇಲುಗೈ ಸಾಧಿಸಿದ್ದರು.

  9ನೇ ಬಾರಿಯ ಕದನದಲ್ಲಿ ಗೆಲ್ಲೋದ್ಯಾರು?

  9ನೇ ಬಾರಿಯ ಕದನದಲ್ಲಿ ಗೆಲ್ಲೋದ್ಯಾರು?

  ಇನ್ನು 2000 ಇಸವಿಯಲ್ಲಿ ಚಿರಂಜೀವಿ 'ಅನ್ನಯ್ಯ' ಆಗಿ ಬಂದರೆ, ಬಾಲಕೃಷ್ಣ 'ವಂಶೋಧರಕುಡು' ಸಿನಿಮಾ ರಿಲೀಸ್ ಆಗಿತ್ತು. 'ಅನ್ನಯ್ಯ' ಮೇಲುಗೈ ಸಾಧಿಸಿತ್ತು. 2001ರಲ್ಲಿ ಬಾಲಕೃಷ್ಣ ಅಭಿನಯದ 'ನರಸಿಂಹನಾಯ್ಡು' ಚಿತ್ರದ ಎದುರು ಚಿರಂಜೀವಿ ಅಭಿನಯದ 'ಮೃಗರಾಜು' ನಿಲ್ಲಲು ಸಾಧ್ಯವಾಗಲಿಲ್ಲ. 2004ರಲ್ಲಿ ಬಾಲಕೃಷ್ಣ 'ಲಕ್ಷ್ಮೀನರಸಿಂಹ' ಜಯಭೇರಿ ಬಾರಿಸಿದರೆ ಚಿರಂಜೀವಿ 'ಅಂಜಿ'ಯಾಗಿ ನಿರಾಸೆ ಮೂಡಿಸಿದ್ದರು. 5 ವರ್ಷದ ಹಿಂದೆ ಬಾಲಕೃಷ್ಣ ತಮ್ಮ 100ನೇ ಚಿತ್ರ 'ಗೌತಮಿಪುತ್ರ ಶಾತಕರ್ಣಿ' ಮೂಲಕ ಬಂದರು, ಚಿರಂಜೀವಿ ತಮ್ಮ 150ನೇ ಚಿತ್ರ 'ಖೈದಿ ನಂ 150' ಮೂಲಕ ಕಣಕ್ಕೆ ಧುಮುಕಿದರು. ಒಂದು ಐತಿಹಾಸಿಕ ಸಿನಿಮಾ ಆಗಿದ್ದರೆ ಮತ್ತೊಂದು ಮಾಮೂಲಿ ಕಮರ್ಷಿಯಲ್ ಸಿನಿಮಾ. ಎರಡು ಸಿನಿಮಾಗಳು ಒಂದು ರೇಂಜಿಗೆ ಸಕ್ಸಸ್ ಕಂಡವು.

  English summary
  Waltair Veerayya vs veera simha reddy Chiranjeevi and Balakrishna are planning to release their films on Sankranthi. chiru And balayya fighting at box office for the 25th time and on Sakranti 9th Time. Know more.
  Wednesday, October 26, 2022, 11:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X