For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟ ವೆಂಕಟೇಶ್ ಪುತ್ರನ ಸಿನಿಮಾ?: ಮೇಕಪ್ ಮ್ಯಾನ್ ಹೇಳಿದ ಆಸಕ್ತಿಕರ ವಿಷಯ

  |

  ಸಿನಿಮಾ ನಟ-ನಟಿಯರ ಮಕ್ಕಳು ಸಹಜವಾಗಿ ಚಿತ್ರರಂಗಕ್ಕೆ ಬರ್ತಾರೆ ಎಂಬ ನಂಬಿಕೆಯಿದೆ. ಅದರಂತೆ ಹಲವು ಸ್ಟಾರ್ ನಟ, ನಟಿಯರ ಮಕ್ಕಳು ಹೀರೋಗಳಾಗಿ ಇಂಡಸ್ಟ್ರಿ ಪ್ರವೇಶಿಸಿರುವ ಉದಾಹರಣೆ ಇವೆ. ಇನ್ನು ಕೆಲವರ ವಿಚಾರಕ್ಕೆ ಬಂದ್ರೆ ಎಷ್ಟೇ ದೊಡ್ಡ ಸ್ಟಾರ್ಸ್ ಆಗಿದ್ದರು ತಮ್ಮ ಮಕ್ಕಳು ಸಿನಿ ಇಂಡಸ್ಟ್ರಿಯಲ್ಲಿ ಕಾಣಿಸಿಕೊಳ್ಳಲ್ಲ. ಅಂತಹ ಉದಾಹರಣೆಗಳು ಕಣ್ಮುಂದೆ ಇದೆ.

  ಇದೀಗ, ತೆಲುಗು ನಟ 'ವಿಕ್ಟರಿ' ವೆಂಕಟೇಶ್ ಪುತ್ರನ ಬಗ್ಗೆ ಟಾಲಿವುಡ್‌ನಲ್ಲಿ ಆಸಕ್ತಿಕರ ವಿಷಯಗಳು ಚರ್ಚೆಯಲ್ಲಿದೆ. ವೆಂಕಿಮಾಮನ ಪುತ್ರ ಶೀಘ್ರದಲ್ಲೇ ಹೀರೋ ಆಗಿ ಲಾಂಚ್ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬರ್ತಿದೆ. ಆದರೆ, ಆ ಬಗ್ಗೆ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ, ವೆಂಕಟೇಶ್ ಅವರ ಪರ್ಸನಲ್ ಮೇಕಪ್‌ ಮ್ಯಾನ್ ವೆಂಕಿ ಪುತ್ರನ ಕುರಿತು ಕೆಲವು ಆಸಕ್ತಿಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

  ಚಿತ್ರರಂಗಕ್ಕೆ ಬರುವ ಸಾಧ್ಯತೆ ಕಡಿಮೆ

  ಚಿತ್ರರಂಗಕ್ಕೆ ಬರುವ ಸಾಧ್ಯತೆ ಕಡಿಮೆ

  ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡಿರುವ ವೆಂಕಟೇಶ್ ಮೇಕಪ್ ಮ್ಯಾನ್, ''ವೆಂಕಟೇಶ್ ಅವರ ಪುತ್ರ ಅರ್ಜುನ್ ಒಳ್ಳೆಯ ಹುಡುಗ, ನಾನು ಯಾವಾಗ ನೋಡಿದ್ರು ಪುಸ್ತಕಗಳೊಂದಿಗೆ ಕಾಣಿಸ್ತಾರೆ. ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳನ್ನು ಚಿತ್ರರಂಗಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಹೊಂದಿರ್ತಾರೆ. ಅದಕ್ಕಾಗಿ ವಿಶೇಷವಾದ ಸಿನಿಮಾ ಪ್ಲಾನ್ ಮಾಡ್ತಾರೆ. ಆದರೆ, ವೆಂಕಟೇಶ್ ಮಗನ ವಿಚಾರದಲ್ಲಿ ಅಂತಹ ಬೆಳವಣಿಗೆ ಇಲ್ಲ'' ಎಂದಿದ್ದಾರೆ.

  ನಟಿ ಸೌಂದರ್ಯ ಕಾಲು ಹಿಡಿದಿದ್ದ ಘಟನೆ ನೆನಪಿಸಿಕೊಂಡ ವೆಂಕಟೇಶ್ನಟಿ ಸೌಂದರ್ಯ ಕಾಲು ಹಿಡಿದಿದ್ದ ಘಟನೆ ನೆನಪಿಸಿಕೊಂಡ ವೆಂಕಟೇಶ್

  ಸಿನಿಮಾ ಆಸಕ್ತಿ ಕಾಣ್ತಿಲ್ಲ

  ಸಿನಿಮಾ ಆಸಕ್ತಿ ಕಾಣ್ತಿಲ್ಲ

  ವೆಂಕಟೇಶ್ ಪುತ್ರ ಅರ್ಜುನ್ ಚಿತ್ರರಂಗ ಪ್ರವೇಶ ಸದ್ಯಕ್ಕೆ ಅನುಮಾನವಾಗಿದೆ. ಪ್ರಸ್ತುತ, ಅದಕ್ಕೆ ಸಂಬಂಧಿಸಿದಂತೆ ಯಾವ ತಯಾರಿಯೂ ನಡೆದಿಲ್ಲ ಎಂದು ತಿಳಿದು ಬಂದಿದೆ. ''ಅರ್ಜುನ್‌ಗೆ ಸಿನಿಮಾ ಮೇಲೆ ಆಸಕ್ತಿ ಇದ್ದಿದ್ದರೆ ಇಷ್ಟೊತ್ತಿಗಾಲೇ ಡೆಬ್ಯೂ ಮಾಡ್ತಿದ್ದರು. ಆದರೆ, ಅವರಿಗೆ ಚಿತ್ರರಂಗದಲ್ಲಿ ಆಸಕ್ತಿ ಇಲ್ಲದಿರಬಹುದು. ಈ ವಿಷಯದಲ್ಲಿ ನಾನು ಸಹ ಗೊಂದಲದಲ್ಲಿದ್ದೇನೆ'' ಎಂದು ಮೇಕಪ್ ಮ್ಯಾನ್ ಹೇಳಿಕೊಂಡಿದ್ದಾರೆ.

  ಓದು ಮುಗಿದ ನಂತರ ನೋಡಬೇಕು

  ಓದು ಮುಗಿದ ನಂತರ ನೋಡಬೇಕು

  ''ಒಂದು ವೇಳೆ ಅರ್ಜುನ್ ವೆಂಕಟೇಶ್‌ಗೆ ನಟಿಸಬೇಕು ಎನ್ನುವ ಆಸಕ್ತಿ ಇದ್ದರೆ, ಓದಿದ ನಂತರ ಚಿತ್ರರಂಗಕ್ಕೆ ಬರಬಹುದು. ಆಗ ಅವರಿಗೆ ಅವಕಾಶ ಇದೆ ಎಂದಿದ್ದಾರೆ. ಅರ್ಜುನ್ ಬಹಳ ಬುದ್ದಿವಂತ ಹುಡುಗ, ಯಾವುದೇ ವಿಷಯದಲ್ಲೂ ಬಹಳ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಷ್ಟು ಬೆಳೆದಿದ್ದಾರೆ'' ಎಂದು ತಿಳಿಸಿದ್ದಾರೆ.

  ನಾರಪ್ಪ ಬಿಡುಗಡೆ

  ನಾರಪ್ಪ ಬಿಡುಗಡೆ

  'ವಿಕ್ಟರಿ' ವೆಂಕಟೇಶ್ ಅಭಿನಯದ 'ನಾರಪ್ಪ' ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದಾದ ಬಳಿಕ 'ಎಫ್‌3' ಸಿನಿಮಾದಲ್ಲಿ ವರುಣ್ ತೇಜ್ ಜೊತೆ ನಟಿಸುತ್ತಿದ್ದಾರೆ.

  English summary
  Telugu actor Venkatesh personal make up man raghava talked about Venky son Arjun's debut plan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X