Don't Miss!
- Technology
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
- News
Breaking: ಸ್ವತಃ ಪೊಲೀಸ್ ಠಾಣೆಗೆ ತೆರಳಿ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ ಡಿಕೆಶಿ, ಸಿದ್ದು- ಅಂತದ್ದೇನಿದೆ ದೂರಿನಲ್ಲಿ?
- Sports
ICC Ranking: ಏಕದಿನ ಕ್ರಿಕೆಟ್ನಲ್ಲಿ ಮೊಹಮ್ಮದ್ ಸಿರಾಜ್ ಈಗ ನಂಬರ್ 1 ಬೌಲರ್
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Automobiles
ಧೂಳೆಬ್ಬಿಸಲು ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್: ಬೆಲೆ...
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗನ್ ಹಿಡ್ದು 'ಸೈಂಧವ'ನಾಗಿ ಕನ್ನಡಕ್ಕೂ ಬರ್ತಿದ್ದಾರೆ ವಿಕ್ಟರಿ ವೆಂಕಟೇಶ್
ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 'ಸೈಂಧವ್' ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ವೆಂಕಿ ಸಿನಿಮಾಗಳು ಅಷ್ಟಾಗಿ ಸೌಂಡ್ ಮಾಡ್ತಿದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಹಾಗಾಗಿ ವೆಂಕಟೇಶ್ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ.
'ನಾರಪ್ಪ', 'ದೃಶ್ಯಂ- 2', 'ಎಫ್3' ನಂತರ ವಿಕ್ಟರಿ ವೆಂಕಟೇಶ್ 'ಸೈಂಧವ್' ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. 'ಹಿಟ್' ಹಾಗೂ 'ಹಿಟ್- 2' ಸಿನಿಮಾಗಳನ್ನು ನಿರ್ದೇಶಿಸಿದ ಶೈಲೇಶ್ ಕೊಲನು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ವೆಂಕಟೇಶ್ ಸೈಂಧವ್ ಆಗಿ ದರ್ಶನ ಕೊಟ್ಟಿದ್ದಾರೆ. ಗನ್ ಹಿಡ್ದು ಅಬ್ಬರಿಸಿದ್ದಾರೆ. ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ವೆಂಕಿ ಈ ಸಲ ರೂಟ್ ಬದಲಿಸಿದ್ದಾರೆ. ರಾ ಅಂಡ್ ರಸ್ಟಿಕ್ ಆಕ್ಷನ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಟೈಟಲ್ ಜೊತೆ ಚಿತ್ರದ ಸಣ್ಣ ಗ್ಲಿಂಪ್ಸ್ ರಿಲೀಸ್ ಆಗಿದೆ.
ಅಕ್ಕಿನೇನಿ
ಕುಟುಂಬಕ್ಕೆ
ಬಾಲಕೃಷ್ಣ
ಅಪಮಾನ:
ಕುಟುಕಿದ
ಅಕ್ಕಿನೇನಿ
ಕುಡಿಗಳು
ಟಾಲಿವುಡ್ ಸೀರಿಯರ್ ಹೀರೊಗಳು ಅಂದಾಕ್ಷಣ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಕಣ್ಣಮುಂದೆ ಬರ್ತಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಚಿರು- ಬಾಲಯ್ಯ ಬಾಕ್ಸಾಫೀಸ್ ಶೇಕ್ ಮಾಡಿದ್ದರು. 'ವೀರಸಿಂಹ ರೆಡ್ಡಿ', 'ವಾಲ್ತೇರು ವೀರಯ್ಯ' ಸಿನಿಮಾಗಳು ಹಿಟ್ ಲಿಸ್ಟ್ ಸೇರ್ಕೊಂಡಿದೆ. ಈಗ ವೆಂಕಟೇಶ್ ಸರದಿ.

ಕುತೂಹಲಭರಿತ ಟೀಸರ್
ಚಂದ್ರಪ್ರಸ್ಥ ಎನ್ನುವ ಬಂದರು ನಗರಿಯಲ್ಲಿ ವೆಂಕಟೇಶ್ ನಡೆದುಕೊಂಡು ಹೋಗಿ ಬೈಕ್ ಮೇಲೆ ಇರುವ ಒಂದು ಬಾಕ್ಸ್ ಓಪನ್ ಮಾಡುತ್ತಾರೆ. ಅದರಲ್ಲಿ ಮೆಡಿಸಿನ್ ವೈಲ್ ಇರುತ್ತೆ. ಅದನ್ನು ತೆಗೆದುಕೊಂಡು ಕಂಟೇನರ್ ಒಳಗೆ ಹೋದ ವೆಂಕಿ ಒಂದು ಗನ್ ಹಿಡ್ದು ಹೊರಗೆ ಬರ್ತಾರೆ. ಎದುರಿಗೆ ಬಿದ್ದು ಒದ್ದಾಡುತ್ತಿರುವ ಪುಂಡರನ್ನು ನೋಡಿ "ನಾನು ಇಲ್ಲೇ ಇರ್ತೀನಿ, ಎಲ್ಲೂ ಹೋಗಲ್ಲ, ಬರೋಕೆ ಹೇಳು" ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಟೀಸರ್ ಬಿಜಿಎಂ, ಹೀರೊ ಪ್ರಸೆಂಟೇಷನ್ ಚೆನ್ನಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

5 ಭಾಷೆಗಳಲ್ಲಿ 'ಸೈಂಧವ್' ಚಿತ್ರ ತೆರೆಗೆ
ಮೊದಲ ನೋಟದಲ್ಲೇ 'ಸೈಂಧವ್' ಟೀಸರ್ ಅಭಿಮಾನಿಗಳ ಮನ ಗೆದ್ದಿದೆ. ಇದು ವೆಂಕಿ 75ನೇ ಸಿನಿಮಾ ಎನ್ನುವುದು ವಿಶೇಷ. ಈ ಮೈಲಿಗಲ್ಲು ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲಾಗ್ತಿದೆ. ತೆಲುಗಿನ ಜೊತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ನಿಹಾರಿಕಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟೇಶ್ ಬೋಯನಪಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹಳ ದಿನಗಳ ನಂತರ ವೆಂಕಟೇಶ್ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

'ಹಿಟ್- 3' ಪಕ್ಕಕ್ಕಿಟ್ಟ ನಿರ್ದೇಶಕ
'ಹಿಟ್' ಸರಣಿ ಸಿನಿಮಾಗಳ ಮೂಲಕ ನಿರ್ದೇಶಕ ಶೈಲೇಶ್ ಕೊಲನು ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. 'ಹಿಟ್' -2 ಸಕ್ಸಸ್ ಬೆನ್ನಲ್ಲೇ ನಾನಿ ಹೀರೊ ಆಗಿ 'ಹಿಟ್- 3' ಸಿನಿಮಾ ಘೋಷಿಸಿದ್ದರು. ಆದರೆ ಆ ಸಿನಿಮಾವನ್ನು ಪಕ್ಕಕ್ಕಿಟ್ಟು 'ಸೈಂಧವ್' ಚಿತ್ರಕ್ಕೆ ಕೈ ಹಾಕಿದ್ದಾರೆ. 'ವಿಕ್ರಂ' ಚಿತ್ರದಲ್ಲಿ ಕಮಲ್ ಗನ್ ಹಿಡ್ದು ಕಾಣಿಸಿಕೊಂಡಂತೆ ಇಲ್ಲಿ ವೆಂಕಿ ದರ್ಶನ ಕೊಟ್ಟಿದ್ದಾರೆ. ಕೆಲವರು 'ಸೈಂಧವ್' ಟಾಲಿವುಡ್ 'ವಿಕ್ರಂ' ಎನ್ನುವಂತೆ ಮಾತನಾಡುತ್ತಿದ್ದಾರೆ.

ಮುಂದಿನ ವರ್ಷ 'ಸೈಂಧವ್' ಅಬ್ಬರ
ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಂಡವಾಳ ಹೂಡಲು ನಿರ್ಮಾಪಕರು ಹಿಂದೆ ಮುಂದೆ ನೋಡಲ್ಲ. ದೊಡ್ಡಮಟ್ಟದ ಮಾರ್ಕೆಟ್ ಸಿಗುವುದರಿಂದ ಹಣ ವಾಪಸ್ ಬಂದೇ ಬರುತ್ತದೆ ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಇನ್ನು ಓಟಿಟಿ, ಡಿಜಿಟಲ್ ರೈಟ್ಸ್‌ಗೂ ಡಿಮ್ಯಾಂಡ್ ಬರುತ್ತದೆ. 'ಸೈಂಧವ್' ಚಿತ್ರವನ್ನು ಕೂಡ ಬಹಳ ದೊಡ್ಡಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಖ್ಯಾತ ನಟ, ನಟಿಯರು ಚಿತ್ರದ ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.