For Quick Alerts
  ALLOW NOTIFICATIONS  
  For Daily Alerts

  ಸಮಂತಾ ಟಾಕ್ ಶೋನಲ್ಲಿ ಮದುವೆ ಬಗ್ಗೆ ನಿಜ ಬಿಚ್ಚಿಟ್ಟ ವಿಜಯ್ ದೇವರಕೊಂಡ

  |

  ನಾಗಾರ್ಜುನ ಅಲಭ್ಯತೆ ಕಾರಣ ಬಿಗ್ ಬಾಸ್ ನಿರೂಪಣೆ ಮಾಡಿಕೊಟ್ಟಿದ್ದ ಸಮಂತಾ ಅಕ್ಕಿನೇನಿ ಈಗ ಟಾಕ್ ಶೋ ಆರಂಭಿಸಿದ್ದಾರೆ. ಹಲವು ತಿಂಗಳಿನಿಂದ ಸಮಂತಾ ಟಾಕ್ ಶೋ ಬಗ್ಗೆ ಸುದ್ದಿಗಳು ಕೇಳಿ ಬರುತ್ತಲೇ ಇದ್ದವು. ಕೊನೆಗೂ 'ಸ್ಯಾಮ್ ಜಾಮ್' (Sam Jam) ಹೆಸರಿನಲ್ಲಿ ಕಾರ್ಯಕ್ರಮ ಆರಂಭವಾಗುತ್ತಿದೆ.

  ಸಮಂತಾ ಅವರ ಈ ಟಾಕ್‌ ಶೋನಲ್ಲಿ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈಗಾಗಲೇ ಕೆಲವು ಎಪಿಸೋಡ್‌ಗಳು ಸಹ ರೆಕಾರ್ಡಿಂಗ್ ಆಗಿದೆ. ಈಗ ವಿಜಯ್ ದೇವರಕೊಂಡ ಅವರ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ.

  ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

  ಸಮಂತಾ ಸಾರಥ್ಯದ 'ಸ್ಯಾಮ್ ಜಾಮ್' ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅತಿಥಿಯಾಗಿ ಭಾಗವಹಿಸಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ.

  ಈ ವೇಳೆ ಮದುವೆ ವಿಚಾರವಾಗಿ ಸಾಕಷ್ಟು ಅನುಮಾನ, ಕುತೂಹಲಗಳನ್ನು ಹುಟ್ಟುಹಾಕಿರುವ ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ. ವಿಜಯ್ ಅವರಿಗೆ ಗರ್ಲ್ ಫ್ರೆಂಡ್ ಇದ್ದಾಳೆ ಎಂಬ ಸುದ್ದಿ ಒಂದೆಡೆಯಾದರೆ, ಸೀಕ್ರೆಟ್ ಆಗಿ ಮದುವೆ ಸಹ ಆಗಿದ್ದಾರೆ ಎಂಬ ಸುದ್ದಿಯೂ ಸದ್ದು ಮಾಡಿತ್ತು.

  ಇದೆಲ್ಲದಕ್ಕೂ ವಿಜಯ್ ದೇವರಕೊಂಡ ಬ್ರೇಕ್ ಹಾಕಿದ್ದಾರೆ. ''ನಾನು ಇನ್ನು ಮದುವೆ ಆಗಿಲ್ಲ, ಸಿಂಗಲ್'' ಎಂದು ದೇವರಕೊಂಡ ಹೇಳಿದ್ದಾರೆ. ಇದು ಪ್ರೋಮೋದಲ್ಲಿದೆ. ಅರ್ಜುನ್ ರೆಡ್ಡಿಯ ಈ ಮಾತು ಕೇಳಿ ಅದೇಷ್ಟೋ ಯುವತಿಯರ ಹೃದಯಬಡಿತ ಹೆಚ್ಚಾಗಿರುತ್ತದೆ.

  ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 13ನೇ ತಾರೀಖು ಸಮಂತಾ ಅವರ ಸ್ಯಾಮ್ ಜಾಮ್ ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರವಾಗಲಿದೆ.

  ವಿಜಯ್ ದೇವರಕೊಂಡ ಪ್ರಸ್ತುತ ಪೂರಿ ಜಗನ್ನಾಥ್ ಜೊತೆ ಫೈಟರ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ಒಂದು ಸಿನಿಮಾಗೆ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ ಬಿಟೌನ್ ಪ್ರವೇಶಿಸಲಿದ್ದಾರೆ. ವಿಘ್ನೆಶ್ ಶಿವಾನ್ ನಿರ್ದೇಶನದ ವಿಜಯ್ ಸೇತುಪತಿ, ನಯನತಾರಾ ನಟಿಸುತ್ತಿರುವ ಚಿತ್ರದಲ್ಲಿ ಸಮಂತಾ ಸಹ ಕಾಣಿಸಿಕೊಳ್ಳಲಿದ್ದಾರೆ.

  English summary
  Telugu actor Vijay Devarakonda reveals that He is still Single with Samantha akkineni new talk show 'Sam Jam'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X