Don't Miss!
- News
ಓಲಾದಲ್ಲಿ ಎಸಿಯಿಲ್ಲ ಎಂದು 15,000 ಪರಿಹಾರ ಪಡೆದ ಬೆಂಗಳೂರಿನ ಉದ್ಯಮಿ, ವಿವರಗಳು
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್ಪೋರ್ಟ್ ನಲ್ಲಿ ಜಾರಿದ ವಿಜಯ್ ದೇವರಕೊಂಡ: ನೆಟ್ಟಿಗರಿಂದ ಸಖತ್ ಟ್ರೋಲ್
ಟಾಲಿವುಡ್ ನ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಸದಾ ಸುದ್ದಿಯಲ್ಲಿ ಇರುತ್ತಾರೆ. ಸಿನಿಮಾ ವಿಚಾರಗಳ ಜೊತೆಗೆ ಖಾಸಗಿ ವಿಚಾರವಾಗಿಯೂ ವಿಜಯ್ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿಗೆ ಮುಂಬೈಗೆ ತೆರಳಿದ್ದ ವಿಜಯ್ ಏರ್ಪೋಟ್ ನಲ್ಲಿ ಎಡವಿ ಬಿದ್ದಿದ್ದಾರೆ. ವಿಜಯ್ ದೇವರಕೊಂಡ ಜಾರಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವರ್ಲ್ಡ್ ಫೇಮಸ್ ಲವ್ ಸ್ಟೋರಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ವಿಜಯ್ ಸದ್ಯ ಫೈಟರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಫೈಟರ್ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರೀಕರಣಕ್ಕೆಂದು ವಿಜಯ್ ಮುಂಬೈಗೆ ತೆರಳಿದ್ದರು. ಚಿತ್ರೀಕರಣ ಮುಗಿಸಿ ಬರುತ್ತಿದ್ದ ವಿಜಯ್ ಜಾರಿದ್ದಾರೆ. ಮುಂದೆ ಓದಿ..
ಸಹನಟಿಯನ್ನು
ಅಸಭ್ಯವಾಗಿ
ತಬ್ಬಿಕೊಂಡ
ವಿಜಯ್
ದೇವರಕೊಂಡ:
ನೆಟ್ಟಿಗರಿಂದ
ಕ್ಲಾಸ್

ಮುಂಬೈನಲ್ಲಿ ಜಾರಿದ ವಿಜಯ್
ವಿಜಯ್ ದೇವರಕೊಂಡ ಫೈಟರ್ ಚಿತ್ರದ ಚಿತ್ರೀಕರಣಕ್ಕೆಂದು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಇತ್ತೀಚಿಗೆ ಏರ್ಪೋಟ್ ನಿಂದ ಹೊರಬಂದ ವಿಜಯ್ ನಡೆದುಕೊಂಡು ಬರುತ್ತಿರುವಾಗ ವಿಜಯ್ ಜಾರಿಬಿದ್ದಿದ್ದಾರೆ. ವಿಜಯ್ ಬೀಳುತ್ತಿದ್ದಂತೆ ಪಕ್ಕದಲ್ಲಿ ಇದ್ದರು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನೆಟ್ಟಿಗರ ಟ್ರೋಲ್
ವಿಜಯ್ ಬಿದ್ದಿರುವ ವಿಡಿಯೋ ನೋಡಿ ಅನೇಕರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. "ನಟಿ ಅನನ್ಯಾ ಪಾಂಡೆ ಜೊತೆ ಕೆಲಸ ಮಾಡಿದ ಪರಿಣಾಮ" ಎಂದು ಹೇಳುತ್ತಿದ್ದಾರೆ. "ಅನನ್ಯಾ ಪಾಂಡೆ ನೋಡಿ ವಿಜಯ್ ಜಾರಿ ಬಿದ್ದಾರೆ", "ಪ್ರೀತಿಯಲ್ಲಿ ಬಿದ್ದಾಗ ನಿಮ್ಮ ಸ್ನೇಹಿತರು ಎತ್ತುತ್ತಾರೆ". ಎಂದೆಲ್ಲ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಮದುವೆ
ಬಗ್ಗೆ
ಕೇಳಿದ್ದಕ್ಕೆ
'ಲವ್'
ವಿಚಾರ
ಬಾಯ್ಬಿಟ್ಟ
ವಿಜಯ್
ದೇವರಕೊಂಡ

ಅನನ್ಯಾ ತಬ್ಬಿಕೊಂಡು ಟ್ರೋಲ್ ಆಗಿದ್ದ ವಿಜಯ್
ಕುರ್ಚಿಯ ಮೇಲೆ ಕುಳಿತಿರುವ ವಿಜಯ್ ದೇವರ್‌ಕೊಂಡ, ಶಾರ್ಟ್ ಟಿ-ಶರ್ಟ್ ಧರಿಸಿ ಸೊಂಟದ ಪ್ರದರ್ಶನ ಮಾಡುತ್ತಿರುವ ಅನನ್ಯಾರ ನಡುವನ್ನೇ ತಬ್ಬಿಕೊಂಡಿದ್ದಾರೆ. ಈ ಚಿತ್ರ ಭಾರಿ ವೈರಲ್ ಆಗಿದೆ. ವಿಜಯ್ ದೇವರಕೊಂಡ ತಬ್ಬಿಕೊಂಡಿದ್ದಕ್ಕೆ ಅನನ್ಯಾ ಪಾಂಡೆ ಮುಜುಗರ ಅನುಭವಿಸುತ್ತಿರುವ ಭಾವ ಚಿತ್ರದಲ್ಲಿ ಕಾಣುತ್ತಿದೆ.
'ವರ್ಲ್ಡ್
ಫೇಮಸ್
ಲವರ್'
ಸೋಲು,
ನಷ್ಟ
ಭರಿಸುವಂತೆ
ನಿರ್ಮಾಪಕ
ಬೇಡಿಕೆ
|
ಫೈಟರ್ ಸಿನಿಮಾದಲ್ಲಿ ವಿಜಯ್
ವಿಜಯ್ ದೇವರಕೊಂಡ ಸದ್ಯ ಫೈಟರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ ಸುಂದರಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಅನನ್ಯಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.