twitter
    For Quick Alerts
    ALLOW NOTIFICATIONS  
    For Daily Alerts

    ಭಾನುವಾರ ಬಾಕ್ಸಾಫೀಸ್‌ನಲ್ಲಿ ಪಾತಾಳಕ್ಕೆ ಕುಸಿದ 'ಲೈಗರ್': ಫಸ್ಟ್ ವೀಕೆಂಡ್ ಗಳಿಕೆ ಎಷ್ಟು ಕೋಟಿ?

    |

    ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಫಸ್ಟ್ ವೀಕೆಂಡ್ ಕಲೆಕ್ಷನ್ ರಿಪೋರ್ಟ್ ಬಂದಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕುಸಿಯುತ್ತಲೇ ಸಾಗಿದೆ. ಲಾಂಗ್‌ ವೀಕೆಂಡ್ ಪ್ಲ್ಯಾನ್ ಮಾಡಿ ಸಿನಿಮಾ ರಿಲೀಸ್ ಮಾಡಿದ್ದರು ಪ್ರಯೋಜನವಾಗಲಿಲ್ಲ. ಭಾನುವಾರ ಅಂತೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತೀರ ಕಳಪೆ ಸಾಧನೆ ಮಾಡಿದೆ. ಫಸ್ಟ್‌ ವೀಕೆಂಡ್‌ನಲ್ಲಿ ಸಿನಿಮಾ 50.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ.

    ಪುರಿ ಜಗನ್ನಾಥ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಲೈಗರ್'. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೋಡಿಯಾಗಿ ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿದ್ದಾರೆ. ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್, ರಮ್ಯಾಕೃಷ್ಣ ಚಿತ್ರದ ತಾರಾಗಣದಲ್ಲಿದ್ದಾರೆ. ಗುರುವಾರ ಮಾರ್ನಿಂಗ್‌ ಶೋನಿಂದಲೇ ಚಿತ್ರದ ಬಗ್ಗೆ ನೆಗೆಟಿವ್ ಟಾಕ್ ಬಂತು. ಸಿನಿಮಾ ನೋಡಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಬೇರಸ ವ್ಯಕ್ತಪಡಿಸಿದ್ದರು. ಪರಿಣಾಮನ ಪ್ರೇಕ್ಷಕರು ಥಿಯೇಟರ್‌ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಗುರುವಾರ 33 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ ಶುಕ್ರವಾರ, ಶನಿವಾರ ಪರವಾಗಿಲ್ಲ ಅನ್ನಿಸಿಕೊಂಡರೂ ಭಾನುವಾರ ಕಲೆಕ್ಷನ್ ತೀರ ಡಲ್ಲಾಗಿದೆ.

    'ಅನಕೊಂಡ' ಎಂದಿದ್ದ ಥಿಯೇಟರ್ ಭೇಟಿಯಾದ ವಿಜಯ್ ದೇವರಕೊಂಡ!'ಅನಕೊಂಡ' ಎಂದಿದ್ದ ಥಿಯೇಟರ್ ಭೇಟಿಯಾದ ವಿಜಯ್ ದೇವರಕೊಂಡ!

    ಯಾವುದೇ ಸಿನಿಮಾ ರಿಲೀಸ್ ಆದರೂ ಮೊದಲ ಭಾನುವಾರ ಬಹಳ ನಿರ್ಣಾಯಕ. ಯಾಕಂದರೆ ಭಾನುವಾರ ರಜೆ ಇರುತ್ತದೆ. ಪ್ರೇಕ್ಷಕರು ಸಿನಿಮಾ ನೋಡಲು ಥಿಯೇಟರ್‌ಗೆ ಬಂದೇ ಬರುತ್ತಾರೆ. ಆದರೆ 'ಲೈಗರ್' ಸಿನಿಮಾ ಭಾನುವಾರ ಬಾಕ್ಸಾಫೀಸ್‌ನಲ್ಲಿ ಕೈ ಕೊಟ್ಟಿದೆ. ಮೊದಲ 3 ದಿನಗಳಿಗಿಂತ ಭಾನುವಾರದ ಕಲೆಕ್ಷನ್ ಕಮ್ಮಿ ಆಗಿದೆ. ರಜಾ ದಿನವೇ ಪರಿಸ್ಥಿತಿ ಹೀಗಾದರೆ ವಾರದ ದಿನಗಳಲ್ಲಿ ಸಿನಿಮಾ ಗೆಲ್ಲುವುದು ಕಷ್ಟ ಇದೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಸಿನಿಮಾ ನಷ್ಟದ ಕಡೆ ಮುಖ ಮಾಡಿದೆ.

    ಫಸ್ಟ್ ವೀಕೆಂಡ್ ಗಳಿಕೆ 50.50 ಕೋಟಿ ರೂ.

    ಫಸ್ಟ್ ವೀಕೆಂಡ್ ಗಳಿಕೆ 50.50 ಕೋಟಿ ರೂ.

    ಬಿಡುಗಡೆಗೂ ಮೊದಲು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ 'ಲೈಗರ್' ಸಿನಿಮಾ 2500 ಸ್ಕ್ರೀನ್‌ಗಳಲ್ಲಿ ಪ್ರೇಕ್ಷರ ಮುಂದೆ ಬಂದಿತ್ತು. ಅಡ್ವಾನ್ಸ್ ಬುಕ್ಕಿಂಗ್ ಹಾಗೂ ಹೈಪ್ ಕಾರಣಕ್ಕೆ ಫಸ್ಟ್ ಡೇ 33 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದೀಗ ಮೊದಲ ನಾಲ್ಕು ದಿನಗಳ ಕಲೆಕ್ಷನ್ ರಿಪೋರ್ಟ್ ಸಿಕ್ಕಿದ್ದು, ಸಿನಿಮಾ ಅಂದಾಜು 50.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಆ ಮೂಲಕ 24.41 ಕೋಟಿ ರೂ. ಶೇರ್ ದೊರಕಿದೆ.

    ಎರಡನೇ ದಿನಕ್ಕೆ ಮಕಾಡೆ ಮಲಗಿದ 'ಲೈಗರ್' ಶುಕ್ರವಾರ ಗಳಿಸಿದ್ದೆಷ್ಟು?ಎರಡನೇ ದಿನಕ್ಕೆ ಮಕಾಡೆ ಮಲಗಿದ 'ಲೈಗರ್' ಶುಕ್ರವಾರ ಗಳಿಸಿದ್ದೆಷ್ಟು?

    ಆಂಧ್ರ- ತೆಲಂಗಾಣದಲ್ಲಿ ಹಿನ್ನಡೆ

    ಆಂಧ್ರ- ತೆಲಂಗಾಣದಲ್ಲಿ ಹಿನ್ನಡೆ

    ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಲೈಗರ್' ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಆಂಧ್ರ- ತೆಲಂಗಾಣದಲ್ಲೇ ವಿಜಯ್ ದೇವರಕೊಂಡ ಚಿತ್ರಕ್ಕೆ ಹಿನ್ನಡೆಯಾಗಿದೆ. ತೆಲುಗು ರಾಜ್ಯಗಳಲ್ಲಿ ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ 21.45 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದರೆ, 12.66 ಕೋಟಿ ರೂ. ಶೇರ್ ಬಂದಂತಾಗಿದೆ. ಭಾನುವಾರ ಆಂಧ್ರ- ತೆಲಂಗಾಣದಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ(ಆಗಸ್ಟ್ 28) ಸಂಜೆ ಭಾರತ- ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಕೂಡ ಇದ್ದಿದ್ದರಿಂದ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡಲಿಲ್ಲ.

    90 ಕೋಟಿ ಟಾರ್ಗೆಟ್‌ ರೀಚ್ ಆಗುತ್ತಾ ?

    90 ಕೋಟಿ ಟಾರ್ಗೆಟ್‌ ರೀಚ್ ಆಗುತ್ತಾ ?

    ನಿರೀಕ್ಷೆಗೆ ತಕ್ಕಂತೆ 'ಲೈಗರ್' ಸಿನಿಮಾ ಪ್ರೀರಿಲೀಸ್ ಬ್ಯುಸಿನೆಸ್ ನಡೆದಿತ್ತು. ಟ್ರೇಡ್ ವರ್ಗಗಳ ಪ್ರಕಾರ 90 ಕೋಟಿ ರೂ. ವರೆಗೂ ಬ್ಯುಸಿನೆಸ್ ಆಗಿತ್ತು ಎನ್ನಲಾಗ್ತಿದೆ. ಅದೇ ನಿಜವಾಗಿದ್ದರೆ ಗೆಲುವಿನ ದಡ ಸೇರಲು 'ಲೈಗರ್' ಸಿನಿಮಾ ಇನ್ನು 55 ಕೋಟಿ ಕಲೆಕ್ಷನ್ ಮಾಡಬೇಕಿದೆ. ಆದರೆ ಭಾನುವಾರ ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡುತ್ತಿದ್ದರೆ ವೀಕ್‌ಡೇಸ್‌ನಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬರೋದು ಕಷ್ಟ. ಪರಿಸ್ಥಿತಿ ಹೀಗೆ ಮುಂದುವರೆದರೆ ನಿರ್ಮಾಪಕರು ಭಾರೀ ನಷ್ಟ ಎದುರಿಸಬೇಕಾಗುತ್ತದೆ.

    ಸೆಪ್ಟೆಂಬರ್ 30ಕ್ಕೆ ಓಟಿಟಿಯಲ್ಲಿ 'ಲೈಗರ್'

    ಸೆಪ್ಟೆಂಬರ್ 30ಕ್ಕೆ ಓಟಿಟಿಯಲ್ಲಿ 'ಲೈಗರ್'

    ನೆಗೆಟಿವ್ ಟಾಕ್‌ನಿಂದ 'ಲೈಗರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಈ ನಡುವೆ ಸಿನಿಮಾ ಶೀಘ್ರದಲ್ಲೇ ಓಟಿಟಿಗೆ ಬರುತ್ತದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಡಿಸ್ನಿ ಪ್ಲಸ್ ಹಾಟ್‌ ಸ್ಟಾರ್‌ನಲ್ಲಿ ಸೆಪ್ಟೆಂಬರ್ 30ಕ್ಕೆ 'ಲೈಗರ್' ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗುತ್ತದೆ. ಯಾವುದೇ ಸಿನಿಮಾ ಆದರೂ 6 ವಾರಗಳ ನಂತರ ಓಟಿಟಿಗೆ ಬರೋದು ಕಾಮನ್. ಪುರಿ ಜಗನ್ನಾಥ್- ವಿಜಯ್ ದೇವರಕೊಂಡ ಜೋಡಿಯ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕೂಡ ಆದಷ್ಟು ಬೇಗ ಸ್ಮಾಲ್‌ ಸ್ಕ್ರೀನ್‌ಗೆ ಎಂಟ್ರಿ ಕೊಡಲಿದೆ.

    Recommended Video

    Chiyaan Vikram in Bangalore | ಅಭಿಮಾನಿಗಳನ್ನು ನೋಡಿ ಫಿದಾ ಆದ್ರು ವಿಕ್ರಮ್ | Cobra

    English summary
    Vijay Devarakonda Starrer Liger Movie First Weekend Collection With Negative Talk. Know More.
    Monday, August 29, 2022, 15:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X