Just In
Don't Miss!
- News
ಬೆಂಗಳೂರಿನಲ್ಲಿ 10 ದಿನದಲ್ಲಿ ಕೊರೊನಾ ಏರಿಕೆ; 9 ಕಂಟೇನ್ಮೆಂಟ್ ಝೋನ್ ಘೋಷಣೆ
- Finance
ಫಾಸ್ಟ್ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ
- Automobiles
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಪೆಟ್ರೋಲಿಯಂ ಸಚಿವ
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೈಕ್ ಹತ್ತಿ ಊರು ಸುತ್ತುತ್ತಿರುವ ಈ ಸ್ಟಾರ್ ನಟ-ನಟಿಯನ್ನು ಗುರುತಿಸಬಲ್ಲಿರಾ?
ಸ್ಟಾರ್ ನಟ-ನಟಿಯರ ದೊಡ್ಡ ಸಮಸ್ಯೆಯೆಂದರೆ ಅವರು ಸಾಮಾನ್ಯ ಜೀವನ ಬದುಕಲು ಸಾಧ್ಯವಿಲ್ಲ. ಹೋಟೆಲ್‌ಗೆ ಹೋಗುವಂತಿಲ್ಲ, ಚಿತ್ರಮಂದಿರಗಳಿಗೆ ಹೋಗುವಂತಿಲ್ಲ, ಅಕಸ್ಮಾತ್ ಹೋದರು ಮುಖ ಮುಚ್ಚಿಕೊಂಡು ಹೋಗಬೇಕು.
ಆದರೆ ಹಲವು ಮಂದಿ ನಟ-ನಟಿಯರು ಸಾಮಾನ್ಯರಂತೆ ಬದುಕಲು ಆಗಾಗ್ಗೆ ಯತ್ನಿಸುತ್ತಿರುತ್ತಾರೆ, ಮುಖ ಮುಚ್ಚಿಕೊಂಡು ಓಡಾಡುವುದು, ಇಷ್ಟದ ಬೀದಿ ಬದಿ ಹೋಟೆಲ್ ಗೆ ಹೋಗುವುದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಕ್ಕೆ ನುಗ್ಗಿ ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡುವುದು ಮಾಡುತ್ತಲೇ ಇರುತ್ತಾರೆ.
ಇದೀಗ ಇಬ್ಬರು ಸ್ಟಾರ್ ನಟ-ನಟಿಯರು ಸ್ಕೂಟಿ ಹತ್ತಿ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಈ ಇಬ್ಬರು ನಟ-ನಟಿಯರು ಸ್ಕೂಟಿ ರೈಡ್ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ನೀವು ಈ ನಟ-ನಟಿಯನ್ನು ಗುರುತಿಸಬಲ್ಲಿರಾ ನೋಡಿ?

ಜಾಲಿ ರೈಡ್ ಹೋಗುತ್ತಿರುವುದು ಯಾರು?
ಸ್ಕೂಟಿ ಹತ್ತಿ ಜಾಲಿ ರೈಡ್ ಹೋಗುತ್ತಿರುವುದು ಮತ್ತಾರೂ ಅಲ್ಲ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ, ಸ್ಕೂಟಿ ಚಲಾಯಿಸುತ್ತಿರುವುದು ಒಂದು ಕಾಲದ ಸ್ಟಾರ್ ನಟಿ ಚಾರ್ಮಿ. ಇಬ್ಬರೂ ಹೀಗೆ ಸ್ಕೂಟಿ ಹತ್ತಿ ಮುಂಬೈ ನಗರದ ಪ್ರದಕ್ಷಿಣೆ ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಚಾರ್ಮಿ
ಈ ಫೊಟೊಗಳನ್ನು ಚಾರ್ಮಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ವಿಜಯ್ ದೇವರಕೊಂಡ ಗೆ ನನ್ನ ಬೈಕ್ ರೈಡ್ ಬಗ್ಗೆ ಸಾಕಷ್ಟು ವಿಶ್ವಾಸವಿದೆ. ಶೂಟಿಂಗ್ ಬಿಡುವಿನ ವೇಳೆ ಮುಂಬೈನಲ್ಲಿ ಸುತ್ತಾಡಿಕೊಂಡು ಬಂದೆವು' ಎಂದು ಹೇಳಿದ್ದಾರೆ ನಟಿ ಚಾರ್ಮಿ.

ಲೈಗರ್ ಸಿನಿಮಾ ಚಿತ್ರೀಕರಣದಲ್ಲಿ ಚಾರ್ಮಿ-ವಿಜಯ್
ಚಾರ್ಮಿ ಹಾಗೂ ವಿಜಯ್ ದೇವರಕೊಂಡ ಹೀಗೆ ಜಾಲಿ ರೈಡ್ ಮಾಡಿರುವುದು 'ಲೈಗರ್' ಸಿನಿಮಾದ ಚಿತ್ರೀಕರಣದ ವೇಳೆ ಈ ಸಿನಿಮಾದಲ್ಲಿ ಚಾರ್ಮಿ ನಟಿಸುತ್ತಿರುವ ಜೊತೆಗೆ ನಿರ್ಮಾಪಕಿಯೂ ಆಗಿದ್ದಾರೆ. ಕೊರೊನಾ ಲಾಕ್‌ಡೌನ್‌ಗೆ ಮುನ್ನವೇ ಸಿನಿಮಾ ಘೊಷಣೆ ಆಗಿತ್ತು. ಈಗ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಕರಣ್ ಜೋಹರ್ ಸಹ ಬಂಡವಾಳ ಹೂಡಿದ್ದಾರೆ
'ಲೈಗರ್' ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ ಚೆಲುವೆ ಅನನ್ಯಾ ಪಾಂಡೆ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ. ಸಿನಿಮಾದ ಕೆಲವು ರೊಮ್ಯಾಂಟಿಕ್ ಫೊಟೊಗಳು ವೈರಲ್ ಆಗಿದ್ದವು. ಈ ಸಿನಿಮಾಕ್ಕೆ ಚಾರ್ಮಿ ಜೊತೆಗೆ ಕರಣ್ ಜೋಹರ್, ಪುರಿ ಜಗನ್ನಾಥ್, ಅಪೂರ್ವಾ ಮೆಹ್ತಾ, ಯಶ್ ಜೋಹರ್ ಸಹ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಮಣಿಶರ್ಮಾ ಸಂಗೀತ ನೀಡಲಿದ್ದಾರೆ.