For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಸಿನಿಮಾ ತಡವಾಗುತ್ತಿರುವುದಕ್ಕೆ ಕಾರಣ ನೀಡಿದ ವಿಜಯ್ ದೇವರಕೊಂಡ

  |

  ವಿಜಯ್ ದೇವರಕೊಂಡ ನಟಿಸಿ ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ 'ಲೈಗರ್' ಸಿನಿಮಾ ಅಕ್ಟೋಬರ್ 09ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಚಿತ್ರೀಕರಣವೇ ಇನ್ನೂ ಮುಗಿದಿಲ್ಲ.

  ತಮ್ಮ ಸಿನಿಮಾ ತಡವಾಗುತ್ತಿರುವುದಕ್ಕೆ ಕಾರಣ ನೀಡಿರುವ ವಿಜಯ್ ದೇವರಕೊಂಡ, ಸಿನಿಮಾ ಯಾವ ಸಮಯಕ್ಕೆ ಬಿಡುಗಡೆ ಆಗಬಹುದು ಎಂಬುದನ್ನು ಸಹ ಹೇಳಿದ್ದಾರೆ.

  'ಲೈಗರ್' ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೆ 'ಗೋವಾ'ದಲ್ಲಿ ಚಿತ್ರೀಕರಣ ಮಾಡಿದೆ. ಆಕ್ಷನ್ ದೃಶ್ಯಗಳ ಚಿತ್ರೀಕರಣವನ್ನು ಲೈಗರ್ ತಂಡ ಗೋವಾದಲ್ಲಿ ಮುಗಿಸಿದೆ. ಇದೇ ಸಿನಿಮಾದ ಕೊನೆಯ ದೃಶ್ಯಗಳು ಎನ್ನಲಾಗಿತ್ತು. ಆದರೆ ವಿಜಯ್ ದೇವರಕೊಂಡ ಹೇಳಿರುವಂತೆ ಇನ್ನೂ ಕೆಲವು ವಾರಗಳ ಚಿತ್ರೀಕರಣ ಬಾಕಿ ಇದೆಯಂತೆ.


  ''ಚಿತ್ರತಂಡವು ಕೆಲವೇ ದಿನಗಳಲ್ಲಿ ಅಮೆರಿಕಕ್ಕೆ ಹಾರಲಿದೆ. ವೀಸಾಕ್ಕಾಗಿ ಕಾಯುತ್ತಿದ್ದೇವೆ. ವೀಸಾ ದೊರಕಿದೆ ಕೂಡಲೇ ಅಮೆರಿಕಕ್ಕೆ ಹಾರಿ ಅಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದೇವೆ'' ಎಂದಿದ್ದಾರೆ ವಿಜಯ್ ದೇವರಕೊಂಡ.

  ''ಮೈಕ್ ಟೈಸನ್ ಜೊತೆಗಿನ ಕೆಲವು ದೃಶ್ಯಗಳ ಚಿತ್ರೀಕರಣ ಅಮೆರಿಕದಲ್ಲಿ ನಡೆಯಲಿದೆ. ಹಾಗಾಗಿ ನಾವು ಅಮೆರಿಕಕ್ಕೆ ಹೋಗಲಿದ್ದೇವೆ. ಅಲ್ಲಿಂದ ಬಂದ ಬಳಿಕ ಒಂದೆರಡು ದೃಶ್ಯಗಳ ಚಿತ್ರೀಕರಣವನ್ನು ಮಾಡಿ ಆ ನಂತರ ನಾವು ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಿದ್ದೇವೆ'' ಎಂದಿದ್ದಾರೆ ವಿಜಯ್ ದೇವರಕೊಂಡ.

  'ಲೈಗರ್' ಸಿನಿಮಾವು ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ವಿಶ್ವವಿಖ್ಯಾತ ಮಾಜಿ ಬಾಕ್ಸರ್ ಮೈಕ್ ಟೈಸನ್ ನಟಿಸುತ್ತಿದ್ದಾರೆ. ಅವರೊಂದಿಗೆ ವಿಜಯ್ ದೇವರಕೊಂಡ ಫೈಟ್ ಮಾಡಲಿದ್ದಾರೆ ಎನ್ನಲಾಗಿದೆ. ಮೈಕ್ ಟೈಸನ್ ಜೊತೆಗಿನ ದೃಶ್ಯಗಳ ಚಿತ್ರೀಕರಣಕ್ಕೆಂದೇ 'ಲೈಗರ್' ಚಿತ್ರತಂಡ ಇದೀಗ ಅಮೆರಿಕಕ್ಕೆ ತೆರಳುತ್ತಿದೆ.

  'ಲೈಗರ್' ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕರಣ್ ಜೋಹರ್ ಹಾಗೂ ನಟಿ ಚಾರ್ಮಿ. ಸಿನಿಮಾದ ಚಿತ್ರೀಕರಣ ಹೈದರಾಬಾದ್, ಮುಂಬೈ, ಗೋವಾಗಳಲ್ಲಿ ಆಗಿದೆ.

  'ಲೈಗರ್' ಸಿನಿಮಾದ ಬಳಿಕ ಸುಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. ಆ ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡಲಿದ್ದಾರೆ. ಅದರ ಹೊರತಾಗಿ ಶಿವ ನಿರಾವನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾಕ್ಕೆ ವಿಜಯ್ ದೇವರಕೊಂಡ ಎಸ್ ಎಂದಿದ್ದಾರೆ. ಅದರ ಬಳಿಕ ಆನಂದ್ ಅನ್ನಮಲೈ ನಿರ್ದೇಶನದ 'ಹೀರೊ' ಸಿನಿಮಾದಲ್ಲಿಯೂ ವಿಜಯ್ ನಟಿಸಲಿದ್ದಾರೆ. ಇವುಗಳ ಮಧ್ಯೆ ನಟ ಚಿರಂಜೀವಿ ನಟಿಸುತ್ತಿರುವ ಮಲಯಾಳಂನ 'ಲುಸಿಫರ್' ಸಿನಿಮಾದ ರೀಮೇಕ್‌ನಲ್ಲಿ ಅತಿಥಿ ಪಾತ್ರದಲ್ಲಿ ವಿಜಯ್ ನಟಿಸಲಿದ್ದಾರೆ ಎನ್ನಲಾಗಿದೆ. ಸಿನಿಮಾದ ಜೊತೆಗೆ ಕೆಲವು ಉದ್ಯಮಗಳಿಗೂ ಕೈ ಹಾಕಿರುವ ವಿಜಯ್ ದೇವರಕೊಂಡ ಇತ್ತೀಚೆಗಷ್ಟೆ ತಮ್ಮದೇ ಆದ ಮಲ್ಟಿಫ್ಲೆಕ್ಸ್ ಚಿತ್ರಮಂದಿರ ತೆರೆದಿದ್ದಾರೆ. ರೌಡಿ ಹೆಸರಿನ ಉಡುಪು ಬ್ರ್ಯಾಂಡ್ ಅನ್ನು ವಿಜಯ್ ದೇವರಕೊಂಡ ಹೊಂದಿದ್ದಾರೆ.

  English summary
  Vijay Devarkonda talked about why Liger movie release getting delayed. He said team planing to go to US to shoot some scenes with Mike Tyson.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X