Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದೇ ಹೊಟೇಲ್‌ನಲ್ಲಿ ಹೊಸವರ್ಷ ಆಚರಿಸಿದ್ರಾ ರಶ್ಮಿಕಾ - ವಿಜಯ್? ಇಲ್ಲಿದೆ ಅಸಲಿ ವಿಷಯ
ಹೊಸ ವರ್ಷದ ಆಚರಣೆಗೆ ನಟ ಹಾಗೂ ನಟಿಯರು ವಿದೇಶಗಳಿಗೆ ಹಾರುವುದು ಸಾಮಾನ್ಯ. ಕೆಲ ನಟ ಹಾಗೂ ನಟಿಯರು ಒಬ್ಬೊಬ್ಬರೇ ವಿದೇಶಿ ಪ್ರಯಾಣ ಕೈಗೊಳ್ಳುತ್ತಾರೆ, ಅಥವಾ ತಮ್ಮ ಗೆಳೆಯ ಗೆಳತಿಯರ ಗುಂಪಿನೊಡನೆ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಪ್ರೇಯಸಿ ಅಥವಾ ಸಂಗಾತಿ ಜತೆ ವಿದೇಶಿ ಪ್ರಯಾಣ ಕೈಗೊಂಡು ಹೊಸ ವರ್ಷವನ್ನು ಸಂಭ್ರಮಿಸಿದ್ದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೊಳ್ಳುವುದರ ಮೂಲಕ ತಿಳಿಸುತ್ತಾರೆ.
ಆದರೆ ಕೆಲ ಸೆಲೆಬ್ರಿಟಿಗಳು ಮಾತ್ರ ಗುಟ್ಟಾಗಿ ಇತರೆ ಸೆಲೆಬ್ರಿಟಿಗಳ ಜತೆ ಪ್ರಯಾಣ ಬೆಳೆಸಿದ ಹಲವಾರು ಉದಾಹರಣೆಗಳು ಇವೆ. ಈ ರೀತಿ ಗುಟ್ಟಾಗಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ ಎಂಬ ಸುದ್ದಿಗೆ ಸಾಕಷ್ಟು ಬಾರಿ ಈಡಾಗಿರುವುದು ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ. ಹೌದು, ಈ ಹಿಂದೆ ಹಲವಾರು ಬಾರಿ ಈ ಇಬ್ಬರೂ ಸಹ ಒಟ್ಟಿಗೆ ಪ್ರವಾಸ ಕೈಗೊಂಡಿದ್ದೇವೆ ಎಂದು ಘೋಷಿಸದೇ ಇದ್ದರೂ ಸಹ ಅವರು ಹಂಚಿಕೊಂಡಿದ್ದ ಚಿತ್ರಗಳ ಆಧಾರದ ಮೇಲೆ ಇಬ್ಬರೂ ಸಹ ಒಂದೇ ಸ್ಥಳಕ್ಕೆ ಗೌಪ್ಯವಾಗಿ ತೆರಳಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದರು.
ಇದೇ ರೀತಿಯ ಅನುಮಾನಕ್ಕೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಈ ವರ್ಷದ ಮೊದಲ ದಿನವೇ ಸಿಲುಕಿಕೊಂಡಿದ್ದಾರೆ. ಹೌದು, ಹೊಸ ವರ್ಷದ ದಿನ ವಿಜಯ್ ದೇವರಕೊಂಡ ಹಂಚಿಕೊಂಡಿರುವ ಫೋಟೊ ಸದ್ಯ ಈ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಒಂದೇ ಹೊಟೇಲ್ ಫೋಟೊ
ವಿಜಯ್ ದೇವರಕೊಂಡ ಹೊಸ ವರ್ಷದ ಪ್ರಯುಕ್ತ ಮಾಲ್ಡೀವ್ಸ್‌ನ ಹೊಟೇಲ್ ಒಂದಕ್ಕೆ ಭೇಟಿ ನೀಡಿ ಫೊಟೊವನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಫೋಟೊ ವೈರಲ್ ಆಗುತ್ತಿದ್ದಂತೆ ನಟಿ ರಶ್ಮಿಕಾ ಕೂಡ ಅದೇ ಹೊಟೆಲ್‌ನ ಅದೇ ಜಾಗದಲ್ಲಿ ಈಜುಡುಗೆಯಲ್ಲಿ ಪೋಸ್ ನೀಡಿರುವ ಫೋಟೊವೊಂದು ಹೊರಬಿದ್ದಿದೆ. ಹೀಗಾಗಿ ಇಬ್ಬರೂ ಸಹ ಗೌಪ್ಯವಾಗಿ ಮಾಲ್ಡೀವ್ಸ್‌ನಲ್ಲಿ ಹೊಸ ವರ್ಷ ಆಚರಿಸಿದ್ದಾರೆ ಎಂದು ನೆಟ್ಟಿಗರು ಅನುಮಾನ ಹೊರಹಾಕಿದ್ದಾರೆ. ಆದರೆ ನಟಿ ರಶ್ಮಿಕಾ ಮಂದಣ್ಣ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾಗ ಇದೇ ಹೊಟೇಲ್‌ನಲ್ಲಿ ಫೋಟೊ ಹಂಚಿಕೊಂಡಿದ್ರು. ಆಗಿನ ಫೋಟೊ ಜತೆ ವಿಜಯ್ ದೇವರಕೊಂಡ ಅವರ ಈಗಿನ ಫೋಟೊವನ್ನು ತಳುಕಿಹಾಕಿ ಈ ರೀತಿಯ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ.

ಸೌತ್ ಕೆಣಕಿ ವಿವಾದ ಮೈಮೇಲೆ ಎಳೆದುಕೊಂಡ ರಶ್ಮಿಕಾ
ಬಾಲಿವುಡ್ ಹೊಗಳುವ ಭರದಲ್ಲಿ ದಕ್ಷಿಣ ಭಾರತದ ಚಿತ್ರರಂಗಗಳನ್ನು ಹೋಲಿಕೆ ಮಾಡಿರುವ ರಶ್ಮಿಕಾ ಮಂದಣ್ಣ್ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. 'ವಿಷನ್ ಮಜ್ನು' ಸಿನಿಮಾದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ರಶ್ಮಿಕಾ ಬಾಲಿವುಡ್ ಹಾಡುಗಳ ಬಗ್ಗೆ ಮಾತಾಡಿದ್ದರು. ಬಾಲಿವುಡ್ ಹಾಡುಗಳು ಪ್ರಭಾವ ಹೇಗಿತ್ತು ಅನ್ನೋದನ್ನು ವಿವರಿಸಿದ್ದರು. ಈ ವೇಳೆ " ಬಾಲಿವುಡ್ ಹಾಡುಗಳು ತುಂಬಾನೇ ರೊಮ್ಯಾಂಟಿಕ್ ಆಗಿರುತ್ತೆ. ಅದೇ ದಕ್ಷಿಣ ಭಾರತದ ಸಿನಿಮಾ ಹಾಡುಗಳು ಮಾಸ್ ಹಾಗೂ ಐಟಂ ಸಾಂಗ್‌ಗಳಾಗಿರುತ್ತೆ " ಎಂದು ಹೇಳಿದ್ದರು. ಈ ಹೇಳಿಕೆ ಸದ್ಯ ದಕ್ಷಿಣ ಭಾರತ ಚಿತ್ರರಂಗದ ಸಿನಿ ರಸಿಕರನ್ನು ಕೆರಳಿಸಿದ್ದು, ಇದೆಲ್ಲಾ ಸಿನಿಮಾಗಳ ಇತಿಹಾಸ ತಿಳಿಯದವರು ಆಡುವ ಮಾತುಗಳು ಎಂದರು.

ಕ್ಷೀಣಿಸುತ್ತಿದ್ಯಾ ರಶ್ಮಿಕಾ ಫೇಮ್?
ಇನ್ನು ವಾರಿಸು ಚಿತ್ರದ ಬಳಿಕ ಸದ್ಯಕ್ಕೆ ರಶ್ಮಿಕಾ ಮಂದಣ್ಣ ಕೈನಲ್ಲಿ ಇರುವುದು ಕೇವಲ ಮೂರು ಚಿತ್ರಗಳು ಮಾತ್ರ. ಹಿಂದಿಯ ಅನಿಮಲ್, ಮಿಷನ್ ಮಜ್ನು ಹಾಗೂ ತೆಲುಗಿನ ಪುಷ್ಪ ದಿ ರೂಲ್ ಹೊರತುಪಡಿಸಿ ರಶ್ಮಿಕಾ ನಟನೆಯ ಯಾವ ಚಿತ್ರವೂ ಸಹ ಘೋಷಣೆಯಾಗಿಲ್ಲ. ಇದರ ಜೊತೆಗೆ ಬಾಲಿವುಡ್‌ನ ಚಿತ್ರ ವಿಮರ್ಶಕ ಕೆಆರ್‌ಕೆ ರಶ್ಮಿಕಾ ಕುರಿತು ಟ್ವೀಟ್ ಮಾಡಿ "ರಶ್ಮಿಕಾ ಮಂದಣ್ಣ ಲುಕ್ ನೋಡಿದರೆ, ದಕ್ಷಿಣ ಭಾರತದ ಸಿನಿಮಾಗಳು ಹಾಗೂ ಭೋಜ್‌ಪುರಿ ಸಿನಿಮಾಗಳಿಗೆ ಸೂಕ್ತ ಹೊರತು ಹಿಂದಿ ಸಿನಿಮಾಗಳಿಗಲ್ಲ. ಹಿಂದಿ ಪ್ರೇಕ್ಷಕರು ರಶ್ಮಿಕಾಳನ್ನು ಹೀರೊಯಿನ್ ಆಗಿ ಒಪ್ಪಿಕೊಳ್ಳಲ್ಲ. ಈಗಾಗಲೇ ಐಶ್ವರ್ಯಾ, ಮಾಧುರಿ, ಕರೀನಾರನ್ನು ನೋಡಿದ್ದಾರೆ." ಎಂದು ಬರೆದುಕೊಳ್ಳುವ ಮೂಲಕ ರಶ್ಮಿಕಾಗೆ ಹೆಚ್ಚು ಅವಕಾಶ ಸಿಗುವುದಿಲ್ಲ ಎಂದರು. ಈ ಅಂಶಗಳನ್ನೆಲ್ಲಾ ಗಮನಿಸುತ್ತಿರುವ ಸಿನಿ ರಸಿಕರು ಅತಿಬೇಗನೇ ಖ್ಯಾತಿ ಪಡೆದ ರಶ್ಮಿಕಾ ಹವಾ ಮುಗಿಯಿತೇ ಎಂದುಕೊಳ್ಳುತ್ತಿದ್ದಾರೆ.