For Quick Alerts
  ALLOW NOTIFICATIONS  
  For Daily Alerts

  'ಸೂರರೈ ಪೊಟ್ರು' ಸಿನಿಮಾ ನೋಡಿ ಹಾಡಿ ಹೊಗಳಿದ ನಟ ವಿಜಯ್ ದೇವರಕೊಂಡ

  |

  ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾ 'ಸೂರರೈ ಪೊಟ್ರು' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನವೆಂಬರ್ 12ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸೂರರೈ ಪೊಟ್ರು ಕನ್ನಡ ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬಂದಿದೆ.

  ಗೋಪಿನಾಥ್ ಅವರ ಸ್ಫೂರ್ತಿದಾಯಕ ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗೋಪಿನಾಥ್ ಪಾತ್ರದಲ್ಲಿ ನಟ ಸೂರ್ಯ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರಕ್ಕೆ ಸುಧಾ ಕೊಂಗಾರ ಅಕ್ಷನ್ ಕಟ್ ಹೇಳಿದ್ದಾರೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಚಿತ್ರ ನೋಡಿ ಹಾಡಿ ಹೊಗಳುತ್ತಿದ್ದಾರೆ.

  ಇತ್ತೀಚಿಗೆ ತೆಲುಗು ನಟ ವಿಜಯ್ ದೇವರಕೊಂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೂರ್ಯ ನಟನೆಯನ್ನು ಹಾಡಿಹೊಗಳಿದ್ದಾರೆ. ಈ ಬಗ್ಗೆ ನಟ ವಿಜಯ್ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. ಸ್ನೇಹಿತರ ದೊಡ್ಡ ಗ್ಯಾಂಗ್ ಜೊತೆ ಕುಳಿತು ಸಿನಿಮಾ ನೋಡಿರುವುದಾಗಿ ಹೇಳಿದ್ದಾರೆ. ಅದರಲ್ಲಿ ಮೂವರು ಸ್ನೇಹಿತರು ಸಿನಿಮಾ ನೋಡಿ ತುಂಬಾ ಅತ್ತಿದ್ದರಂತೆ. ಈ ಸಿನಿಮಾ ನೋಡುತ್ತ ನಾನು ಕೆರಳುತ್ತಿದ್ದೆ ಎಂದಿದ್ದಾರೆ ವಿಜಯ್.

  ಸೂರ್ಯ ನಟನೆ ಭಯಂಕರವಾಗಿದೆ. ನಟಿ ಅಪರ್ಣಾ ಬಾಲಮುರಳಿ ಅವರ ಅಭಿನಯ ಮತ್ತು ನಿರ್ದೇಶಕಿ ಸುಧಾ ಕೊಂಗಾರ ಆಯ್ಕೆಯನ್ನು ವಿಜಯ್ ದೇವರಕೊಂಡ ಹೊಗಳಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಸುಧಾ ಕೊಂಗಾರ ನಿರ್ದೇಶನದ ಸಿನಿಮಾಗಳಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಜಿ.ವಿ ಪ್ರಕಾಶ್ ಅವರ ಸಂಗೀತ, ಛಾಯಾಗ್ರಹಣ ಪ್ರತಿಯೊಂದು ಅದ್ಭುತವಾಗಿದೆ ಎಂದಿದ್ದಾರೆ.

  ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada

  ಈ ಸಿನಿಮಾದಲ್ಲಿ ಎಷ್ಟು ನಿಜ ಮತ್ತು ಎಷ್ಟು ಕಾಲ್ಪನಿಕವಾಗಿದೆ ಎನ್ನುವುದು ಗೊತ್ತಿಲ್ಲ. ಹಾಗಾಗಿ ಕ್ಯಾಪ್ಟನ್ ಪ್ರಯಾಣದ ಬಗ್ಗೆ ಇನ್ನಷ್ಟು ಓದಲು 'ಸಿಂಪ್ಲಿ ಫ್ಲೈ' ಪುಸ್ತಕವನ್ನು ಓದುವಂತೆ ಹೇಳಿದ್ದಾರೆ. ಅನೇಕರು ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ. ಸಿನಿಮಾ ನೋಡಿ ಸ್ವತಃ ಗೋಪಿನಾಥ್ ಅವರೆ ಮೆಚ್ಚಿಕೊಂಡು, ಸೂರ್ಯ ನಟನೆಯನ್ನು ಕೊಂಡಾಡಿದ್ದಾರೆ.

  English summary
  Telugu Actor Vijay Deverakonda Praised Suriya's Aakaasam Nee Haddhu Ra Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X