For Quick Alerts
  ALLOW NOTIFICATIONS  
  For Daily Alerts

  'ಲೈಗರ್'ಗೆ ಸೆನ್ಸಾರ್ ಬೋರ್ಡ್‌ನಿಂದ ಆಕ್ಷೇಪಣೆ!

  |

  ಪ್ಯಾನ್ ಸಿನಿಮಾಗಳ ಸಾಲಿನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿರುವ ಮತ್ತೊಂದು ಸಿನಿಮಾ ಎಂದರೆ ಅದು 'ಲೈಗರ್'. ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಸಿನಿಮಾ ತೆರೆಗೆ ಬರಲಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ.

  ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾದ ಪ್ರಚಾರವನ್ನು ಸಿನಿಮಾತಂಡ ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ. ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಇಡೀ ಚಿತ್ರತಂಡ ಭಾರತದಾದ್ಯಂತ ಸುತ್ತುತ್ತಿದೆ.

  ಅಭಿಮಾನಿಗಳಿಗೆ ತಮ್ಮ ಬಗ್ಗೆ ತಿಳಿಯದ ಎರಡು ಸತ್ಯ ಹೇಳಿದ ವಿಜಯ್ ದೇವರಕೊಂಡಅಭಿಮಾನಿಗಳಿಗೆ ತಮ್ಮ ಬಗ್ಗೆ ತಿಳಿಯದ ಎರಡು ಸತ್ಯ ಹೇಳಿದ ವಿಜಯ್ ದೇವರಕೊಂಡ

  ಇನ್ನು 'ಲೈಗರ್' ಸಿನಿಮಾದ ರನ್‌ಟೈಮ್ ಮತ್ತು ಸೆನ್ಸಾರ್ ಬಗ್ಗೆಯೂ ಮಾಹಿತಿ ಹೊಸ ಬಿದ್ದಿದೆ. 'ಲೈಗರ್' ಸಿನಿಮಾ ಸೆನ್ಸಾರ್‌ಗೆ ಹೋದಾಗ, ಸಿನಿಮಾದಲ್ಲಿರುವ ಅಶ್ಲೀಲ ಭಾಷೆ ಕಂಡು ಸೆನ್ಸಾರ್ ಮಂಡಳಿ ದಂಗಾಗಿ ಹೋಗಿದೆಯಂತೆ. ಹಾಗಾಗಿ ಬದಲಾವಣೆಗೆ ಸೂಚಿಸಿದೆಯಂತೆ.

  'ಲೈಗರ್‌'ಗೆ ಸೆನ್ಸಾರ್ ಆಕ್ಷೇಪಣೆ!

  'ಲೈಗರ್‌'ಗೆ ಸೆನ್ಸಾರ್ ಆಕ್ಷೇಪಣೆ!

  ವಿಜಯ್ ದೇವರಕೊಂಡ ನಟನೆಯ, ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾ ಇದೇ ಆಗಸ್ಟ್ 25ಕ್ಕೆ ತೆರೆಗೆ ಬರಲಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಸೆನ್ಸಾರ್ ಮುಗಿಸಬೇಕು. 'ಲೈಗರ್' ಸಿನಿಮಾ ಕೂಡ ಸೆನ್ಸಾರ್ ಮಂಡಳಿ ಮುಂದೆ ಪ್ರದರ್ಶನ ಕಂಡಿದೆ. ಈ ಚಿತ್ರದಲ್ಲಿನ ಡೈಲಾಗ್‌ಗಳನ್ನ ನೋಡಿ ಸೆನ್ಸಾರ್ ಮಂಡಳಿ ಶಾಕ್ ಆಗಿದೆಯಂತೆ. ಹಾಗಾಗಿ ಹಲವು ಡೈಲಾಗ್‌ಗಳನ್ನು ಕಿತ್ತು ಹಾಕಲು ಸೂಚನೆ ನೀಡಿದೆ. ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

  ವಿಜಯ್ ದೇವರಗೊಂಡ ಮನೆ ಪೂಜೆಯಲ್ಲಿ ಅನನ್ಯಾ ಪಾಂಡೆ: ಗಾಸಿಪ್‌ಗೆ ಬಿತ್ತು ಒಗ್ಗರಣೆ!ವಿಜಯ್ ದೇವರಗೊಂಡ ಮನೆ ಪೂಜೆಯಲ್ಲಿ ಅನನ್ಯಾ ಪಾಂಡೆ: ಗಾಸಿಪ್‌ಗೆ ಬಿತ್ತು ಒಗ್ಗರಣೆ!

  'ಲೈಗರ್' ಅಶ್ಲೀಲ ಡೈಲಾಗ್‌ ಕಟ್!

  'ಲೈಗರ್' ಅಶ್ಲೀಲ ಡೈಲಾಗ್‌ ಕಟ್!

  'ಲೈಗರ್' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಆದರೆ ಹಲವಾರು ಆಕ್ಷೇಪಣೆಗಳು ಚಿತ್ರಕ್ಕೆ ಎದುರಾಗಿದೆ. ಡೈಲಾಗ್‌ಗಳಲ್ಲಿ ಅಶ್ಲೀಲ ಭಾಷೆಯನ್ನು ಬಳಸಲಾಗಿದೆ. ಅದರಲ್ಲಿ ಕೆಲವು ಪದಗಳನ್ನು ತೆಗೆದು ಹಾಕಲು ಸೂಚಿಸಿದರೆ. ಇನ್ನು ಕೆಲವು ಪದಗಳನ್ನು ಮ್ಯೂಟ್ ಮಾಡಲು ಸೂಚಿಸಲಾಗಿದೆ. 'F.....king', 'Mother F....r' ಸೇರಿದಂತೆ ಹಲವು ಪದಗಳನ್ನು ಮ್ಯೂಟ್ ಮಾಡಲು ಸೆನ್ಸಾರ್ ಮಂಡಳಿಯಿಂದ ಸೂಚನೆ ಸಿಕ್ಕಿದೆ.

  'ಲೈಗರ್' ಸಿನಿಮಾ ಅವಧಿ ಎಷ್ಟು?

  'ಲೈಗರ್' ಸಿನಿಮಾ ಅವಧಿ ಎಷ್ಟು?

  'ಲೈಗರ್' ರೀತಿಯ ನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತವೆ ಎಂದರೆ ಸಿನಿಮಾದ ಅವಧಿ ಬಗ್ಗೆ ಕುತೂಹಲ ಇರುತ್ತದೆ. ಸದ್ಯ 'ಲೈಗರ್' ಚಿತ್ರದ ರನ್ ಟೈಮ್ ಎಷ್ಟು ಎನ್ನುವ ಬಗ್ಗೆ ಮಾಹಿತಿ ಹೊರ ಬಂದಿದೆ. 'ಲೈಗರ್' ಸಿನಿಮಾದ ಒಟ್ಟಾರೆ ಅವಧಿ 2 ಗಂಟೆ 20 ನಿಮಿಷ 20 ಸೆಕೆಂಡು. ಹಾಗಾಗಿ ಸಿನಿಮಾ ಹೆಚ್ಚು ಲ್ಯಾಗ್ ಇರುವುದಿಲ್ಲ ಎನ್ನಬಹುದು. ಈಗಾಗಲೇ ಸಿನಿಮಾದ ತುಣುಕುಗಳು ಚಿತ್ರದ ಮೇಲೆ ಎಲ್ಲಿಲ್ಲದ ಕ್ರೇಜ್ ಹುಟ್ಟು ಹಾಕಿವೆ. ವಿಜಯ್ ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ.

  ಪ್ರಚಾರ ಪ್ರವಾಸದಲ್ಲಿ 'ಲೈಗರ್' ತಂಡ!

  ಪ್ರಚಾರ ಪ್ರವಾಸದಲ್ಲಿ 'ಲೈಗರ್' ತಂಡ!

  'ಲೈಗರ್' ಸಿನಿಮಾ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಮುಳುಗಿದೆ. ಭಾರತದಾದ್ಯಂತ ಸುತ್ತಿ ಹಲವೆಡೆ ಪ್ರಚಾರವನ್ನು ಕೈಗೊಂಡಿದೆ. ಹೈದರಾಬಾದ್‌ನಲ್ಲಿ ಸಿನಿಮಾ ಪ್ರಚಾರ ಮುಗಿಸಿದ 'ಲೈಗರ್' ತಂಡ, ಕರ್ನಾಟಕದಕ್ಕೆ ಬರ್ತಿದೆ. ಆಗಸ್ಟ್ 19ಕ್ಕೆ ಬೆಂಗಳೂರಿಗೆ ಬಂದು ಸಿನಿಮಾ ಪ್ರಚಾರ ಮಾಡಲಿದೆ. ನಂತರ ಕೊಚ್ಚಿ, ತಮಿಳು ನಾಡು, ಮುಂಬೈ, ದೆಹಲಿ ಸೇರಿದಂತೆ ಹಲವೆಡೆ ಸಿನಿಮಾ ತಂಡ ಪ್ರವಾಸ ಮಾಡಲಿದೆ.

  English summary
  Vijay Deverakonda Starrer Liger Get Censor Objections Because Of Vulgar Dialogues, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X