For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಲೈವ್ ವಿಡಿಯೊದಲ್ಲಿ ವಿಜಯ್ ದೇವರಕೊಂಡ; ಸಿಕ್ಕಿಬಿದ್ರಲ್ಲ ಎಂದು ನಕ್ಕ ನೆಟ್ಟಿಗರು!

  |

  ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂಬ ಗುಸು ಗುಸು ಕೇಳಿ ಬರುತ್ತಿರುವುದು ನಿನ್ನೆ ಮೊನ್ನೆಯದ್ದೇನಲ್ಲ. ಕನ್ನಡದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಚಲೋ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ತನ್ನ ಎರಡನೇ ತೆಲುಗು ಚಿತ್ರ 'ಗೀತಾ ಗೋವಿಂದಂ'ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು.

  ಈ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜತೆ ರಶ್ಮಿಕಾ ಮಂದಣ್ಣ ಲಿಪ್ ಕಿಸ್ ದೃಶ್ಯದಲ್ಲಿ ಕಾಣಿಸಿಕೊಂಡದ್ದೇ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದು ಬೀಳಲು ಸಹ ಕಾರಣ ಎಂದಿದ್ದರು ನೆಟ್ಟಿಗರು. ಅಷ್ಟೇ ಅಲ್ಲದೇ ಇದಾದ ಬಳಿಕ ಬಂದ ಈ ಜೋಡಿಯ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಇಬ್ಬರ ನಡುವಿನ ಹಾಟ್ ಹಾಗೂ ಕಿಸ್ ಸೀನ್ ಹೆಚ್ಚೇ ಇದ್ದವು. ಇನ್ನು ಆ ಸಮಯದಲ್ಲಿ ಈ ಜೋಡಿ ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆ ಸಹ ಲವ್ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು.

  ಆದರೆ ಈ ಸುದ್ದಿ ನಿಜವಲ್ಲ, ಇಬ್ಬರೂ ಸಹ ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ಊಹಾಪೋಹಗಳಿಗೆ ನಟಿ ರಶ್ಮಿಕಾ ಬ್ರೇಕ್ ಹಾಕಿದ್ದರು. ರಶ್ಮಿಕಾ ಎಷ್ಟೇ ಹೇಳಿದರೂ ಸಹ ಇಬ್ಬರ ನಡುವೆ ಲವ್ವಿ ಡವ್ವಿ ಇದೆ ಎಂದು ಹೇಳುವುದನ್ನು ಮಾತ್ರ ನಿಲ್ಲಿಸಲಿಲ್ಲ. ಕೆಲವೊಂದಷ್ಟು ಬಾರಿ ಈ ಇಬ್ಬರೂ ಸಹ ಒಟ್ಟಿಗೆ ವಿದೇಶಿ ಪ್ರಯಾಣ ಕೈಗೊಂಡಿದ್ದು, ವಿಮಾನ ನಿಲ್ದಾಣಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೆಲ್ಲಾ ನೆಟ್ಟಿಗರ ಅನುಮಾನಗಳಿಗೆ ಪುಷ್ಟಿ ನೀಡಿದ್ದವು. ಇನ್ನು ಈ ವಿಷಯವಾಗಿಯೇ ಇದೀಗ ಅಂತಹದ್ದೇ ಸುದ್ದಿ ಹರಿದಾಡುತ್ತಿದ್ದು, ನೆಟ್ಟಿಗರ ಅನುಮಾನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

  ರಶ್ಮಿಕಾ ಮಂದಣ್ಣ ಲೈವ್‌ನಲ್ಲಿ ವಿಜಯ್ ದೇವರಕೊಂಡ!

  ರಶ್ಮಿಕಾ ಮಂದಣ್ಣ ಲೈವ್‌ನಲ್ಲಿ ವಿಜಯ್ ದೇವರಕೊಂಡ!

  ಇನ್ನು ಹೊಸ ವರ್ಷದ ಪ್ರಯುಕ್ತ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ವಿಡಿಯೊ ಮಾಡಿದ್ದರು. ತಮ್ಮ ಮುಂದಿನ ಚಿತ್ರವಾದ ವಾರಿಸು ಹಾಗೂ ಇತರೆ ವಿಷಯಗಳ ಬಗ್ಗೆ ರಶ್ಮಿಕಾ ಮಾಹಿತಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೇ ತನ್ನ ಹಿಂಬಾಲಕರು ಕಾಮೆಂಟ್ ಮೂಲಕ ಕೇಳಿದ್ದ ಪ್ರಶ್ನೆಗಳಿಗೆ ನಟಿ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದರು. ಇನ್ನು ಈ ವಿಡಿಯೊದಲ್ಲಿ ನಿಮಗೆ ವಯಸ್ಸೆಷ್ಟು ಎಂದು ಅಭಿಮಾನಿಯೋರ್ವ ಕೇಳಿದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರಿಸಿದಾಗ ಬ್ಯಾಕ್‌ಗ್ರೌಂಡ್‌ನಲ್ಲಿ ವಿಜಯ್ ದೇವರಕೊಂಡ ದನಿ ಕೇಳಿಬರುತ್ತದೆ ಎಂದು ನೆಟ್ಟಿಗರು ಆ ವಿಡಿಯೊ ತುಣುಕನ್ನು ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದಾರೆ. ಇನ್ನು ಆ ಧ್ವನಿ ಕೂಡ ಥೇಟ್ ವಿಜಯ್ ದೇವರಕೊಂಡ ಧ್ವನಿ ರೀತಿಯೇ ಇದ್ದು, ಅವರ ಅನುಮಾನ ಮತ್ತಷ್ಟು ಹೆಚ್ಚಾಗಿದೆ.

  ಸಿಕ್ಕಿಬಿದ್ರಲ್ಲ ಎಂದು ನಕ್ಕ ನೆಟ್ಟಿಗರು

  ಸಿಕ್ಕಿಬಿದ್ರಲ್ಲ ಎಂದು ನಕ್ಕ ನೆಟ್ಟಿಗರು

  ಇನ್ನು ಈ ರೀತಿಯ ವಿಡಿಯೊ ತುಣುಕನ್ನು ವೀಕ್ಷಿಸಿದ ನೆಟ್ಟಿಗರು ಇಬ್ಬರೂ ಸಹ ಗುಟ್ಟಾಗಿ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ. ಇಬ್ಬರ ಮಧ್ಯೆ ಲವ್ವಿ ಡವ್ವಿ ಇರುವುದಂತೂ ಸತ್ಯ. ಏನೂ ಇಲ್ಲ ಎಂಬಂತೆ ಇಬ್ಬರೂ ಸಹ ನಾಟಕ ಮಾಡುತ್ತಿದ್ದಾರೆ ಅಷ್ಟೇ, ಆದರೆ ಈಗ ಸಿಕ್ಕಿಬಿದ್ದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಖಚಿತವಾಗಿ ವಿಜಯ್ ದೇವರಕೊಂಡ ಧ್ವನಿಯೇ, ಈ ಮೂಲಕ ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿರುವುದು ಖಚಿತವಾಯಿತು ಎಂದು ಕಾಮೆಂಟ್ ಮಾಡಿದ್ದಾರೆ.

  ಸಂಕ್ರಾಂತಿಗೆ ರಶ್ಮಿಕಾ ಸಿನಿಮಾ

  ಸಂಕ್ರಾಂತಿಗೆ ರಶ್ಮಿಕಾ ಸಿನಿಮಾ

  ಇನ್ನು ಇದೇ ತಿಂಗಳ 12ರಂದು ನಟಿ ರಶ್ಮಿಕಾ ಹಾಗೂ ವಿಜಯ್ ಅಭಿನಯದ ವಾರಿಸು ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ. ಈ ಚಿತ್ರ ರಶ್ಮಿಕಾ ಸಿನಿ ಕೆರಿಯರ್‌ನಲ್ಲಿ ದೊಡ್ಡ ಓಪನಿಂಗ್ ಪಡೆದುಕೊಳ್ಳುವ ಸಿನಿಮಾ ಆಗುವ ಸಾಧ್ಯತೆಗಳಿವೆ. ಈ ಚಿತ್ರದ ಬಳಿಕ ರಶ್ಮಿಕಾ ನಟನೆಯ ಹಿಂದಿ ಚಿತ್ರ ಮಿಷನ್ ಮಜ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಹಾಗೂ ಮತ್ತೊಂದು ಹಿಂದಿ ಚಿತ್ರ ಅನಿಮಲ್ ಕೂಡ ತೆರೆಗೆ ಬರಲಿದೆ. ಇನ್ನುಳಿದಂತೆ ಪುಷ್ಪ ದ ರೂಲ್ ಚಿತ್ರದ ಚಿತ್ರೀಕರಣದಲ್ಲಿ ರಶ್ಮಿಕಾ ಸದ್ಯ ಬ್ಯುಸಿ ಇದ್ದಾಳೆ.

  English summary
  rashmika mandanna, rashmika mandanna live video, rashmika mandanna and vijay deverakonda video, vijay deverakonda voice in rashmika mandanna, vijay deverakonda and rashmika mandanna relationship, vijay deverakonda and rashmika mandanna new year celebration
  Wednesday, January 4, 2023, 14:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X