For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಚಿತ್ರಕ್ಕೆ ವಿಜಯ್ ಸೇತುಪತಿ ವಿಲನ್!

  |

  ತಮಿಳು ಸೂಪರ್ ಸ್ಟಾರ್ ವಿಜಯ್ ಸೇತುಪತಿ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀರೋ, ಸಪೋರ್ಟಿಂಗ್ ಪಾತ್ರ, ಖಳನಾಯಕ ಹೀಗೆ ಸ್ಟಾರ್ ನಟರಿಗೆ ಸಾಥ್ ನೀಡುತ್ತಿದ್ದಾರೆ.

  ಇದೀಗ, ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ಅಲ್ಲು ಅರ್ಜುನ್ ನಟಿಸುತ್ತಿರುವ 20ನೇ ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

  'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?

  ಸುಕುಮಾರ್ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಮೊದಲ ಸಲ ಅಲ್ಲು ಅರ್ಜುನ್ ಮತ್ತು ವಿಜಯ್ ಸೇತುಪತಿ ತೆರೆಹಂಚಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ಮೊದಲ ಸಲ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಜನಿಕಾಂತ್ ಜೊತೆ ಪೇಟಾ ಸಿನಿಮಾ ಮಾಡಿದ್ದ ವಿಜಯ್ ಸೇತುಪತಿ, ಬಾಲಿವುಡ್ನಲ್ಲಿ ಅಮೀರ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಮತ್ತೊಂದೆಡೆ ಇಳಯದಳಪತಿ ಅಭಿನಯದ ಮಾಸ್ಟರ್ ಚಿತ್ರದಲ್ಲಿ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಹಿಂದಿ ಚಿತ್ರರಂಗಕ್ಕೆ ಹೋಗಲು ವಿಜಯ್ ಸೇತುಪತಿಗೆ ಅಂಜಿಕೆ, ಕಾರಣ ಇಲ್ಲಿದೆಹಿಂದಿ ಚಿತ್ರರಂಗಕ್ಕೆ ಹೋಗಲು ವಿಜಯ್ ಸೇತುಪತಿಗೆ ಅಂಜಿಕೆ, ಕಾರಣ ಇಲ್ಲಿದೆ

  ಅಲ್ಲು ಅರ್ಜುನ್ ನಟಿಸಿದ್ದ 'ಅಲಾ ವೈಕುಂಠಪುರಂಲೊ' ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಕಡೆ ರಶ್ಮಿಕಾ ನಟಿಸಿರುವ 'ಸರಿಲೇರು ನೀಕೆವ್ವರು' ಚಿತ್ರವೂ ಸೂಪರ್ ಸಕ್ಸಸ್ ಕಂಡಿದೆ.

  English summary
  Tamil superstar Vijay sethupathi playing antagonist role in rashmika mandanna and allu arjun starrer AA20 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X