For Quick Alerts
  ALLOW NOTIFICATIONS  
  For Daily Alerts

  ಮೂರನೇ ಪತ್ನಿ ಕೈಯಲ್ಲಿ ಸಿಕ್ಕಿಬಿದ್ದ ನರೇಶ್-ಪವಿತ್ರಾ ಲೋಕೇಶ್: ರಮ್ಯಾ ರಘುಪತಿ ಮುಂದಿನ ನಡೆಯೇನು?

  |

  ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹಾಗೂ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ವಿವಾದ ಸಂಚಲನ ಸೃಷ್ಟಿಸಿತ್ತು. ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಈ ಜೋಡಿ ಬಗ್ಗೆ ಸುದ್ದಿಗಳಾಗಿತ್ತು. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆವರೆಗೂ ಸುದ್ದಿ ಹಬ್ಬಿತ್ತು.

  ಈ ಬೆನ್ನಲೇ ನರೇಶ್ ತನ್ನ ಮೂರನೇ ಪತ್ನಿ ವಿರುದ್ಧ 500 ಕೋಟಿ ರೂ. ವಂಚನೆಯ ಆರೋಪ ಮಾಡಿದ್ದರು. ಇಲ್ಲಿಂದ ಶುರುವಾಗಿದ್ದ ಈ ಮೂವರ ಕಿತ್ತಾಟ ಈಗ ತಾರಕ್ಕೇರಿದೆ. ಕೆಲವು ದಿನಗಳ ಹಿಂದಷ್ಟೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮೈಸೂರಿನ ಹೋಟೆಲ್‌ನಲ್ಲಿ ರಮ್ಯಾ ರಘುಪತಿ ಕೈನಲ್ಲಿ ಸಿಕ್ಕಿಬಿದ್ದಿದ್ದರು. ಅಲ್ಲಿಂದ ಈ ವಿವಾದ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

  ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!

  ಮೈಸೂರು ಘಟನೆ ಬಳಿಕ ನರೇಶ್, ಪವಿತ್ರಾ ಲೋಕೇಶ್ ಹಾಗೂ ರಮ್ಯಾ ರಘುಪತಿ ಮೂವರೂ ಸದ್ಯಕ್ಕೆ ಸೈಲೆಂಟ್ ಆಗಿದ್ದಾರೆ. ಆದರೆ, ಮೂಲಗಳ ಪ್ರಕಾರ ಇವರು ತಮ್ಮದೇ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ರಮ್ಯಾ ರಘುಪತಿ ಮುಂದಿನ ನಡೆ ಬಗ್ಗೆ ಆಪ್ತರು ಒಂದಿಷ್ಟು ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ.

  ನರೇಶ್-ಪವಿತ್ರಾ ಲೋಕೇಶ್ ನಡೆಯೇನು?

  ನರೇಶ್-ಪವಿತ್ರಾ ಲೋಕೇಶ್ ನಡೆಯೇನು?

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮೈಸೂರಿನ ಹೋಟೆಲ್‌ನಲ್ಲಿ ರಮ್ಯಾ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಈ ವೇಳೆ ಹೋಟೆಲ್‌ನಿಂದ ತೆರಳುವಾಗ ರಮ್ಯಾ ರಘುಪತಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಆ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಹೈದರಾಬಾದ್‌ನಲ್ಲಿ ಇದ್ದಾರೆ ಎಂದು ಎನ್ನಲಾಗುತ್ತಿದೆ. ರಮ್ಯಾ ರಘುಪತಿ ಮುಂದಿನ ನಡೆಯೇನು ಅನ್ನುವುದನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಮದುವೆ ಬಳಿಕ ಈಗ ನೆಕ್ಲೆಸ್ ಕಿತ್ತಾಟ: ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ!ಮದುವೆ ಬಳಿಕ ಈಗ ನೆಕ್ಲೆಸ್ ಕಿತ್ತಾಟ: ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ!

  ರಮ್ಯಾ ರಘುಪತಿ ಈಗ ಎಲ್ಲಿದ್ದಾರೆ?

  ರಮ್ಯಾ ರಘುಪತಿ ಈಗ ಎಲ್ಲಿದ್ದಾರೆ?

  ತೆಲುಗು ನಟ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕೂಡ ಸೈಲೆಂಟ್ ಆಗಿದ್ದಾರೆ. ಅದಕ್ಕೆ ಕಾರಣ ಅವರ ತಾಯಿಯ ಆರೋಗ್ಯ ಸಮಸ್ಯೆ ಎನ್ನಲಾಗಿದೆ. ರಮ್ಯಾ ರಘುಪತಿ ತಾಯಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಅವರ ಆರೋಗ್ಯ ಕಡೆ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಒಮ್ಮೆ ಅವರ ತಾಯಿ ಸಹಜ ಸ್ಥಿತಿಗೆ ಮರಳಿದ ಬಳಿಕ ಮತ್ತೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ಸಮರವನ್ನು ಮುಂದುವರೆಸಲಿದ್ದಾರೆ.

  ರಮ್ಯಾ ರಘುಪತಿ ನಡೆಯೇನು?

  ರಮ್ಯಾ ರಘುಪತಿ ನಡೆಯೇನು?

  ರಮ್ಯಾ ರಘುಪತಿ ಶೀಘ್ರದಲ್ಲಿಯೇ ಒಂದು ಪತ್ರಿಕಾ ಗೋಷ್ಠಿಯನ್ನು ಕರೆಯಲಿದ್ದಾರೆ. ಇಲ್ಲಿ ತೆಲುಗು ಮಾಧ್ಯಮಗಳಿಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಗೆಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. ಜೊತೆ ನರೇಶ್ ಮದುವೆ ಆದಲ್ಲಿಂದ ನಡೆದುಕೊಂಡ ರೀತಿಯನ್ನು ಇಂಚು ಇಂಚಾಗಿ ಮಾಧ್ಯಮಗಳ ಮುಂದೆ ಬಿಚ್ಚಿಡಲಿದ್ದಾರೆ ಎಂದು ರಮ್ಯಾ ರಘುಪತಿಯ ಆಪ್ತರು ಮಾಹಿತಿಯನ್ನು ನೀಡಿದ್ದಾರೆ.

  ಮುಂದುವರೆಯುತ್ತೆ ರಮ್ಯಾ ಹೋರಾಟ

  ಮುಂದುವರೆಯುತ್ತೆ ರಮ್ಯಾ ಹೋರಾಟ

  ರಮ್ಯಾ ರಘುಪತಿ ಈ ಹಿಂದೆ ಹೇಳಿಕೆ ನೀಡಿದಂತೆ ಆ ನಿರ್ಧಾರಗಳಿಗೆ ಬದ್ಧರಾಗಿದ್ದಾರೆ. " ನನಗೆ ವಿಚ್ಛೇದನ ಬೇಡ. ನನ್ನ ಮಗನಿಗೆ ತಂದೆ ಬೇಕು. ಅದಕ್ಕಾಗಿ ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ." ಎಂದು ರಮ್ಯಾ ಅವರ ಆಪ್ತ ವಲಯಗಳು ತಿಳಿಸಿವೆ. ಇತ್ತ ನರೇಶ್ ಹಾಗೂ ಪವಿತ್ರಾ ಲೋಕೇಶ್ ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  VK Naresh And Pavithra Lokesh Affair: What Is Ramya Raghuvathi Next Step?
  Friday, July 8, 2022, 17:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X