Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Nikki Galrani Wedding: ಸಂಜನಾ ಗಲ್ರಾನಿ ಸಹೋದರಿ ನಿಕ್ಕಿಗೆ ಕಂಕಣ ಭಾಗ್ಯ ಫಿಕ್ಸ್?
ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ, ತೆಲುಗು ತಮಿಳು ಚಿತ್ರರಂಗದಲ್ಲೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ 'ಅಜಿತ್', 'ಜಂಬೂ ಸವಾರಿ', 'ಓ ಪ್ರೇಮವೇ' ಸಿನಿಮಾದಲ್ಲಿ ನಟಿಸಿರುವ ನಿಕ್ಕಿ ಗಲ್ರಾನಿಗೆ ಇಲ್ಲಿ ಹೆಚ್ಚಿನ ಯಶಸ್ಸೇನು ಸಿಕ್ಕಿರಲಿಲ್ಲ. ನಂತರ ತೆಲುಗು ತಮಿಳು ಚಿತ್ರಗಳ್ಲಿ ನಟಿಸುವ ಮೂಲಕ ಮೋಡಿ ಮಾಡಿರುವ ಇವರು ಇದೀಗ ಮದುವೆಗೆ ಸಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಕ್ಕಿ ಗಲ್ರಾನಿ ಸುತ್ತಾ ಕೆಲ ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂಬ ಗಾಸಿಪ್‌ಗಳು ಕೇಳಿಬರುತ್ತಿತ್ತು.
ಇದೀಗ ಈ ಗಾಸಿಪ್ ನಿಜ ಎನ್ನುತ್ತಿದೆ ಖ್ಯಾತ ಮ್ಯಾಗಝಿನ್. ಹೌದು ಖಾಸಗಿ ಮ್ಯಾಗಝಿನ್ ಒಂದರಲ್ಲಿ ನಿಕ್ಕಿ ಗಲ್ರಾನಿ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಿದ್ದು ತೆಲುಗಿನ ನಟ ಆದಿ ಜೊತೆ ನಿಕ್ಕಿ ಮದುವೆ ಆಗಲಿದ್ದಾರಂತೆ. ಬಲ್ಲ ಮೂಲಗಳಿಂದ ಈ ಸುದ್ದಿಯನ್ನು ಖಚಿತ ಪಡಿಸಿಕೊಂಡು ಖಾಸಗಿ ಮ್ಯಾಗಝಿನ್ ವರದಿ ಮಾಡಿದ್ದು, ಆದಷ್ಟು ಬೇಗ ಎಂಗೇಜ್‌ಮೆಂಟ್ ಕೂಡ ಮಾಡಿಕೊಳ್ಳಲಿದ್ದಾರಂತೆ ಈ ಜೋಡಿ.
Amala
Paul
beach
photos:
ಸಮುದ್ರತೀರದಲ್ಲಿ
ಒದ್ದೆಯಾದ
ಅಮಲಾ
ಪೌಲ್:
ಫೋಟೊ
ವೈರಲ್
ಈ ಸುದ್ದಿ ಹೊರ ಬರುತ್ತಿದ್ದಂತೆ ಕಾಲಿವುಡ್‌ನಲ್ಲಿ ಮತ್ತೆ ಮದುವೆಯ ಸೀಸನ್ ಬಂದಂತೆ ಭಾಸವಾಗುತ್ತಿದೆ. ಈ ಹಿಂದೆ ಕೂಡ ಆದಿ ಮತ್ತು ನಿಕ್ಕಿ ಗಲ್ರಾನಿ ಒಂದೆರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹರಡಿತ್ತು. ಇದೀಗ ಆದಿ ಮತ್ತು ನಿಕ್ಕಿ ಗಲ್ರಾನಿ ಶೀಘ್ರದಲ್ಲೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಕೂಡ ಹೆಚ್ಚು ಸದ್ದು ಮಾಡುತ್ತಿದೆ. ಈ ಜೋಡಿ ನಿಶ್ಚಿತಾರ್ಥ ಸಮಾರಂಭ ಮುಗಿದ ನಂತರ ಮದುವೆ ದಿನಾಂಕವನ್ನು ಪ್ರಕಟಿಸಲಿದೆಯಂತೆ.
ಈ ಸುದ್ದಿ ಕೇಳಿ ಇದೀಗ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾತೆ. ಈ ತಾರಾ ಜೋಡಿಯ ದಾಂಪತ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ತೆಲುಗಿನ ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿರುವ ಆದಿ ಮತ್ತು ನಿಕ್ಕಿ ಹಿಂದಿನಿಂದಲೂ ಉತ್ತಮ ಸ್ನೇಹಿತರಾಗಿದ್ದರು. ಆದರೆ ನಿಕ್ಕಿ ಜುಲೈ, 2020 ರಲ್ಲಿ ಆದಿಯ ತಂದೆಯ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದಾಗ ಇಬ್ಬರೂ ಸಂಬಂಧದಲ್ಲಿದ್ದಾರೆ ಎಂದು ವರದಿಯಾಗಿತ್ತು. ನಂತರ ಒಟ್ಟಿಗೆ ಅಲ್ಲಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಹಲವು ಬಾರಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕ್ಯಾಮೆರ ಕಣ್ಣಿಗೂ ಬಿದ್ದಿದ್ದಾರೆ.

ಹೀಗಾಗಿ ಈ ಇಬ್ಬರ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಆದರೆ ಈ ಮದುವೆ ಸುದ್ದಿಯ ಬಗ್ಗೆ ಇನ್ನು ಆದಿ ಮತ್ತು ನಿಕ್ಕಿ ಗಲ್ರಾನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಈ ಸುದ್ದಿಯನ್ನು ನಿಜ ಅಂದುಕೊಳ್ಳೊದಾ ಅಥವಾ ಗಾಸಿಪ್ ಎಂದು ಸುಮ್ಮನಾಗಿಬಿಡೋದಾ ಎಂಬುದು ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದರೆ ಆದಿ ಅಥವಾ ನಿಕ್ಕಿ ಇಬ್ಬರಲ್ಲಿ ಒಬ್ಬರು ಈ ಬಗ್ಗೆ ಮಾತನಾಡಲೇ ಬೇಕಿದೆ.