For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶೆಟ್ಟಿ ನಿಜವಾದ ಹೆಸರೇನು? ಹೆಸರು ಬದಲಿಸಿದ್ದು ಯಾರು? ಯಾಕೆ? ಇಲ್ಲಿದೆ ಉತ್ತರ

  |

  ಅನುಷ್ಕಾ ಶೆಟ್ಟಿ ಕಳೆದ ಹದಿನೈದು ವರ್ಷಗಳಿಂದ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕನ್ನಡತಿ ಆಗಿರುವ ಅವರು ತೆಲುಗು ತಮಿಳು ಸಿನಿಮಾರಂಗವನ್ನು ಅಕ್ಷರಶಃ ಆಳಿದ್ದವರು. ಆದರೆ ಅವರ ನಿಜ ಹೆಸರು ಅನುಷ್ಕಾ ಶೆಟ್ಟಿ ಅಲ್ಲ.

  ಹೌದು, ಅನುಷ್ಕಾ ಶೆಟ್ಟಿ ಎಂದೇ ಮನೆಮಾತಾಗಿರುವ ಈ ನಾಯಕಿಯ ನಿಜ ಹೆಸರು ವಿಚಿತ್ರವಾಗಿದೆ. ಅನುಷ್ಕಾ ರ ನಿಜ ಹೆಸರು ಕೇಳಿದರೆ ಶಾಕ್ ಆಗುವಷ್ಟು ಭಿನ್ನವಾಗಿದೆ ಅವರ ಹೆಸರು.

  ಪ್ರತಿಬಾರಿ ಅನುಷ್ಕಾ ಶೆಟ್ಟಿ ಕಾಲಿಗೆ ಬೀಳ್ತಾರಂತೆ ಪುರಿ ಜಗನ್ನಾಥ್, ರವಿತೇಜಪ್ರತಿಬಾರಿ ಅನುಷ್ಕಾ ಶೆಟ್ಟಿ ಕಾಲಿಗೆ ಬೀಳ್ತಾರಂತೆ ಪುರಿ ಜಗನ್ನಾಥ್, ರವಿತೇಜ

  ಅನುಷ್ಕಾ ಶೆಟ್ಟಿ ಅವರಿಗೆ ಪೋಷಕರು ಇಟ್ಟಿದ್ದ ಹೆಸರು 'ಸ್ವೀಟಿ ಶೆಟ್ಟಿ'. ಹೌದು, ಅನುಷ್ಕಾ ಶೆಟ್ಟಿ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ಮಂಗಳೂರಿನವರಾದ ಅನುಷ್ಕಾ ಶೆಟ್ಟಿ, ಬಿಸಿಎ ಪದವಿ ಮಾಡಿದ್ದಾರೆ. ಸಿನಿಮಾ ಸೇರುವ ಮುಂಚೆ ಯೋಗ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದರು.

  ಹೆಸರು ಬದಲಾಯಿಸಿಕೊಳ್ಳಲು ಹೇಳಿದ್ದ ನಾಗಾರ್ಜುನ

  ಹೆಸರು ಬದಲಾಯಿಸಿಕೊಳ್ಳಲು ಹೇಳಿದ್ದ ನಾಗಾರ್ಜುನ

  ಆದರೆ ಅವರು ಮೊದಲ ಸಿನಿಮಾ 'ಸೂಪರ್‌' ಗೆ ಆಯ್ಕೆ ಆದಾಗ, ಸಿನಿಮಾದ ನೇಮ್‌ ಕಾರ್ಡ್‌ಗಾಗಿ ಹೆಸರನ್ನು ಬದಲಾಯಿಸುವ ಸಲಹೆ ನೀಡಿದ್ದು ನಟ ನಾಗಾರ್ಜುನ. ಮೊದಲಿಗೆ ಅನುಷ್ಕಾ ಅವರ ನಿಜ ಹೆಸರು ಸ್ವೀಟಿ ಎಂಬುದನ್ನು ನಂಬಿರಲಿಲ್ಲವಂತೆ ನಾಗಾರ್ಜುನ ಮತ್ತು ನಿರ್ದೇಶಕ ಪುರಿ ಜಗನ್ನಾಥ್, ನಂತರ ಅನುಷ್ಕಾ ಅವರ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳನ್ನು ನೋಡಿದ ನಂತರವೇ ನಿಜ ಗೊತ್ತಾಗಿದ್ದಂತೆ.

  ಹಾಡುಗಾರ್ತಿಯ ಹೆಸರು ಅನುಷ್ಕಾ ಗೆ

  ಹಾಡುಗಾರ್ತಿಯ ಹೆಸರು ಅನುಷ್ಕಾ ಗೆ

  ಹೆಸರು ಬದಲಾವಣೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ಹುಡುಗಿಯೊಬ್ಬಳು ಸೂಪರ್ ಸಿನಿಮಾದ ಹಾಡಿನ ಟ್ರ್ಯಾಕ್ ಹಾಡಲು ಅನುಷ್ಕಾ ಹೆಸರಿನ ಹುಡುಗಿಯೊಬ್ಬಳು ಬಂದಿದ್ದಳಂತೆ. ಅವಳ ಹೆಸರನ್ನೇ ಇಡಲು ಪುರಿ ಜಗನ್ನಾಥ್ ಸೂಚಿಸಿದ್ದಾರೆ. ನಾಗಾರ್ಜುನ್ ಅವರಿಗೂ ಈ ಹೆಸರು ಇಷ್ಟವಾಗಿದೆ.

  ಅನುಷ್ಕಾ ಶೆಟ್ಟಿ ಚಿತ್ರತಂಡಕ್ಕೆ ನೀಡಿದ್ದರು ಸಲಹೆ

  ಅನುಷ್ಕಾ ಶೆಟ್ಟಿ ಚಿತ್ರತಂಡಕ್ಕೆ ನೀಡಿದ್ದರು ಸಲಹೆ

  ಆಗ ಸ್ವೀಟಿ ಆಗಿದ್ದ ಅನುಷ್ಕಾ ಗೆ ಈ ಹೆಸರು ಹೇಳಿದಾಗ ಮೊದಲು ಗೊಂದಲದಿಂದಿದ್ದ ನಟಿ, 'ಪದೇ ಪದೇ ನನ್ನ ಹೆಸರನ್ನು ಕರೆಯುತ್ತಿರಿ ಸೂಟ್ ಆಗುತ್ತಾ ನೋಡ್ತೀನಿ, ಸರಿ ಬರಲಿಲ್ಲವೆಂದರೆ ಬದಲಾಯಿಸುವ' ಎಂದಿದ್ದರಂತೆ ಅನುಷ್ಕಾ.

  ಹೆಸರು ಅಭ್ಯಾಸವಾಗಲು ಬಹು ದಿನ ಬೇಕಾಯಿತಂತೆ

  ಹೆಸರು ಅಭ್ಯಾಸವಾಗಲು ಬಹು ದಿನ ಬೇಕಾಯಿತಂತೆ

  ಆ ನಂತರ ಸೆಟ್‌ ನಲ್ಲಿದ್ದ ಎಲ್ಲರೂ ಅನುಷ್ಕಾ ಹೆಸರಿಡಿದು ಕರೆಯಲು ಪ್ರಾರಂಭಿಸಿದರಂತೆ. ಮೊದಲಿಗೆ ಅನುಷ್ಕಾ ಗೆ ಹೊಸ ಹೆಸರು ಅಭ್ಯಾಸವಾಗಿರಲಿಲ್ಲವಂತೆ. ಆದರೆ ದಿನಗಳೆದಂತೆ ಅನುಷ್ಕಾ ಎಂದು ಕರೆದಾಗ ಪ್ರತಿಕ್ರಿಯಿಸುವುದು ಅಭ್ಯಾಸವಾಯಿತಂತೆ.

  English summary
  Anushka Shetty's real name is unique. Nagarjuna and Puri Jagannadh changed her name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X