For Quick Alerts
  ALLOW NOTIFICATIONS  
  For Daily Alerts

  400 ಕೋಟಿಯ 'ಆದಿಪುರುಷ್'ಗಿಂತ 17 ಕೋಟಿಯ 'ಹನು-ಮಾನ್‌' ಟೀಸರ್‌ ಎಷ್ಟೋ ಉತ್ತಮ ಎಂದ ನೆಟ್ಟಿಗರು!

  |

  ಇತ್ತೀಚೆಗೆ ಮತ್ತೊಂದು ಐತಿಹಾಸಿಕ ಹಿನ್ನೆಲೆಯುಳ್ಳ ಸಿನಿಮಾ 'ಹನು-ಮಾನ್' ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಆದಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಮಾತುಗಳೇ ಕೇಳಿಬರುತ್ತಿದೆ.

  ಇನ್ನೊಂದು ಕಡೆ 'ಹನು-ಮಾನ್' ಟೀಸರ್ ಅನ್ನು ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ಟೀಸರ್ ಜೊತೆ ಹೋಲಿಕೆ ಮಾಡಲಾಗುತ್ತಿದೆ. ನೆಟ್ಟಿಗರಂತೂ 'ಆದಿಪುರುಷ್' ಟೀಸರ್ ಇಟ್ಟುಕೊಂಡು ಮನಸ್ಸಿಗೆ ಬಂದಂತೆ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

  ಟ್ರೋಲ್ ಮಾಡಿದವರು ಬೆರಗಾಗುವಂತಹ ಅಪರೂಪದ ದಾಖಲೆ ಬರೆದ 'ಆದಿಪುರುಷ್'ಟ್ರೋಲ್ ಮಾಡಿದವರು ಬೆರಗಾಗುವಂತಹ ಅಪರೂಪದ ದಾಖಲೆ ಬರೆದ 'ಆದಿಪುರುಷ್'

  ಪ್ರಭಾಸ್ ಸಿನಿಮಾದ ಟೀಸರ್ ಮತ್ತೆ ಟ್ರೋಲ್ ಆಗುತ್ತಿದ್ದಂತೆ ಅಭಿಮಾನಿಗಳು ಅಖಾಡಕ್ಕಿಳಿದಿದ್ದಾರೆ. 'ಹನು-ಮಾನ್' ಹಾಗೂ 'ಆದಿಪುರುಷ್' ಸಿನಿಮಾದ ನಡುವೆ ಇರುವ ವ್ಯತ್ಯಾಸವನ್ನು ಹೇಳುವುದಕ್ಕೆ ಮುಂದಾಗಿದ್ದಾರೆ. ಅಸಲಿಗೆ ಈ ಎರಡೂ ಸಿನಿಮಾಗಳ ನಡುವೆ ಇರುವ ವ್ಯತ್ಯಾಸವೇನು? ತಿಳಿಯಲು ಮುಂದೆ ಓದಿ.

  'ಹನುಮಾನ್' ಸಿನಿಮಾ ಹಿನ್ನೆಲೆ ಏನು?

  'ಹನುಮಾನ್' ಸಿನಿಮಾ ಹಿನ್ನೆಲೆ ಏನು?

  ಕೆಲವು ಕ್ಷಣಗಳ ಹಿಂದಷ್ಟೇ 'ಹನು-ಮಾನ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಭಾರತದ ಮೊದಲ ಸೂಪರ್ ಹೀರೊ ಹನುಮಾನ್ ಬಗ್ಗೆ ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ ಪ್ರಶಾಂತ್ ವರ್ಮಾ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ತೇಜ ಸಜ್ಜ ನಟಿಸುತ್ತಿದ್ದಾರೆ. ಹಾಗೇ ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದು, ಶರತ್ ಕುಮಾರ್, ವರಲಕ್ಷ್ಮಿ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ಎಲ್ಲರ ಗಮನ ಸೆಳೆದಿದೆ. ಇತ್ತ ಆದಿಪುರುಷ್ ಸಿನಿಮಾ ಜೊತೆ ಹೋಲಿಕೆ ಕೂಡ ಮಾಡಲಾಗುತ್ತಿದೆ.

  'ಆದಿಪುರುಷ್' ಬಿಡುಗಡೆ ಮುಂದೂಡಿಕೆಯಿಂದ 'ಸಲಾರ್'ಗೆ ಸಂಕಷ್ಟ? ಚಿತ್ರರಂಗದಲ್ಲೇನಿದು ಚರ್ಚೆ?'ಆದಿಪುರುಷ್' ಬಿಡುಗಡೆ ಮುಂದೂಡಿಕೆಯಿಂದ 'ಸಲಾರ್'ಗೆ ಸಂಕಷ್ಟ? ಚಿತ್ರರಂಗದಲ್ಲೇನಿದು ಚರ್ಚೆ?

  'ಆದಿಪುರುಷ್' ಎಲ್ಲಿ? 'ಹನುಮಾನ್' ಎಲ್ಲಿ?

  'ಆದಿಪುರುಷ್' ಎಲ್ಲಿ? 'ಹನುಮಾನ್' ಎಲ್ಲಿ?

  'ಹನುಮಾನ್' ಸಿನಿಮಾದ ಬಜೆಟ್ 17 ಕೋಟಿ ರೂ. ಎನ್ನಲಾಗಿದೆ. ಅದೇ 'ಆದಿಪುರುಷ್' ಸಿನಿಮಾ 400 ಕೋಟಿ ರೂ. ಅಧಿಕ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಈ ಕಾರಣಕ್ಕೆ ನೆಟ್ಟಿಗರು 400 ಕೋಟಿ ರೂ. ಆದಿಪುರುಷ್‌ಗಿಂತ 17 ಕೋಟಿ ರೂ. 'ಹನು-ಮಾನ್' ಉತ್ತಮ ಎಂದಿದ್ದರು. ಅದಕ್ಕೆ ಪ್ರಭಾಸ್ ಫ್ಯಾನ್ಸ್ ಅಖಾಡಕ್ಕಿಳಿದಿದ್ದು, ಎರಡೂ ಸಿನಿಮಾಗಳಿಗಿರೋ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಡಲು ಹೊರಟಿದ್ದಾರೆ. 'ಆದಿಪುರುಷ್' ಸಂಪೂರ್ಣ ಐತಿಹಾಸಿಕ ಸಿನಿಮಾ. ಇಲ್ಲಿ ಪ್ರತಿಯೊಂದು ಪಾತ್ರವನ್ನು ತ್ರೇತಾ ಯುಗದಲ್ಲಿ ತೋರಿಸಬೇಕಿದೆ. ಆದರೆ, 'ಹನುಮಾನ್‌'ಗೆ ಅಂತಹ ಯಾವುದೇ ಸಮಸ್ಯೆಯಿಲ್ಲ. ಅಲ್ಲದೆ ಇಲ್ಲಿ ಹನುಮಾನ್‌ ಅನ್ನು ಆಧುನಿಕ ಮಾನವನಾಗಿ ತೋರಿಸಲಾಗಿದೆ. ಎಂದು ವಿವರಿಸಿದ್ದಾರೆ.

  'ಆದಿಪುರುಷ್'ಗಿಂತ ಕಡಿಮೆ ಗ್ರಾಫಿಕ್ಸ್

  'ಆದಿಪುರುಷ್'ಗಿಂತ ಕಡಿಮೆ ಗ್ರಾಫಿಕ್ಸ್

  ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾದಲ್ಲಿ ಹೆಚ್ಚು ಗ್ರಾಫಿಕ್ಸ್ ಅನ್ನು ಬಳಸಲಾಗಿದೆ. ಅದೇ ಇನ್ನೊಂದು ಕಡೆ 'ಹನುಮಾನ್‌'ಗೆ ಹೆಚ್ಚು ಗ್ರಾಫಿಕ್ಸ್ ಬೇಕಾಗಿಲ್ಲ. ಹೀಗಾಗಿ ಎರಡೂ ಸಿನಿಮಾವನ್ನೂ ಹೋಲಿಕೆ ಮಾಡುವುದು ಸರಿಯಲ್ಲ. ಕಡಿಮೆ ಗ್ರಾಫಿಕ್ಸ್ ಇರುವುದರಿಂದ ಸಿನಿಮಾ ಬಜೆಟ್ ಕಡಿಮೆ. ಇಡೀ ಸಿನಿಮಾ ಗ್ರಾಫಿಕ್ಸ್ ಇರೋದ್ರಿಂದ ನೂರಾರು ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

  'ಹನುಮಾನ್‌' ಟೀಸರ್‌ನಲ್ಲಿ ಲೈವ್ ಆಕ್ಷನ್ ಇಲ್ಲ

  'ಹನುಮಾನ್‌' ಟೀಸರ್‌ನಲ್ಲಿ ಲೈವ್ ಆಕ್ಷನ್ ಇಲ್ಲ

  ಟೀಸರ್‌ನಲ್ಲಿ ತೋರಿಸಿರುವಂತೆ 'ಹನು-ಮಾನ್'ನಲ್ಲಿ ಬ್ಯಾಕ್‌ಗ್ರೌಂಡ್‌ ಅನ್ನು ಸಿಜಿಯಲ್ಲಿ ಕ್ರಿಯೇಟ್ ಮಾಡಲಾಗಿದೆ. ಅದೇ ಬೆಟ್ಟಗಳು, ಜಲಪಾತ, ಗುಹೆಗಳು ಇವೆಲ್ಲವನ್ನೂ ಸಿಜಿ ಮಾಡಲಾಗಿದೆ. ಆದರೆ, ಆದಿಪುರುಷ್‌ನಲ್ಲಿ ಲೈವ್ ಆಕ್ಷನ್ ಸೀನ್‌ಗಳೇ ಹೆಚ್ಚಿವೆ. ಅಲ್ಲದೆ ತ್ರೇತಾ ಯುಗವನ್ನು 3ಡಿಯಲ್ಲಿ ತೋರಿಸಲಾಗಿದೆ ಎಂದು ಪ್ರಭಾಸ್ ಅಭಿಮಾನಿಗಳು ವಾದವನ್ನು ಮುಂದಿಟ್ಟಿದ್ದಾರೆ. ಆದ್ರೆ, ನೆಟ್ಟಿಗರು ಮಾತ್ರ ಇದ್ಯಾವುದಕ್ಕೂ ಮಣಿಯದೆ ತಮ್ಮ ವಾದವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.

  English summary
  What Is The Difference Between Hanuman And Prabhas Starrer Adipurush teaser, Know More.
  Monday, November 21, 2022, 23:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X