For Quick Alerts
  ALLOW NOTIFICATIONS  
  For Daily Alerts

  ಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆ

  |

  ಟಾಲಿವುಡ್ ಪ್ರತಿಷ್ಠಿತ ತಾರಾ ಜೋಡಿಗಳಲ್ಲೊಂದು ನಾಗಚೈತನ್ಯ ಮತ್ತು ಸಮಂತಾ ಜೋಡಿ. ಅವರ ಕುಟುಂಬದ ಅನ್ಯೋನ್ಯತೆ, ಪರಸ್ಪರ ಪ್ರೀತಿ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳ ಮೂಲಕ ಕಾಣುತ್ತಲೇ ಇರುತ್ತದೆ.

  'ರಂಗಸ್ಥಳಂ'ದ ಸಮಂತಾ ಶೈಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ | Rashmika Mandanna | FILMIBEAT KANNADA

  ಮದುವೆಯಾದ ಮೇಲೆ ಸಮಂತಾ ನಾಗಾರ್ಜುನ ಕುಟುಂಬದೊಂದಿಗೆ ತುಂಬಾ ಚೆನ್ನಾಗಿಯೇ ಹೊಂದಿಕೆ ಆದಂತಿದ್ದಾರೆ. ಸಮಂತಾ-ನಾಗಚೈತನ್ಯ, ನಾಗಾರ್ಜು-ಅಮಲಾ ದಂಪತಿ ಕೆಲವು ತಿಂಗಳುಗಳ ಹಿಂದಷ್ಟೆ ಪ್ರವಾಸಕ್ಕೆ ಸಹ ಹೋಗಿಬಂದಿದ್ದಾರೆ.

  ಎಲ್ಲಾ ಹಬ್ಬಗಳು, ವಿಶೇಷ ಆಚರಣೆಗಳನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತಾರೆ. ನಾಗಾರ್ಜುನ-ಅಮಲಾ ಗೂ ಸಹ ಸೊಸೆ ಸಮಂತ ಅತ್ಯಂತ ಅಚ್ಚುಮೆಚ್ಚಂತೆ.

  ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಮಾವ ನಾಗಾರ್ಜುನ ಬಗ್ಗೆ ಸಮಂತಾ ಗೆ ಪ್ರಶ್ನೆಯೊಂದು ಎದುರಾಯಿತು. 'ನಿಮಗೆ ಮಾವ ನಾಗಾರ್ಜುನ ನೀಡಿದ ಅತಿ ಮಹತ್ವದ ಉಡುಗೊರೆ ಯಾವುದು?' ಎಂಬುದು ಪ್ರಶ್ನೆಯಾಗಿತ್ತು, ಸಮಂತಾ ಸಹ ಸುಂದರವಾದ ಉತ್ತರವನ್ನೇ ನೀಡಿದ್ದಾರೆ.

  ಗೊಂದಲಕ್ಕೆ ಕಾರಣವಾದ ಸಮಂತಾ ಉತ್ತರ

  ಗೊಂದಲಕ್ಕೆ ಕಾರಣವಾದ ಸಮಂತಾ ಉತ್ತರ

  ಮಾವ ನಾಗಾರ್ಜುನ ನೀಡಿದ ದೊಡ್ಡ ಉಡುಗೊರೆ ಎಂದರೆ 'ಸಮ್ಮತಿ' (ಒಪ್ಪಿಗೆ) ಎಂದು ಸಮಂತಾ ಉತ್ತರಿಸಿದ್ದಾರೆ. ಸಮಂತಾ ನೀಡಿರುವ ಉತ್ತರ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ

  ನಾಗಾರ್ಜುನ ಒಪ್ಪಿಗೆ ನೀಡುದ್ದು ಯಾವುದಕ್ಕೆ?

  ನಾಗಾರ್ಜುನ ಒಪ್ಪಿಗೆ ನೀಡುದ್ದು ಯಾವುದಕ್ಕೆ?

  ಸಮಂತಾ ನೀಡಿದ ಉತ್ತರ ಹೊಸ ಗೊಂದಲಕ್ಕೆ ಕಾರಣವಾಗಿದೆ. ಮದುವೆಗೆ ಒಪ್ಪಿಗೆ ನೀಡಿದ್ದು ಉಡುಗೊರೆಯೋ ಅಥವಾ ಮದುವೆಯಾದ ಮೇಲೂ ನಟಿಸಲು ಅವಕಾಶ ಕೊಟ್ಟಿದ್ದು ಉಡುಗೊರೆಯೊ? ಎಂಬ ಹೊಸ ಪ್ರಶ್ನೆ ಉದ್ಭವಿಸಿದೆ.

  ಮದುವೆಯಾದ ಮೇಲೆ ನಟಿಸುವುದಿಲ್ಲ ಎಂದುಕೊಂಡಿದ್ದರು

  ಮದುವೆಯಾದ ಮೇಲೆ ನಟಿಸುವುದಿಲ್ಲ ಎಂದುಕೊಂಡಿದ್ದರು

  ಸಮಂತಾ ಮದುವೆಯಾದ ನಂತರ ನಟಿಸುವುದಿಲ್ಲ ಎನ್ನಲಾಗಿತ್ತು, ಆದರೆ ಅದನ್ನು ಸುಳ್ಳು ಮಾಡಿ ಸಮಂತಾ ನಟನೆ ಮುಂದುವರೆಸಿದ್ದಾರೆ. ಬೋಲ್ಡ್ ದೃಶ್ಯಗಳಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಈಗಲೂ ಅವರ ಕೈಲಿ ಹಲವು ಸಿನಿಮಾಗಳಿವೆ.

  ಅಮಲಾ ಅಕ್ಕಿನೇನಿ ಸಿನಿಮಾದಿಂದ ದೂರ ಉಳಿದಿದ್ದರು

  ಅಮಲಾ ಅಕ್ಕಿನೇನಿ ಸಿನಿಮಾದಿಂದ ದೂರ ಉಳಿದಿದ್ದರು

  ನಾಗಾರ್ಜುನ ಮತ್ತು ಅಮಲಾ ಅವರು ವಿವಾಹವಾದ ನಂತರ ಅಮಲಾ ಅವರು ಸಿನಿಮಾದಿಂದ ದೂರ ಉಳಿದಿದ್ದರು. ಹಾಗಾಗಿ ಸಮಂತಾ ಸಹ ನಟನೆಯಿಂದ ದೂರ ಉಳಿಯುತ್ತಾರೆ ಎನ್ನಲಾಗಿತ್ತು, ಆದರೆ ನಾಗಾರ್ಜುನ ಅವರು ಸೊಸೆಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದಾರೆ. ನಾಗಚೈತನ್ಯ ಸಹ.

  English summary
  Which gift did Akkineni Nagarjuna gave to his daughter in law Samantha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X