Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡತಿಯ ಮದುವೆಯಾದ ತೆಲುಗು ನಟ ನಾಗಶೌರ್ಯಗೆ ಸಿಕ್ಕ ವರದಕ್ಷಿಣೆ ಎಷ್ಟು?
ವರದಕ್ಷಿಣೆ ಸ್ವೀಕಾರ ಶಿಕ್ಷಾರ್ಹ ಅಪರಾಧ. ಹಾಗಾಗಿ ವರದಕ್ಷಿಣೆ ಎಂಬುದು 'ಉಡುಗೊರೆ'ಯ ಅನ್ವರ್ಥನಾಮ ಪಡೆದುಕೊಂಡಿದೆ. ಮದುವೆಯಾಗುವ ವರ, ದಕ್ಷಿಣೆಗಾಗಿ ಕೇಳಲೇ ಬೇಕೆಂದೇನೂ ಇಲ್ಲ, ವಧುವಿನ ಕಡೆಯವರು ಸ್ಥಿತವಂತರಾಗಿದ್ದರೆ ಮೊಗೆ-ಮೊಗೆದು ಉಡುಗೊರೆಗಳನ್ನು ನೀಡುತ್ತಾರೆ.
ತೆಲುಗು ಚಿತ್ರರಂಗದ ಜನಪ್ರಿಯ ನಟ ನಾಗಶೌರ್ಯ ಇತ್ತೀಚೆಗೆ ಕನ್ನಡತಿ ಅನುಷಾ ಶೆಟ್ಟಿಯವರನ್ನು ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿಯೇ ವಿವಾಹ ನಡೆದಿದ್ದು, ತೆಲುಗು ಚಿತ್ರರಂಗದ ಗಣ್ಯರು ಸೇರಿದಂತೆ ಕೆಲವು ಉದ್ಯಮಿಗಳು ರಾಜಕಾರಣಿಗಳು ಸಹ ವಿವಾಹವಾದಲ್ಲಿ ಭಾಗವಹಿಸಿದ್ದರು. ಅನುಷಾ ಶೆಟ್ಟಿ ಹಾಗೂ ನಾಗ ಶೌರ್ಯ ಬೆಂಗಳೂರಿನಲ್ಲಿ ಮದುವೆಯಾಗಿ ಇವರ ಆರತಕ್ಷತೆ ಕಾರ್ಯ ಹೈದಬಾರಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ವರದಕ್ಷಿಣೆ
ತೆಗೆದುಕೊಂಡಿದ್ದರೇ
ಅಲ್ಲು
ಅರ್ಜುನ್,
ಮಾವ
ಹೇಳಿದ್ದೇನು?
ಈಗ ತೆಲುಗು ಚಿತ್ರರಂಗದಲ್ಲಿ ನಾಗಶೌರ್ಯಗೆ ದೊರೆತ ವರದಕ್ಷಿಣೆ ಅಥವಾ ಉಡುಗೊರೆಗಳ ಬಗ್ಗೆ ಚರ್ಚೆ ಏರ್ಪಟ್ಟಿದೆ. ನಾಗಶೌರ್ಯ ವಿವಾಹವಾದ ಅನುಷಾ ಶೆಟ್ಟಿ ಮನೆಯವರು ಒಳ್ಳೆಯ ಸ್ಥಿತಿವಂತರೆ ಆಗಿರುವ ಕಾರಣ ಈ ಚರ್ಚೆ ತೆಲುಗು ಚಿತ್ರೋದ್ಯಮದಲ್ಲಿ ನಡೆಯುತ್ತಿದೆ.

ಯಶಸ್ವಿ ಉದ್ಯಮಿ ಅನುಷಾ ಶೆಟ್ಟಿ
ನಾಗ ಶೌರ್ಯ ಪತ್ನಿ ಅನುಷಾ ಶೆಟ್ಟಿ ಖ್ಯಾತ ಉದ್ಯಮಿಯ ಪುತ್ರಿ ಆಗಿರುವ ಜೊತೆಗೆ ಸ್ವತಃ ಯಶಸ್ವಿ ಉದ್ಯಮಿಯೂ ಆಗಿದ್ದಾರೆ. ಡಿಸೈನ್ಸ್ ಓಪಿಸಿ ಪ್ರೈವೆಟ್ ಲಿಮಿಟೆಡ್ ಅನ್ನೋ ಖಾಸಗಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅನುಷಾ ಶೆಟ್ಟಿಗೆ 2019ರಲ್ಲಿ ಡಿಸೈನರ್ ಆಫ್ ದಿ ಇಯರ್ ಪ್ರಶಸ್ತಿ ಕೂಡ ಲಭಿಸಿದೆ. ಅನುಷಾ ಒಬ್ಬರ ನೆಟ್‌ವರ್ತ್ ಸುಮಾರು 80 ಕೋಟಿ ಇದೆ ಎನ್ನಲಾಗುತ್ತಿದೆ. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಬಿ. ಕಾಂ ಪದವಿಯನ್ನು ಮುಗಿಸಿದ್ದಾರೆ. ಅಲ್ಲದೆ ಪಾಂಡಿಚೇರಿ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಭಾರತದ ಯುವ ಮಹಿಳಾ ಉದ್ಯಮಿಗಳಲ್ಲಿ ಅನುಷಾ ಕೂಡ ಒಬ್ಬರು.

ಕಾರು ಹಾಗೂ ಮನೆ ಉಡುಗೊರೆ
ನಾಗ ಶೌರ್ಯ ಅನ್ನು ವಿವಾಹವಾಗಿರುವ ಅನುಷಾ ತಮ್ಮ ಸಂಸ್ಥೆಯ ಪಾಲುದಾರಿಕೆಯನ್ನು ನಾಗ ಶೌರ್ಯಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅನುಷಾ ಸಂಸ್ಥೆಯಲ್ಲಿ ನಾಗ ಶೌರ್ಯ ಬಂಡವಾಳ ಹೂಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇನ್ನು ಅನುಷಾ ಶೆಟ್ಟಿಯವರ ತಂದೆ, ತಮ್ಮ ಅಳಿಯನಿಗೆ ಬೆಂಗಳೂರಿನಲ್ಲಿ ಎಂಟು ಕೋಟಿ ಮೌಲ್ಯದ ಮನೆಯೊಂದನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಐಶಾರಾಮಿ ಕಾರೊಂದನ್ನು ಸಹ ಅಳಿಯನಿಗೆ ಉಡುಗೊರೆಯಾಗಿ ಅನುಷಾ ಶೆಟ್ಟಿಯವರ ತಂದೆ ನೀಡಿದ್ದಾರಂತೆ.

ಟಾಲಿವುಡ್‌ನ ಯುವ ನಟ ನಾಗಶೌರ್ಯ
ಟಾಲಿವುಡ್‌ನ ಯುವ ನಟ ನಾಗ ಶೌರ್ಯ ಉದಯೋನ್ಮುಖ ನಟ. ಇನ್ನೂ ಈ ನಟ ನಟಿಸಿದ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗದೇ ಹೋದರೂ, 'ಚಲೋ' ಹಾಗೂ 'ಊಹಲು ಗುಸಗುಸಲಾಡೆ' ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. 'ಕ್ರಿಕೆಟ್ ಗರ್ಲ್ಸ್ & ಬಿಯರ್' ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ನಾಗಶೌರ್ಯ ಬಿಗ್ ಹಿಟ್‌ಗಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಕೈಯಲ್ಲಿ ಎರಡು ಸಿನಿಮಾಗಳಿವೆ. ಇವುಗಳ ಶೂಟಿಂಗ್ ನಡೆಯುತ್ತಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗುತ್ತಿದೆ.