For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ಗಳಿಕೆ ಹೊಂದಿರುವ ತೆಲುಗು ನಿರೂಪಕಿಯರು ಯಾರು?

  By ಜೇಮ್ಸ್ ಮಾರ್ಟಿನ್
  |

  ತೆಲುಗು ಸಿನಿಮಾ ರಂಗದಲ್ಲಿ ಕೆಲ ಹೀರೊಯಿನ್ ಗಳಿಗಿಂತಲೂ ಹೆಚ್ಚು ಸಂಭಾವನೆ ಸ್ಟಾರ್ ನಿರೂಪಕಿಯರಿಗೆ ಸಿಗುತ್ತದೆ ಎಂಬುದು ಹುಬ್ಬೇರಿಸುವಂಥ ವಿಚಾರವಾದರೂ ಸತ್ಯ. ಕೆಲವು ಹೀರೊಗಳು, ಪ್ರೊಡಕ್ಷನ್ ಹೌಸ್ ನವರು ತಮ್ಮ ಆಡಿಯೋ ಲಾಂಚ್ ಕಾರ್ಯಕ್ರಮದ ದಿನಾಂಕ ನಿಗದಿ ಮಾಡುವ ಸ್ಟಾರ್ ನಿರೂಪಕಿಯರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಮುಹೂರ್ತ ಫಿಕ್ಸ್ ಮಾಡುವುದು ಸುಳ್ಳಲ್ಲ. ಸಿನಿಮಾ ಆಡಿಯೋ ಲಾಂಚ್, ಸಕ್ಸಸ್ ಮೀಟ್, ಪ್ರಶಸ್ತಿ ಪ್ರದಾನ ಸಮಾರಂಭ, ಸ್ಟಾರ್ ನೈಟ್ ಕಾರ್ಯಕ್ರಮ ಹೀಗೆ ತೆಲುಗು ಸಿನಿಮಾ ಜಗತ್ತಿನ ಯಾವುದೇ ಕಾರ್ಯಕ್ರಮವಿರಲಿ ಅದಕ್ಕೆ ಸ್ಟಾರ್ Anchors ಬೇಕೇ ಬೇಕು. ಯಾರು ಈ ಸ್ಟಾರ್ ನಿರೂಪಕಿ ಯಾರು? ಇವರು ಒಂದು ಕಾರ್ಯಕ್ರಮಕ್ಕೆ ಪಡೆಯುವ ಸಂಭಾವನೆ ಅಂದಾಜು ಎಷ್ಟಿರಬಹುದು? ಎಂಬ ಲೆಕ್ಕಾಚಾರ ಇಲ್ಲಿದೆ..

  Yash spoke about Challenging Star Darshan's Robert Cinema

  ತೆಲುಗು ಚಿತ್ರರಂಗದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಎಲ್ಲರ ಮೆಚ್ಚುಗೆಯ ನಿರೂಪಕಿಯರಲ್ಲಿ ಸುಮಾ ಅಗ್ರಸ್ಥಾನದಲ್ಲಿದ್ದರೆ, ನಂತರ ಬಹುಬೇಡಿಕೆಯ ಆಂಕರ್ಸ್ ಎಂದರೆ ಅನಸೂಯ ಹಾಗೂ ರಶ್ಮಿ ಗೌತಮ್. ಅಬಾಲವೃದ್ಧರಾದಿಯಾಗಿ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸುವ ಮಾತುಗಾರಿಕೆ ಹೊಂದಿರುವ ಸುಮಾ ಮೂಲತಃ ಮಲೆಯಾಳಿ. ಪಾಲಕ್ಕಾಡ್ ನಲ್ಲಿ ಜನಿಸಿದ ಸುಮಾ ನಂತರ ತೆಲುಗು ನಟ ರಾಜೀವ್ ಕನಕಲಾರನ್ನು ಮದುವೆಯಾದರು. ಈಗ ತೆಲುಗು ಚಿತ್ರರಂಗದ ಅಘೋಷಿತ ರಾಯಭಾರಿಯಾಗಿದ್ದಾರೆ.

  ದೊಡ್ಡ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲು ತಮನ್ನಾ ಕೇಳಿದ್ರು ಭಾರಿ ಮೊತ್ತದೊಡ್ಡ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲು ತಮನ್ನಾ ಕೇಳಿದ್ರು ಭಾರಿ ಮೊತ್ತ

  ಸುಮಾ ಕಾಲ್ ಶೀಟ್, ಕಾರ್ಯಕ್ರಮ ವಿವರ ನೋಡಿಕೊಂಡು ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳನ್ನು ನಿಗದಿ ಮಾಡಿದ ಉದಾಹರಣೆಗಳಿವೆ. 21 ವರ್ಷ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಮಾಗೆ ಆರಂಭದಲ್ಲಿ ಝಾನ್ಸಿ, ಉದಯಬಾನು ಮುಂತಾದ ಆಂಕರ್ ಗಳಿಂದ ಸ್ಪರ್ಧೆ ಎದುರಾಗಿತ್ತು. ಆದರೆ, ನಂತರ ಸುಮಾ ಅಂಕರಿಂಗ್ ಮಾತ್ರವಲ್ಲದೆ, ನಟಿ, ಗಾಯಕಿ, ನಿರ್ಮಾಪಕಿಯಾಗಿ ಬೆಳೆದರು. ಮಲೆಯಾಳಂ, ತೆಲುಗು ಅಲ್ಲದೆ, ಹಿಂದಿ, ಇಂಗ್ಲೀಷ್ ಹಾಗೂ ತಮಿಳು ಭಾಷೆಯಲ್ಲೂ ನಿರರ್ಗಳವಾಗಿ ಮಾತನಾಡುವ ಕಲೆ ಸುಮಾಗೆ ಒಲಿದಿದೆ..ಸ್ಟಾರ್ ಆಂಕರ್ಸ್ ಬಗ್ಗೆ ಇನ್ನಷ್ಟು ಮುಂದೆ ಓದಿ...

  ಟಿವಿ, ಸಿನಿಮಾ ಲೋಕ ಎರಡಕ್ಕೂ ಸೈ ಎನಿಸಿದ ಸುಮಾ

  ಟಿವಿ, ಸಿನಿಮಾ ಲೋಕ ಎರಡಕ್ಕೂ ಸೈ ಎನಿಸಿದ ಸುಮಾ

  1991ರಲ್ಲಿ ಮಲಯಾಳಂ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಸುಮಾ, 1996ರಲ್ಲಿ ಟಿವಿ ಸೀರಿಯಲ್ ಪ್ರಪಂಚಕ್ಕೆ ಕಾಲಿಟ್ಟರು. ಸ್ವಯಂವರಂ, ಅನ್ವೇಷಿತ, ಗೀತಾಂಜಲಿ, ರಾವೋಯಿ ಚಂದಮಾಮಾ ಪ್ರಮುಖ ಸೀರಿಯಲ್ಸ್. ಟಿವಿ9, ಈಟಿವಿ, ಮಾಟಿವಿ, ಜೀ ಟಿವಿಗಳಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿ ಹೊಸ ಕ್ರೇಜ್ ಹುಟ್ಟುಹಾಕಿದರು. ಈ ಟಿವಿಯ ಸ್ಟಾರ್ ಮಹಿಳಾ ಕಾರ್ಯಕ್ರಮದ ನಿರೂಪಕಿಯಾಗಿ ಹೊಸ ದಾಖಲೆ ಬರೆದಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಕಾಲ ಪ್ರಸಾರವಾದ ಮಹಿಳೆಯರ ಗೇಮ್ ಶೋ ಇದಾಗಿದೆ.

   ಚಿತ್ರರಂಗದ ನಂಟು, ಕಾರ್ಯಕ್ರಮಕ್ಕೆ ಚಾರ್ಚ್ ಅಷ್ಟೇ ಉಂಟು

  ಚಿತ್ರರಂಗದ ನಂಟು, ಕಾರ್ಯಕ್ರಮಕ್ಕೆ ಚಾರ್ಚ್ ಅಷ್ಟೇ ಉಂಟು

  ನಿರೂಪಕಿಗಾಗಿ ನಂದಿ ಪ್ರಶಸ್ತಿ ಗೆದ್ದಿರುವ ಸುಮಾ ಸೈಮಾ, ಸಿನಿಮಾ, ಜೆಮಿನಿ ಪುರಸ್ಕಾರಲು, ಅಪ್ಸರಾ ಅವಾರ್ಡ್ ಗಳಿಗೆ ಕಾಯಂ ನಿರೂಪಕಿಯಾಗಿದ್ದು, ೨೦ಕ್ಕೂ ಅಧಿಕ ಗೇಮ್ ಶೋ, ರಿಯಾಲಿಟಿ ಶೋ ನಡೆಸಿದ್ದು, ಇತ್ತೀಚಿನ ಅಲಾ ವೈಕುಂಠಪುರಮುಲೋ ಸೇರಿದಂತೆ 70ಕ್ಕೂ ಅಧಿಕ ಪ್ರಮುಖ ಸಿನಿಮಾಗಳ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಕನಿಷ್ಠ 2 ರಿಂದ 2.5 ಲಕ್ಷ ರು ಪಡೆದುಕೊಳ್ಳುತ್ತಿದ್ದಾರೆ. ದೊಡ್ಡ ಇವೆಂಟ್ ಗೆ ಇನ್ನು ದೊಡ್ಡ ಮೊತ್ತ ಸಿಗುತ್ತಿದೆ.

   ನಟಿ, ನಿರೂಪಕಿ ಅನಸೂಯ

  ನಟಿ, ನಿರೂಪಕಿ ಅನಸೂಯ

  ಅತಿ ಹೆಚ್ಚು ಟಿ ಆರ್ ಪಿ ಹೊಂದಿರುವ ಜಬರ್ದಸ್ತ್ ಹಾಸ್ಯ್ ಕಾರ್ಯಕ್ರಮದ ನಿರೂಪಕಿಯಾಗಿದ್ದ ಅನಸೂಯ, ನಟಿ, ನಿರೂಪಕಿಯಾಗಿ ಸುಮಾ ನಂತರದ ಸ್ಥಾನದಲ್ಲಿದ್ದಾರೆ. ಸಿನಿಮಾ ಹಾಗೂ ಟಿವಿ ಶೋ ನಡುವೆ ಸಮಯ ಹೊಂದಿಸುವುದೇ ಕಷ್ಟವಾಗಿದೆ. ರಂಗಸ್ಥಲಂ ಚಿತ್ರದಲ್ಲಿ ಪೋಷಕ ನಟಿ ಪಾತ್ರಕ್ಕೆ ಫಿಲಂಫೇರ್ ಗೆದ್ದಿರುವ ಅನಸೂಯ ಎಂಬಿಎ ಪದವೀಧರೆ, ಸಂಸ್ಥೆಯೊಂದರಲ್ಲಿ ಎಚ್ ಆರ್ ಎಕ್ಸಿಕ್ಯೂಟಿವ್ ಆಗಿದ್ದ ಅನಸೂಯ ಸಾಕ್ಷಿ ಟಿವಿಯಲ್ಲಿ ಸುದ್ದಿ ವಾಚಕಿಯಾಗಿದ್ದರು. ಆಡಿಯೋ ಕಾರ್ಯಕ್ರಮಕ್ಕೆ ಕನಿಷ್ಠ 2 ಲಕ್ಷ ರು ಸಂಭಾವನೆ ಪಡೆಯುತ್ತಿದ್ದಾರೆ. ಈ ನಡುವೆ ಹೆಚ್ಚು ರಿಯಾಲಿಟಿ ಶೋ ನಿರೂಪಣೆಯಲ್ಲೇ ತೊಡಗಿದ್ದಾರೆ.

   ನಟಿ, ನಿರೂಪಕಿ ರಶ್ಮಿ ಗೌತಮ್

  ನಟಿ, ನಿರೂಪಕಿ ರಶ್ಮಿ ಗೌತಮ್

  ಆರೋಗ್ಯ ಸಮಸ್ಯೆ ಕಾರಣದಿಂದ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವಾಗಿ ಘೋಷಿಸಿದ ರಶ್ಮಿ ಗೌತಮ್, ರಿಯಾಲಿಟಿ ಶೋ, ಕಾಮಿಡಿ ಶೋ ಆಂಕರ್ ಆಗಿ ಹೆಚ್ಚು ಫಾನ್ಸ್ ಹೊಂದಿದ್ದಾರೆ. ೨೦೦೨ರಿಂದ ೨೦೧೯ರತನಕ ಹಲವು ಸಿನಿಮಾಗಳಲ್ಲಿ ನಟಿಸಿರುವ ರಶ್ಮಿ ಗೌತಮ್ ಅವರಿಗೆ ಹೆಸರು ತಂದುಕೊಟ್ಟಿರುವುದು ಎಕ್ಸ್ಟ್ರಾ ಜಬರ್ ದಸ್ತ್, ಢೀ ಜೋಡಿ ಡ್ಯಾನ್ಸ್ ಶೋ. ಕಾರ್ಯಕ್ರಮವೊಂದರ ನಿರೂಪಣೆಗಾಗಿ ಒಂದೂವರೆ ಲಕ್ಷ ರು ನಿಂದ 2 ಲಕ್ಷ ರು ತನಕ ಪಡೆಯುವ ರಶ್ಮಿ, ಸದ್ಯ , ಟಿವಿ ಕಾಮಿಡಿ ಶೋನಲ್ಲೇ ಹೆಚ್ಚು ನಿರತರಾಗಿದ್ದಾರೆ.

  English summary
  Who is the highest paid Anchor in Tollywood, Telugu Film Industry. At present anchors Suma, Rashmi and Anasuya are leading the table to host events and reality shows.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X