twitter
    For Quick Alerts
    ALLOW NOTIFICATIONS  
    For Daily Alerts

    ಟಾಲಿವುಡ್ ಡ್ರಗ್ಸ್ ಕೇಸ್‌ನಲ್ಲಿ ಇಡಿ (ED) ಎಂಟ್ರಿ ಕೊಟ್ಟಿದ್ದು ಯಾಕೆ?

    By ರವೀಂದ್ರ ಕೊಟಕಿ
    |

    ಅದು 2017 ಟಾಲಿವುಡ್‌ನ ನಟ ನಟಿಯರು ನಿರ್ದೇಶಕರು ನಿರ್ಮಾಪಕರುಗಳ ಮನೆಗಳ ಮೇಲೆ ತೆಲಂಗಾಣ ಅಬಕಾರಿ ಇಲಾಖೆ (Telangana Excise and Prohibition Department) ದಾಳಿ ಮಾಡಿತು. ಆನಂತರ ಇದರ ವಿಚಾರಣೆಗಾಗಿ ಪ್ರತ್ಯೇಕವಾದ ವಿಚಾರಣ ತಂಡವನ್ನು ಕೂಡ ನೇಮಿಸಲಾಯಿತು. ಆ ಸಂದರ್ಭದಲ್ಲಿ ವಿಚಾರಣಾ ತಂಡದ ನೇತೃತ್ವವನ್ನು ದಕ್ಷ ಅಧಿಕಾರಿ ಅಕು ಸಬರ್ವಲ್ ಅವರಿಗೆ ವಹಿಸಲಾಗಿತ್ತು.

    ಆ ಸಂದರ್ಭದಲ್ಲಿ ಅವರು ಪೆಡ್ಲರ್‌ಗಳ ಮಾಹಿತಿಯನ್ನು ಆಧರಿಸಿ ಖ್ಯಾತ ನಟರಾದ ರವಿತೇಜ, ನವದೀಪ್, ತರುಣ್, ತನಿಷ್ಕ್ ನಂದು ನಟಿಯರಾದ ಚಾರ್ಮಿ ಕೌರ್, ಮುಮೈತ್ ಖಾನ್ ಅವರ ವಿಚಾರಣೆ ನಡೆಸಿದ್ದರು. ಇನ್ನೂ ದೊಡ್ಡ ಪ್ರಮಾಣದಲ್ಲಿ ಟಾಲಿವುಡ್‌ನ ಪ್ರಮುಖರ ಹೆಸರುಗಳು ಕೇಳಿಬಂದ ಹೊತ್ತಿಗೆ ತೆಲಂಗಾಣ ಸರ್ಕಾರ ಸಬರ್ವಲ್ ಅವರನ್ನ ವಿಚಾರಣೆಯಿಂದ ತಪ್ಪಿಸಿ, ಪರೋಕ್ಷವಾಗಿ ಟಾಲಿವುಡ್ ಮಂದಿಯನ್ನು ರಕ್ಷಿಸಿದ ಆರೋಪ ಕೂಡಾ ಕೇಳಿಬಂದಿತ್ತು. ಮುಂದೆ ಈ ವಿಷಯ ಜನಮಾನಸದಿಂದ ಕೂಡ ಮರೆತು ಹೋಯಿತು.

    Breaking: ರಕುಲ್, ರಾಣಾ, ರವಿತೇಜಗೆ ED ಇಲಾಖೆಯಿಂದ ಸಮನ್ಸ್Breaking: ರಕುಲ್, ರಾಣಾ, ರವಿತೇಜಗೆ ED ಇಲಾಖೆಯಿಂದ ಸಮನ್ಸ್

    ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಹಿನ್ನೆಲೆಯಿಂದ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣದ ಜಾಡು ಹಿಡಿದು ಹೊರಟರೆ ಬಾಲಿವುಡ್‌ನ ಖ್ಯಾತ ನಟ ನಟಿಯರ ಮನೆಯಿಂದ ಸ್ಯಾಂಡಲ್‌ವುಡ್ಡಿನ ರಾಗಿಣಿ ಸಂಜನಾವರೆಗೆ ಬಂದು ನಿಂತಿದೆ. ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ ನಟ-ನಟಿಯರ ನೇರ ಸಂಪರ್ಕ ಟಾಲಿವುಡ್ ಜೊತೆಗಿದೆ. 2017ರಲ್ಲಿ ಸಮರ್ಪಕವಾಗಿ ನಡೆಯದ ತನಿಖೆಗೆ ಈಗ ಇದರಿಂದಲೇ ಹೊಸ ಆಯಾಮ ದೊರಕಿದೆ. ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಗಳನ್ನು ವಿವಿಧ ತನಿಖಾ ಸಂಸ್ಥೆಗಳು ನಡೆಸುತ್ತಿವೆ. ಆದರೆ ಇಡಿ ಪ್ರವೇಶ ಮಾತ್ರ ಆಗಿಲ್ಲ. ಆದರೆ ಟಾಲಿವುಡ್ ಪ್ರಕರಣದಲ್ಲಿ ಈಗ ಈಡಿ ಪ್ರವೇಶ ಮಾಡಿದೆ. ಮುಂದೆ ಓದಿ...

    ಇಡಿ ನೋಟೀಸ್ ಯಾರು ಯಾರಿಗೆ?

    ಇಡಿ ನೋಟೀಸ್ ಯಾರು ಯಾರಿಗೆ?

    ಯಾವುದೇ ಡ್ರಗ್ಸ್ ಪ್ರಕರಣಕ್ಕೆ ಇಡಿ (ಜಾರಿ ನಿರ್ದೇಶನಾಲಯ-Enforcement Directorate) ವಿಚಾರಣೆ ಮಾಡುವುದಿಲ್ಲ. ಅಂದಮೇಲೆ ಯಾವ ಕಾರಣಕ್ಕಾಗಿ ಇಲ್ಲಿ ಇಡಿ ಪ್ರವೇಶ ಆಗಿದೆ ಮತ್ತು ಯಾವ ನಟನಟಿಯರಿಗೆ ಜಾರಿಗೆ ಮಾಡಿದೆ. 12 ನಟ-ನಟಿಯರಿಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಇದರಲ್ಲಿ ಮೊದಲ ಬಾರಿಗೆ ಅಂದರೆ 2017ರ ಪ್ರಕರಣದಿಂದ ತಪ್ಪಿಸಲ್ಪಟ್ಟಿದ್ದ ರಾಣಾ ದಗ್ಗುಬಾಟಿ, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಅಂದಿನ ಪ್ರಕರಣದಲ್ಲಿ ಪ್ರಮುಖರಾಗಿದ್ದ ನಿರ್ದೇಶಕ ಪೂರಿ ಜಗನ್ನಾಥ್ ಚಾರ್ಮಿ ಕೌರ್, ಮುಮೈತ್ ಖಾನ್, ರವಿತೇಜ, ತರುಣ್ ಜೊತೆಗೆ ರವಿತೇಜ ಕಾರ್ ಡ್ರೈವರ್ ಹಾಗೂ ಎಫ್ ಕ್ಲಬ್ ನ ಜನರಲ್ ಮ್ಯಾನೇಜರ್ ಗೂ ಕೂಡ ಇಡಿ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ನಿನ್ನೆ (ಆಗಸ್ಟ್ 31 ) ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಹತ್ತು ಗಂಟೆಗಳ ಕಾಲ ಪುರಿ ಜಗನ್ನಾಥ ಅವರ ವಿಚಾರಣೆ ಕೂಡ ಇಡಿ ಮಾಡಿದೆ. ಸುಮಾರು ಹತ್ತು ವರ್ಷಗಳ ಅವರ ಎಲ್ಲಾ ಬ್ಯಾಂಕ್ ಅಕೌಂಟ್ ಗಳ ಸ್ಟೇಟ್ಮೆಂಟ್ ಗಳನ್ನು ಕೂಡ ನೀಡಿ ಕೈಗೆ ತೆಗೆದುಕೊಂಡಿದೆ.

    ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಿರ್ದೇಶಕ ಪುರಿ ಜಗನ್ನಾಥ್ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಿರ್ದೇಶಕ ಪುರಿ ಜಗನ್ನಾಥ್

    ಇಡಿ ಯಾವ ವಿಚಾರಗಳ ಬಗ್ಗೆ ವಿಚಾರಣೆ ನಡೆಸುತ್ತದೆ?

    ಇಡಿ ಯಾವ ವಿಚಾರಗಳ ಬಗ್ಗೆ ವಿಚಾರಣೆ ನಡೆಸುತ್ತದೆ?

    ಡ್ರಗ್ಸ್ ಪ್ರಕರಣಗಳು ಇಡಿ ವಿಚಾರಣೆ ವ್ಯಾಪ್ತಿಗೆ ಬರುವುದಿಲ್ಲ. ಅದು NDPS act, 1985 (Narcotic Drugs and Psychotropic Substances act) ಇದರ ಅಡಿಯಲ್ಲಿ ಕೇಸ್ ರಿಜಿಸ್ಟರ್ ಮಾಡಿಕೊಂಡು ವಿಚಾರಣೆ ಮಾಡಲಾಗುತ್ತದೆ. ಆದರೆ ಇಡಿ ಎಂಟ್ರಿ ಆಗೋದು ಯಾವಾಗ? ಯಾವುದಾದರೂ ಒಂದು ವ್ಯಕ್ತಿ ಒಬ್ಬ ಪೆಡ್ಲರ್ ಇಂದ ಡ್ರಗ್ಸ್ ಖರೀದಿಸಿ ಅದನ್ನು ತಾನು ಉಪಯೋಗಿಸಿ ಉಳಿದಿದ್ದು ಅಥವಾ ಉಪಯೋಗಿಸದೆ ಮತ್ತೊಬ್ಬರಿಗೆ ಮಾರಿ ಹಣ ಮಾಡಿದಾಗ. ಡ್ರಗ್ಸ್ ಮಾರಿ ಗಳಿಸಿದ ಹಣ ಅದನ್ನು ಬ್ಲಾಕ್ ಮನಿ ಅಂತ ಪರಿಗಣಿಸಲಾಗುತ್ತದೆ. ಯಾವಾಗ ವ್ಯವಹಾರ ಬ್ಲಾಕ್ಮನಿಯಾಗುತ್ತದೆ ಅಲ್ಲಿ ಇಡಿ ಎಂಟ್ರಿ ಕೊಡುತ್ತೆ. ಬ್ಲಾಕ್ ಮನಿಯನ್ನು ವೈಟ್ ಮಾಡುವ ಯಾವುದೇ ವ್ಯವಹಾರ ಕೂಡ ಇಡಿ ವ್ಯಾಪ್ತಿಯಲ್ಲಿ ತನಿಖೆ ನಡೆಯುತ್ತದೆ. ಸುಮಾರು 160 ತರದ ವಿಚಾರಗಳಲ್ಲಿ ತನಿಖೆ ಮಾಡುತ್ತದೆ ಇದರಲ್ಲಿ ಒಂದು ಡ್ರಗ್ಸ್ ಪ್ರಕರಣಗಳು ಕೂಡ ಆಗಿದೆ.

    ಕಪ್ಪು ಹಣದ ವ್ಯವಹಾರ ಇದ್ದರೆ ಇಡಿ ಎಂಟ್ರಿ

    ಕಪ್ಪು ಹಣದ ವ್ಯವಹಾರ ಇದ್ದರೆ ಇಡಿ ಎಂಟ್ರಿ

    Foreign exchange mangament act, prevention of money act ಪ್ರಮುಖವಾಗಿ ಈ ಎರಡರ ಅಡಿಯಲ್ಲಿ ಯಾವುದಾದರೂ ಅಪರಾಧಗಳು ನಡೆದಿದ್ದರೆ ಅದು ಇಡಿ ತನಿಖೆ ನಡೆಯುತ್ತದೆ. ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ಸಿನಿಮಾ ನಿರ್ಮಾಣ, ಮನಿ ಲಾಂಡ್ರಿಂಗ್, ಬಿಟ್-ಕಾಯಿನ್ ಹವಾಲಾ ಮೂಲಕ ವೈಟ್ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿರುತ್ತದೆ. ಸಿನಿಮಾಗಳ ಮೇಲೆ ಹೂಡುವಂತಹ ಬಹುತೇಕ ಹಣ ಬ್ಲಾಕ್ ಮನಿ. ಬಹುತೇಕ ಸಂದರ್ಭಗಳಲ್ಲಿ ಸಿನಿಮಾ ನಟ-ನಟಿಯರ ಮೂಲಕವೇ ಡ್ರಗ್ಸ್ ಅಥವಾ ಇನ್ನಿತರ ವ್ಯವಹಾರಗಳನ್ನು ಕೂಡ ಆರ್ಥಿಕ ಅಪರಾಧಿಗಳು ನಡೆಸುತ್ತಾರೆ. ಹೀಗಾಗಿಯೇ ಈಡಿ ಎಂಟ್ರಿಕೊಟ್ಟಿದ್ದು. ಈ ನಟ ನಟಿಯರ ಮೂಲಕವೇ ಆರ್ಥಿಕ ಅಪರಾಧಗಳ ಮೂಲವನ್ನು ಜಾಲಾಡಲು ಮುಂದಾಗಿದೆ.

    ಇಡಿ ಯಶಸ್ವಿಯಾಗುತ್ತಾ?

    ಇಡಿ ಯಶಸ್ವಿಯಾಗುತ್ತಾ?

    ನಿಜವಾಗಲೂ ಈ ಕಾರ್ಯದಲ್ಲಿ ಇಡಿ ಯಶಸ್ವಿಯಾಗುತ್ತದೆಯೆ? ಯಾವುದೇ ಒಂದು ತನಿಖೆ ಪಾರದರ್ಶಕವಾಗಿ ನಡೆಯಲು ಈ ದೇಶದಲ್ಲಿ ರಾಜಕಾರಣಿಗಳು ಅಥವಾ ಹಿರಿಯ ಅಧಿಕಾರಿಗಳು ಬಿಡುವುದಿಲ್ಲ. ನಿಜಕ್ಕೂ ಈ ಪ್ರಕರಣದಲ್ಲಿ ಯಾವುದೇ ಒತ್ತಡಗಳಿಲ್ಲದೇ ನೀಡಿ ಪ್ರಾಮಾಣಿಕವಾಗಿ ತನ್ನ ಕಾರ್ಯವನ್ನು ನಿರ್ವಹಿಸಿದರೆ ಖಂಡಿತ ಡ್ರಗ್ಸ್ ಮಾರಾಟ ಜಾಲದ ಹಿಂದಿರುವ ದೊಡ್ಡ ದೊಡ್ಡ ಕೈಗಳು ಬೆಳಕಿಗೆ ಬರುತ್ತವೆ. ಆದರೆ ಇದು ಸಾಧ್ಯವೇ?

    English summary
    ED summons to Rakul Preet Singh, Rana Daggubati and Raviteja in drugs case. why did ED enters into Tollywood Drugs Case?
    Wednesday, September 1, 2021, 11:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X