For Quick Alerts
  ALLOW NOTIFICATIONS  
  For Daily Alerts

  ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸ್ಫೋಟ: ಓರ್ವನಿಗೆ ಗಂಭೀರ ಗಾಯ.!

  |

  ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪೇಂಟ್ ಟಿನ್ ಗಳು ಸ್ಫೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ನಿನ್ನೆ (ಫೆಬ್ರವರಿ 2) ಬೆಳಗ್ಗೆ ಪೇಂಟ್ ಕಂಟೇನರ್ ಗಳನ್ನು ತೆರೆದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಸ್ಫೋಟದಲ್ಲಿ ಗಾಯಗೊಂಡಿರುವ ವ್ಯಕ್ತಿ ರಾವ್ ಸಾಹೇಬ್ (48) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ನಾಂದೇಡ್ ಮೂಲದ ರಾವ್ ಸಾಹೇಬ್, ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸೆಟ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದರು.

  ಸ್ಫೋಟ ಸಂಭವಿಸಿದ್ದು ಹೇಗೆ.?

  ಸ್ಫೋಟ ಸಂಭವಿಸಿದ್ದು ಹೇಗೆ.?

  ನಿನ್ನೆ ಭಾನುವಾರ ಬೆಳಗ್ಗೆ, ರಾವ್ ಸಾಹೇಬ್ ಸೇರಿದಂತೆ ಒಟ್ಟು ನಾಲ್ಕು ಮಂದಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬಳಕೆಯಾಗದ ಮತ್ತು ಸ್ವಲ್ಪ ಬಳಸಿದ ಪೇಂಟ್ ಟಿನ್ ಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಶಿಫ್ಟ್ ಮಾಡುತ್ತಿದ್ದರು. ಪೇಂಟ್ ಟಿನ್ ಗಳನ್ನು ಅನ್ ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ರಾವ್ ಸಾಹೇಬ್ ಒಂದು ಟಿನ್ ನ ತೆರೆದಿದ್ದಾರೆ. ಈ ವೇಳೆ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. (ಸಂಗ್ರಹ ಚಿತ್ರ)

  ನಟ ಪ್ರಭಾಸ್ ಗೆ ಯಾಕೆ ಇಷ್ಟೊಂದು ಟೈಟ್ ಸೆಕ್ಯೂರಿಟಿ.?ನಟ ಪ್ರಭಾಸ್ ಗೆ ಯಾಕೆ ಇಷ್ಟೊಂದು ಟೈಟ್ ಸೆಕ್ಯೂರಿಟಿ.?

  ಗಂಭೀರವಾಗಿ ಗಾಯಗೊಂಡ ರಾವ್ ಸಾಹೇಬ್

  ಗಂಭೀರವಾಗಿ ಗಾಯಗೊಂಡ ರಾವ್ ಸಾಹೇಬ್

  ಸ್ಫೋಟದಿಂದಾಗಿ 48 ವರ್ಷ ವಯಸ್ಸಿನ ರಾವ್ ಸಾಹೇಬ್ ಗೆ ಗಂಭೀರ ಗಾಯಗಳಾಗಿವೆ. ರಾವ್ ಸಾಹೇಬ್ ರವರ ಕೈಗಳು, ಮುಖ, ತಲೆ ಮತ್ತು ಎದೆ ಭಾಗಕ್ಕೆ ಪೆಟ್ಟು ಬಿದ್ದಿದೆ. ಕೂಡಲೆ ಅವರನ್ನ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾವ್ ಸಾಹೇಬ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ. (ಸಂಗ್ರಹ ಚಿತ್ರ)

  ಚಿತ್ರೀಕರಣದಲ್ಲಿ ನಟ ಪ್ರಭಾಸ್: ಸಿನಿಮಾ ಸೆಟ್ಟಿಂದ ರಿವೀಲ್ ಆಯ್ತು ಭರ್ಜರಿ ಫೋಟೋಚಿತ್ರೀಕರಣದಲ್ಲಿ ನಟ ಪ್ರಭಾಸ್: ಸಿನಿಮಾ ಸೆಟ್ಟಿಂದ ರಿವೀಲ್ ಆಯ್ತು ಭರ್ಜರಿ ಫೋಟೋ

  ಸ್ಫೋಟಕ ಪತ್ತೆ ಆಗಿಲ್ಲ.!

  ಸ್ಫೋಟಕ ಪತ್ತೆ ಆಗಿಲ್ಲ.!

  ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಧಾವಿಸಿದ್ದು, ಕೆಲ ಸ್ಯಾಂಪಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಯಾವುದೇ ಸ್ಫೋಟಕ ಸಾಮಗ್ರಿಗಳು ಪತ್ತೆ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (ಸಂಗ್ರಹ ಚಿತ್ರ)

  ಬಿಗ್ ಬಜೆಟ್ ಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿದೆ.!

  ಬಿಗ್ ಬಜೆಟ್ ಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿದೆ.!

  1666 ಎಕರೆ ಪ್ರದೇಶ ಹೊಂದಿರುವ ರಾಮೋಜಿ ಫಿಲ್ಮ್ ಸಿಟಿ ವಿಶ್ವದ ಅತ್ಯಂತ ದೊಡ್ಡ ಫಿಲ್ಮ್ ಸ್ಟುಡಿಯೋ ಕಾಂಪ್ಲೆಕ್ಸ್. ಕನ್ನಡದ 'ಕುರುಕ್ಷೇತ್ರ', 'ಜಾಗ್ವಾರ್', ತೆಲುಗಿನ 'ಮಗಧೀರ', 'ಬಾಹುಬಲಿ' ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದಿದೆ. (ಸಂಗ್ರಹ ಚಿತ್ರ)

  English summary
  Worker injured in a Blast at Ramoji Film City.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X