twitter
    For Quick Alerts
    ALLOW NOTIFICATIONS  
    For Daily Alerts

    ಸಿಎಂ ಜಗನ್ ಬೆಂಲಿಗರಿಂದ ದಾಂಧಲೆ: ನಟ ಬಾಲಕೃಷ್ಣ ಮನೆ ಮೇಲೆ ದಾಳಿ

    |

    ಆಂಧ್ರ ಪ್ರದೇಶದ ರಾಜಕೀಯದಲ್ಲಿ ಕೋಲಾಹಲವೆದ್ದಿದೆ. ಆಡಳಿತ ಪಕ್ಷದ ಬೆಂಬಲಿಗರು ವಿಪಕ್ಷ ತೆಲುಗು ದೇಶಂ ಪಕ್ಷದ ಕಾರ್ಯಾಲಯಗಳು, ಶಾಸಕರ ಮನೆಗಳ ಮೇಲೆ ಸತತ ದಾಳಿ ನಡೆಸುತ್ತಿದ್ದಾರೆ.

    ನಿನ್ನೆ ಹಿಂದುಪುರದ ಶಾಸಕ, ಜನಪ್ರಿಯ ನಟ ಬಾಲಕೃಷ್ಣರ ಹಿಂದುಪುರದ ನಿವಾಸದ ಮೇಲೆ ವೈಎಸ್‌ಆರ್ ಕಾಂಗ್ರೆಸ್‌ನ ಬೆಂಬಲಿಗರು ದಾಳಿ ನಡೆಸಿದ್ದು, ಬಾಲಕೃಷ್ಣ ಮನೆಗೆ ಕಲ್ಲು ತೂರಿ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ.

    ಬಾಲಕೃಷ್ಣ ನಿವಾಸದ ಮೇಲೆ ದಾಳಿ ಮಾಡುವ ಮುನ್ನಾ ಹಿಂದುಪುರದ ಟಿಡಿಪಿ ಕಚೇರಿ ಮೇಲೆ ದಾಳಿ ನಡೆಸಿ ಕಾರ್ಯಾಲಯವನ್ನು ಧ್ವಂಸಗೊಳಿಸಿದ್ದಾರೆ. ವೈಸಿಪಿ ಕಾರ್ಯಕ್ರರ್ತರು ದೊಡ್ಡ ಸಂಖ್ಯೆಯಲ್ಲಿ ಬಾಲಕೃಷ್ಣ ಮನೆ ಮೇಲೆ ದಾಳಿ ಮಾಡಿದ್ದು, ಘೋಷಣೆಗಳನ್ನು ಕೂಗಿದ್ದಾರೆ. ಪ್ರಸ್ತುತ ಹಿಂದುಪುರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

    YSRCP Followers Attacks Actor, Politician Balakrishnas House In Hindupur

    ಹಿಂದುಪುರ ಮಾತ್ರವೇ ಅಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಟಿಡಿಪಿ ಕಾರ್ಯಾಲಯಗಳ ಮೇಲೆ ವೈಸಿಪಿ ಬೆಂಬಲಿಗರು ದಾಳಿ ಮಾಡಿದ್ದಾರೆ. ಹಲವು ಶಾಸಕರ ಮನೆಗಳಿಗೆ ಹಾನಿ ಮಾಡಿದ್ದಾರೆ. ಟಿಡಿಪಿ ಮುಖಂಡ ಪಟ್ಟಾಭಿರಾಮ್ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

    ಟಿಡಿಪಿಯ ಕೆಲ ಮುಖಂಡರು ಆಂಧ್ರ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಗಾಂಜಾ ಕಳ್ಳಸಾಗಣೆ ಬಗ್ಗೆ ಸರ್ಕಾರವನ್ನು ಟೀಕಿಸಿದ್ದರು. ಹಿರಿಯ ದಲಿತ ನಾಯಕ ನಕ್ಕ ಆನಂದ್ ರಾವ್ ಪತ್ರಿಕಾಗೋಷ್ಠಿ ನಡೆಸಿ ಡ್ರಗ್ಸ್ ಹಾಗೂ ಗಾಂಜಾ ಕಳ್ಳ ಸಾಗಣೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದರು. ಧುಲಿಪಲ್ಲ ನರೇಂದ್ರ ಕುಮಾರ್ ಸಹ ಸರ್ಕಾರವನ್ನು ಪ್ರಶ್ನೆ ಮಾಡಿದ್ದರು. ಪ್ರಶ್ನೆ ಮಾಡಿದ ನಾಯಕರಿಗೆ ಆಂಧ್ರ ಪೊಲೀಸರು ನೊಟೀಸ್ ನೀಡಲು ನಿಶ್ಚಯಿಸಿ ಸೋಮವಾರ ಮಧ್ಯರಾತ್ರಿ ನಕ್ಕ ಆನಂದ್ ರಾವ್ ಮನೆಗೆ ಭೇಟಿ ನೀಡಿದರು. ಈ ವಿಷಯ ಅರಿತ ಆನಂದ್ ರಾವ್ ಬೆಂಬಲಿಗರು ಮನೆಯನ್ನು ಸುತ್ತುವರಿದು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಆನಂದ್ ರಾವ್ ಸಹ ಪೊಲೀಸರು ನೀಡಿದ ನೊಟೀಸ್ ಸ್ವೀಕರಿಸದೆ, 'ಸರ್ಕಾರವನ್ನು ಟೀಕಿಸುವುದು ಅಪರಾಧವಾ?' ಎಂದು ಪ್ರಶ್ನಿಸಿದ್ದರು. ಧುಲಿಪಲ್ಲ ನರೇಂದ್ರ ಕುಮಾರ್‌ಗೆ ಪೊಲೀಸರು ನೊಟೀಸ್ ಜಾರಿ ಮಾಡಿದರು. ಇದು ಟಿಡಿಪಿಯ ಇತರ ಮುಖಂಡರನ್ನು ಕೆರಳಿಸಿತು.

    ನಕ್ಕ ಆನಂದ್‌ ರಾವ್‌ಗೆ ನೊಟೀಸ್ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಬಿಡುಗಡೆಗೊಳಿಸಿದ್ದ ಟಿಡಿಪಿ ಮುಖಂಡ ಪಟ್ಟಾಭಿರಾಮ್, ಸಿಎಂ ಜಗನ್ ವಿರುದ್ಧ ಏಕವಚನದ ವಾಗ್ದಾಳಿ ನಡೆಸಿದ್ದು, ಕೆಟ್ಟ ಶಬ್ದ ಪ್ರಯೋಗಿಸಿ ಬೈದಿದ್ದರು, ವಿಪಕ್ಷದ ಮುಖಂಡರಿಗೆ ನೊಟೀಸ್‌ಗಳನ್ನು ನೀಡುವುದನ್ನು ಕಠುವಾಗಿ, ಆಕ್ರೋಶ ಭರಿತವಾಗಿ ಪ್ರಶ್ನೆ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಈಗ ವೈಸಿಪಿ ಕಾರ್ಯಕರ್ತರು ಟಿಡಿಪಿ ಕಾರ್ಯಾಲಯಗಳ ಮೇಲೆ ಹಲ್ಲೆ ಆರಂಭಿಸಿದ್ದಾರೆ.

    ತಮ್ಮ ಪಕ್ಷದ ಕಾರ್ಯಾಲಯಗಳ ಮೇಲೆ ವೈಸಿಪಿ ಕಾರ್ಯಕರ್ತರು ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಿಎಂ, ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಇಂದು ಆಂಧ್ರ ಪ್ರದೇಶ ಬಂದ್‌ಗೆ ಕರೆ ನೀಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿದ ಚಂದ್ರಬಾಬು ನಾಯ್ಡು, ತಮ್ಮ ಪಕ್ಷದ ಕಚೇರಿಗಳು, ಮುಖಂಡರು, ಶಾಸಕರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದ್ದಾರೆ, ''ಟಿಡಿಪಿ ಪ್ರಧಾನ ಕಚೇರಿ ಮೇಳೆ ದಾಳಿ ನಡೆಸಿದಿರುವುದ ನಿಜಕ್ಕೂ ಆಘಾತಕಾರಿ. ಸಿಎಂ ಜಗನ್​ ಆಮಿಷವೊಡ್ಡಿ ಇಂತಹ ಕೆಲಸ ಮಾಡಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಟಿಡಿಪಿ ಕಚೇರಿಗಳ ಮೇಲೆ ದಾಳಿ ನಡೆಯುತ್ತಿದ್ದರೂ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ದಾಳಿಗಳು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗಳು. ಇದೇ ವಿಚಾರವಾಗಿ ನಾವು ಬುಧವಾರ ಆಂಧ್ರಪ್ರದೇಶ ಬಂದ್​ಗೆ ಕರೆ ನೀಡಿದ್ದೇವೆ. ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿರುವ ಶಕ್ತಿಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ. ವೈಎಸ್‌ಆರ್‌ಸಿಪಿ ಗೂಂಡಾಗಳು ಪಕ್ಷದ ಪ್ರಧಾನ ಕಚೇರಿ ಮತ್ತು ವಿಶಾಖಪಟ್ಟಣಂನ ಕಚೇರಿ ಮತ್ತು ಪಕ್ಷದ ನಾಯಕರ ನಿವಾಸಗಳ ಮೇಲೆ ನಡೆಸಿದ ದಾಳಿಯನ್ನು ತೆಲುಗು ದೇಶಂ ಪಕ್ಷವು ಬಲವಾಗಿ ಖಂಡಿಸುತ್ತದೆ'' ಎಂದಿದ್ದಾರೆ ಚಂದ್ರಬಾಬು ನಾಯ್ಡು.

    English summary
    YSRCP followers attacks on actor, politician Nandamuri Balakrishna's house in Hindupur. YSRCP party workers attacking on TDP party office all over the state.
    Wednesday, October 20, 2021, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X