twitter
    X
    Home ಚಲನಚಿತ್ರಗಳ ಒಳನೋಟ

    BIFFES 2020: ಕನ್ನಡ ಸಿನಿಮಾ ಸ್ವರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳು

    Author Administrator | Published: Wednesday, February 26, 2020, 03:00 PM [IST]

    2020 ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ಸಿಕ್ಕಿದೆ. ಫೆಬ್ರವರಿ 26 ರಿಂದ ಮಾರ್ಚ್ 4 ರ ವರೆಗೆ ಬೆಂಗಳೂರಿನ ಒರಾಯನ್ ಮಾಲ್, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘ ಹಾಗೂ ಸುಚಿತ್ರದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಸುಮಾರು 50 ದೇಶಗಳ 200 ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನವಾಗಲಿದೆ. ಇಲ್ಲಿ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳ ಪಟ್ಟಿ ನೀಡಲಾಗಿದೆ.

    cover image
    96

    96

    1

    ಶೀತಲ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಸೈಕೊಲಾಜಿಕಲ್ ಥ್ರಿಲ್ಲರ್ 96 ಚಿತ್ರ ತನ್ನ ಕಲ್ಪನಾ ಲೋಕದಲ್ಲಿ ಹೋರಾಡುವ ಯುವತಿಯೊಬ್ಬಳ ಕಥೆಯನ್ನು ಹೊಂದಿದೆ. ಜಯಂತ್ ಸೀಗೆ ಎಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಅಭ್ಯಂಜನ

    ಅಭ್ಯಂಜನ

    2

    ದಿನೇಶ್ ಬಾಬು ನಿರ್ದೇಶಿಸಿರುವ ಈ ಕೌಟುಂಬಿಕ ಚಿತ್ರದಲ್ಲಿ ಹಾಸಿಗೆ ಹಿಡಿದಿರುವ ತಂದೆಯ ಕಾಳಜಿ ವಹಿಸುವ ಪುತ್ರನ ಕಥೆಯಿದೆ. ಹಾಗೇ ಇದರಿಂದ ಬೇಸತ್ತಿರುವ ಅವನ ಹೆಂಡತಿ ಮತ್ತು ಒಂದು ಚಿಕ್ಕ ಟೀ ಶಾಪ್ ಆಧಾರದ ಮೇಲೆ ನೆಡೆಯುವ ಇವರ ಕುಟಂಬ..ಹೀಗೆ ಒಂದು ಕುಟುಂಬದ ಹಲವು ದೃಶ್ಯಗಳನ್ನು ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.

    ಬೆಲ್ ಬಾಟಮ್

    ಬೆಲ್ ಬಾಟಮ್

    3

    ಜಯತೀರ್ಥ ನಿರ್ದೇಶನದ, ರಿ‍ಷಭ್ ಶೆಟ್ಟಿ ಡಿಟೆಕ್ಟಿವ್ ಕಮ್ ಡಿಫೆಕ್ಟಿವ್ ದಿವಾಕರನ ಅವತಾರ ತಾಳಿದ ಚಿತ್ರ ಬೆಲ್ ಬಾಟಂ. ತನ್ನ ಚಾಣಾಕ್ಷತೆಯಿಂದ ಒಂದು ಪ್ರಸಿದ್ಧ ಸರಣಿ ಕಳ್ಳತನವನ್ನು ಭೇಧಿಸುವ ಡಿಟೆಕ್ಟಿವ್ ಕಥೆಯನ್ನು ಚಿತ್ರ ಹೊಂದಿದೆ..

    ಭಿನ್ನ

    ಭಿನ್ನ

    4

    ಭಿನ್ನ ಚಿತ್ರದ ಮೂಲಕ ನಟಿಯಾಗಬೇಕೆಂಬ ಹಂಬಲ ಹೊಂದಿರುವ ಯುವತಿಯೊಬ್ಬಳ ಕತೆಯನ್ನು ಆದರ್ಶ ಈಶ್ವರಪ್ಪ ಹೇಳಿದ್ದಾರೆ. ಸೋಲೊ ಟ್ರಪ್ ಹೋಗುವಾಗ ತನ್ನ ಮುಂದಿನ ಚಿತ್ರದ ಚಿತ್ರಕಥೆಯನ್ನು ಓದುತ್ತಾ ಹೋಗುವ ಕಾವೇರಿ, ಆ ಕಥೆಯು ತನ್ನ ಜೀವನವನ್ನು ಪ್ರತಿನಿಧಿಸಿದಾಗ ,ಹಲವು ಪಾಠಗಳನ್ನು ಕಲಿಯುತ್ತಾಳೆ.

    ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

    ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

    5

    ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಚಿತ್ರ ವಲಸೆ ಸಮಸ್ಯೆ ಬಗ್ಗೆ ಬೆಳಕು ಹರಿಸುತ್ತದೆ. ಉತ್ತಮ ಜೀವನಕ್ಕಾಗಿ ಹುಟ್ಟೂರು ತೊರೆಯುವುದು ಮತ್ತು ತನ್ನೂರಿಗೆ ತಿರುಗಿ ಮರಳುವ ಬಯಕೆ ಹೀಗೆ ಹತ್ತು ಹಲವು ಆಧುನಿಕ ವಲಸೆ ಸಮಸ್ಯೆಗಳ ಮುಖವನ್ನು ಚಿತ್ರ ತೆರೆದಿಡುತ್ತದೆ.

    ಕವಲುದಾರಿ

    ಕವಲುದಾರಿ

    6

    ಒಂದು ಹಳೆಯ ಕೊಲೆಯ ಬೆನ್ನತ್ತಿ ಹೋಗುವ ಟ್ರಾಫಿಕ್ ಅಧಿಕಾರಿ ಹಲವು ಕವಲುಗಳ (ಸುಳಿವುಗಳ) ಹಾದಿಯಲ್ಲಿ ಬಂದು ನಿಲ್ಲುತ್ತಾನೆ..ಈ ಹಂತದಲ್ಲಿ ಹಳೆಯ ನಿವೃತ್ತ ಅಧಿಕಾರಿಯ ಮಾರ್ಗದರ್ಶನ ಪಡೆಯುತ್ತಾನೆ.ಹಲವು ಪದರುಗಳ ಈ ಥ್ರಿಲ್ಲರ್ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶನ ಮತ್ತು ಪುನೀತ್ ರಾಜಕುಮಾರ್ ಪಿ.ಆರ್.ಕೆ ಬ್ಯಾನರ್ ನಲ್ಲಿ ಮೂಡಿ ಬಂದಿತ್ತು.

    ಮುಂದಿನ ನಿಲ್ದಾಣ

    ಮುಂದಿನ ನಿಲ್ದಾಣ

    7

    ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಆಧುನಿಕ ಪಟ್ಟಣ ಪ್ರೇಮಕಥೆಯನ್ನು ತೆರೆದಿಟ್ಟಿತು. ಮೂರು ವಿಭಿನ್ನ ವ್ಯಕ್ತಿಗಳು ಜೀವನದ ಒಂದು ಹಂತದಲ್ಲಿ ಪರಸ್ಪರ ಎದುರಾಗಿ ತಮ್ಮ ಮುಂದಿನ ಬದುಕಿನ ನಿಲ್ದಾಣದ ಕಡೆಗೆ ಪಯಣಿಸುವ ಕಥೆಯನ್ನು ಚಿತ್ರ ಹೊಂದಿತ್ತು.

    ಒಂದು ಶಿಕಾರಿಯ ಕಥೆ

    ಒಂದು ಶಿಕಾರಿಯ ಕಥೆ

    8

    ಸಚಿನ್ ಶೆಟ್ಟಿ ನಿರ್ದೇಶನದ ಈ ಚಿತ್ರ ಪಾಪ ಪ್ರಜ್ಞೆಯಲ್ಲಿ ತೊಳಲಾಡುವ ಒಬ್ಬ ಕಾದಂಬರಿಕಾರನ ಕಥೆಯನ್ನು ಹೇಳುತ್ತದೆ. ಅಕಸ್ಮಿಕವಾಗಿ ಕೊಲೆಯಂದನ್ನು ಮಾಡುವ ಕಾದಂಬರಿಕಾರ, ಅದರ ನಂತರದ ಅವನ ತುಮುಲಗಳನ್ನು ಚಿತ್ರ ಹೇಳುತ್ತದೆ.

    ಪಿಂಗಾರ

    ಪಿಂಗಾರ

    9

    ಪ್ರೀತಮ್ ಆರ್ ಶೆಟ್ಟಿ ನಿರ್ದೇಶನದ ಈ ಚತ್ರ ತುಳುನಾಡಿನ ಭೂತರಾಧನೆ ಕುರಿತಾಗಿದೆ. ಒಬ್ಬ ದಲಿತ ಹುಡುಗಿಯ ಮೈಮೇಲೆ ದೈವ ಬಂದಾಗ, ಮೂರು ಉನ್ನತ ಕುಟುಂಬದ ವ್ಯಕ್ತಿಗಳು ಬದುಕು ಹೇಗೆ ಬದಲಾಗುತ್ತದೆ ಎಂಬುದು ಚಿತ್ರದ ತಿರುಳು.

    ರಾಗ ಭೈರವಿ

    ರಾಗ ಭೈರವಿ

    10

    ಈ ಚಿತ್ರದ ಮೂಲಕ ಭೈರವಿ ರಾಗ ಸಾಧನೆಯಲ್ಲಿ ತೊಡಗಿದ ಬೈರವಿ ಎಂಬ ಹಿಂದೂಸ್ತಾನಿ ಸಂಗೀತಗಾರ್ತಿಯ ಕಥೆಯನ್ನು ಎಸ್ ವೆಂಕಟೇಶ್ ಕೊಟ್ಟೂರು ಕಟ್ಟಿ ಕೊಟ್ಟಿದ್ದಾರೆ. ಗಾಯನಕ್ಕೆ ಆಧಾರವಾದ ಗಂಟಲು ಕ್ಯಾನ್ಸರ್‌ ಗೆ ಒಳಗಾದಾಗ, ಅವಳು ಇದನ್ನು ಹೇಗೆ ಇದನ್ನು ಎದುರಿಸುತ್ತಾಳೆ ಎಂಬುದು ಚಿತ್ರದ ಕಥೆ.

    ರಂಗನಾಯಕಿ

    ರಂಗನಾಯಕಿ

    11

    ದಯಾಳ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳು ಎದುರಿಸುವ ಸಾಮಾಜಿಕ ಮತ್ತು ಕೌಟುಂಬಿಕ ಕಷ್ಟ-ಕೋಟಲೆಗಳನ್ನು ಚಿತ್ರಿಸಲಾಗಿದೆ..ಆದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿದರು.

    ಸವರ್ಣದೀರ್ಘ ಸಂಧಿ

    ಸವರ್ಣದೀರ್ಘ ಸಂಧಿ

    12

    ವಿರೇಂದ್ರ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ನಟಿಸಿದ ಈ ಚಿತ್ರದಲ್ಲಿ ಖ್ಯಾತ ಪೋಷಕ ನಟ ರವಿ ಭಟ್ ರ ಪುತ್ರಿ ಕೃಷ್ಣಾ ಭಟ್ ನಾಯಕಿಯಾಗಿ ನಟಿಸಿದರು.ಈ ಚಿತ್ರ ಮುದ್ದಣ್ಣ ಎಂಬ ಗ್ಯಾಂಗ್ ಲೀಡರ್ ಮತ್ತು ಗಾಯಕಿಯೊಬ್ಬಳ ಜೊತೆಗಿನ ಅವನ ಪ್ರೇಮವನ್ನು ಹಾಸ್ಯವಾಗಿ ಬಿಂಬಿಸುತ್ತದೆ.

    ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ

    ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ

    13

    ಆರ್ ಮಧುಚಂದ್ರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಆಧುನಿಕ ಮಕ್ಕಳಲ್ಲಿನ ಅತಿಯಾದ ಮೊಬೈಲ್ ಹುಚ್ಚಿನ ಬಗ್ಗೆ ಹೇಳಲಾಗಿದೆ..ಸೃಜನ್ ಲೊಕೇಶ್ ಮತ್ತು ಮೇಘನಾ ರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಇಬ್ಬರು ಮಕ್ಕಳ ಮೊಬೈಲ್ ಹುಚ್ಚನ್ನು ಬಿಡಿಸಲು ಒದ್ದಾಡುವ ತಂದೆ-ತಾಯಿಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಶುಭಮಂಗಳ

    ಶುಭಮಂಗಳ

    14

    ಸಂತೋಷ್ ಜಿ ನಿರ್ದೇಶನದಲ್ಲಿ ಮೂಡಿಬಂದಿರುವ ಶುಭಮಂಗಳ ಚಿತ್ರದಲ್ಲಿ ಸಿದ್ಧಾರ್ಥ ಮಾಧ್ಯಮಿಕ, ಮೇಘನಾ ಗಾಂವಕರ್ ಮತ್ತು ಹಿತಾ ಚಂದ್ರಶೇಖರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಮದುವೆ ಸಮಾರಂಭ, ಅಲ್ಲಿ ಸೇರುವ ಬಂದು-ಬಳಗ, ಹಾಗೇ ಸೇರಿದಾಗ ತಮ್ಮ ಹಳೆಯ ನೆನಪುಗಳನ್ನು ನೆನಸಿಕೊಳ್ಳುವುದು ಮತ್ತು ಅವರ ಕತೆಗಳು ಹೀಗೆ ಈ ಚಿತ್ರ ವಿವಾಹವೊಂದರ ಪ್ರಕ್ರಿಯೆಗಳನ್ನು ಬಿಚ್ಚಿಡುತ್ತದೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X