Just In
- 23 min ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- 1 hr ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 2 hrs ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 3 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
Don't Miss!
- News
ಪತ್ರ ಬರೆದಿಟ್ಟು ಅಭಿಮಾನಿ ಆತ್ಮಹತ್ಯೆ; ಅಂತ್ಯ ಸಂಸ್ಕಾರಕ್ಕೆ ಬಂದ ಎಚ್ಡಿಕೆ
- Sports
ಭಾರತ vs ಆಸ್ಟ್ರೇಲಿಯಾ: ಬ್ರಿಸ್ಬೇನ್ನಲ್ಲಿ ವಾಖಲೆಯ ಜೊತೆಯಾಟವಾಡಿದ ಶಾರ್ದೂಲ್- ಸುಂದರ್
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಜಾ ವಿತ್ ಸೃಜಾ' ಸುವರ್ಣ ವಾಹಿನಿಯಲ್ಲಿ ಮಾತ್ರ
ಕನ್ನಡ ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮಗಳ ಭರಾಟೆ ಸದ್ಯಕ್ಕೆ ತಣ್ಣಗಾಗಿದೆ. ಇಂತಹ ಸಂದರ್ಭದಲ್ಲಿ ಸುವರ್ಣ ವಾಹಿನಿ ವಿನೂತನ ಹಾಸ್ಯ ಕಾರ್ಯಕ್ರಮ 'ಮಜಾ ವಿತ್ ಸೃಜಾ' ಅಕ್ಟೋಬರ್ 3ರಿಂದ ಆರಂಭಿಸಲಿದೆ. ಕಿರುತೆರೆಯ ಮೆಚ್ಚಿನ ನಿರೂಪಕ ಸೃಜನ್ ಲೋಕೇಶ್ ನಿರೂಪಿಸುವ ಕಾರ್ಯಕ್ರಮ ಒಂದು ಗಂಟೆ ಕಾಲ ನಾನ್ ಸ್ಟಾಪ್ ಹಾಸ್ಯರಸ ಉಣಬಡಿಸಲಿದೆ.
ಪ್ರತಿ ಭಾನುವಾರ ರಾತ್ರಿ 9.30ಕ್ಕೆ ಸರಿಯಾಗಿ (ಅ.3ರಿಂದ) ಸುವರ್ಣ ವಾಹಿನಿ ಚಾಲೂ ಮಾಡಿದರೆ 'ಮಜಾ ವಿತ್ ಸೃಜಾ' ಅನುಭವಿಸಬಹುದು. ಕನ್ನಡ ಕಿರುತೆರೆ ಇತಿಹಾಸದಲ್ಲಿ ಈ ರೀತಿಯ ವಿಭಿನ್ನ ಹಾಸ್ಯ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಇದೇಮೊದಲು.
ಒಂದು ಗಂಟೆ ಕಾಲ ಪ್ರೇಕ್ಷಕರು ರಿಲ್ಯಾಕ್ಸ್ ಆಗಿ ಪೂರ್ತಿ ಎಂಜಾಯ್ ಮಾಡಬೇಕು ಎಂಬುದೇ ಈ ಕಾರ್ಯಕ್ರಮದ ಹಿಂದಿನ ಮುಖ್ಯ ಅಜೆಂಡಾ! ಕಾರ್ಯಕ್ರಮದಲ್ಲಿ ಸೃಜನ್ ಜೊತೆ ಪದ್ದಕ್ಕ ಸಹ ಇರ್ತಾರೆ. ಸೆಟ್‌ನಲ್ಲಿ ಪದ್ದಕ್ಕ ಇಲ್ಲದಿದ್ದರೂ ಕಾರ್ಯಕ್ರಮದಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ.
ಮುಖ ಸಪ್ಪೆ ಮಾಡಿಕೊಂಡು ಬದುಕುವುದರಲ್ಲಿ ಯಾವ ಅರ್ಥವೂ ಇಲ್ಲ. ಯಾವುದೇ ವಿಚಾರವನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳದೆ ಅದರಲ್ಲೂ ನಗುವುದನ್ನು ಕಲಿಯಬೇಕು. ಈ ಕಾರ್ಯಕ್ರಮದಲ್ಲಿ ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳದೆ ಮಜಾ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಸೃಜನ್ ಲೋಕೇಶ್.
ರಿಯಾಲಿಟಿ ಶೋಗಳ ನಡುವೆ ಪಕ್ಕಾ ಹಾಸ್ಯಕ್ಕಾಗಿ ಪರದಾಡುತ್ತಿರುವ ಪ್ರೇಕ್ಷಕರ ದೊಡ್ದ ಬಳಗವೇ ಇದೆ. ಇಂತಹ ಸಂದರ್ಭದಲ್ಲಿ 'ಮಜಾ ವಿತ್ ಸೃಜಾ' ಕಾರ್ಯಕ್ರಮದೊಂದಿಗೆ ಸುವರ್ಣ ವಾಹಿನಿ ಮುಂದೆ ಬಂದಿದೆ. ವಿಭಿನ್ನ ಕಾನ್ಸೆಪ್ಟ್‌ಗಳನ್ನು ಹೊಂದಿರುವ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಖಂಡಿತ ಸೆಳೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.