»   »  ಡಾನ್ಸ್ ಪಟು ಸಲ್ಮಾನ್ ಮುಡಿಗೆ ಚಿನ್ನದ ಟೋಪಿ

ಡಾನ್ಸ್ ಪಟು ಸಲ್ಮಾನ್ ಮುಡಿಗೆ ಚಿನ್ನದ ಟೋಪಿ

Subscribe to Filmibeat Kannada
Salman khan
ಜೀ ಟಿವಿಯ ಲಕ್ಸ್ ಡಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋನ ಅಂತಿಮ ಹಣಾಹಣಿಯಲ್ಲಿ ಗೆದ್ದ ಬೆಂಗಳೂರಿನ ಹುಡುಗ ಸಲ್ಮಾನ್ ಖಾನ್ ಗೆ ಚಿನ್ನದ ಟೋಪಿ ಲಭಿಸಿದೆ. ಅಂಧೇರಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶನಿವಾರ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಜೈಕುಮಾರ್ ನಾಯರ್, ಅಲಿಶಾ ಸಿಂಗ್ ಹಾಗೂ ಸಿದ್ದೇಶ್ ಪೈ ಅವರನ್ನು ಸೋಲಿಸಿ ಸಲ್ಮಾನ್ ವಿಜೇತರಾದರು.

ರೆಮೊ ಡಿಸೋಜಾ, ಟೆರೆನ್ಸ್ ಲೂಯಿಸ್, ಗೀತಾ ಕಪೂರ್ ತೀರ್ಪುಗಾರರಾಗಿದ್ದ ಈ ನೃತ್ಯ ಸ್ಪರ್ಧೆಗೆ ಆ ಕಾಲದ ಡ್ಯಾನ್ಸಿಂಗ್ ಹೀರೋ ಮಿಥುನ್ ಚಕ್ರವರ್ತಿ ಗ್ರಾಂಡ್ ಮಾಸ್ಟರ್ ಆಗಿ ಎಳೆಯ ಪ್ರತಿಭೆಗಳಿಗೆ ಸ್ಫೂರ್ತಿ ತುಂಬಿದರು.

ಚಿನ್ನದ ಟೋಪಿಯ ಜೊತೆಗೆ ಸಲ್ಮಾನ್ ಗೆ ಜೀ ಟಿವಿಯಿಂದ 50 ಲಕ್ಷ ರು ಲಭಿಸಿದ್ದಲ್ಲದೆ ಬೋನಿಕಪೂರ್ ನಿರ್ಮಾಣದ ನಟ ಸಲ್ಮಾನ್ ಖಾನ್ ಅಭಿನಯದ 'ವಾಂಟೆಡ್' ಚಿತ್ರದಲ್ಲಿ ಹೆಜ್ಜೆ ಹಾಕುವ ಅವಕಾಶ ಲಭ್ಯವಾಗಿದೆ. ಪ್ರಭುದೇವ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ವಿಶೇಷ.

ಬೆಂಗ್ಳೂರಿನ ಹೆಮ್ಮೆಯ ಸಲ್ಮಾನ್

ನಗರದ 23 ವರ್ಷದ ಮೆಕಾನಿಕಲ್ ಇಂಜಿನಿಯರ್ ಗೆ ಸ್ವಂತ ಪರಿಶ್ರಮದ ಮೇಲೆ ಅಪಾರ ನಂಬಿಕೆ. ಡಾನ್ಸ್ ಗುರು ರೆಮೋ ಡಿಸೋಜಾ ಅವರ ಮಾರ್ಗದರ್ಶನ ನನ್ನನ್ನು ಈ ಮಟ್ಟಕ್ಕೆ ತಂದಿದೆ. ಬಾಲಿವುಡ್ ಗೆ ಕಾಲಿಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಡಾನ್ಸ್ ಪಂದ್ಯಾವಳಿಯಲ್ಲಿ ಗೆಲ್ಲದಿದ್ದರೆ ಅಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಗೆ ಉನ್ನತ ವ್ಯಾಸಂಗಕ್ಕಾಗಿ ಹೋಗುತ್ತಿದೆ ಎನ್ನುವ ಸಲ್ಮಾನ್ ಗೆ ಹೃತೀಕ್ ರೋಷನ್ ನೃತ್ಯ ಎಂದರೆ ತುಂಬಾ ಇಷ್ಟವಂತೆ.

Please Wait while comments are loading...