»   » ಕಿರುತೆರೆಗೆ ಅಭಿನೇತ್ರಿ ಜಯಪ್ರದಾ ಜಂಪ್

ಕಿರುತೆರೆಗೆ ಅಭಿನೇತ್ರಿ ಜಯಪ್ರದಾ ಜಂಪ್

Posted By:
Subscribe to Filmibeat Kannada

ಒಂದು ಕಾಲದ ತಾರೆಗಳು ಕಿರುತೆರೆಯತ್ತ ಮುಖ ಮಾಡುತ್ತಿರುವುದು ಸಾಮಾನ್ಯ ಸಂಗತಿ. ರಕ್ಷಿತಾ, ಸುಹಾಸಿನಿ, ರಮ್ಯ ಕೃಷ್ಣ, ಊರ್ವಶಿ, ಖುಷ್ಬು ಬಳಿಕ ಗ್ಲಾಮರ್ ಗೊಂಬೆ ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿರುವ ಜಯಪ್ರದಾ ಅವರು ಕಿರುತೆರೆಗೆ ಜಂಪ್ ಆಗಿದ್ದಾರೆ.

ತೆಲುಗಿನ ಟಿವಿ ವಾಹಿನಿಯೊಂದರಲ್ಲಿ 'ಜಯಪ್ರದಂ' ಎಂಬ ಕಾರ್ಯಕ್ರಮವನ್ನು ಜಯಪ್ರದಾ ನಿರೂಪಿಸುತ್ತಿದ್ದಾರೆ. ಈ ಕಾರ್ಯಕ್ರಮದ ವಿಶೇಷವೆಂದರೆ, ತೆಲುಗಿನ ತಾರೆಗಳನ್ನು ಸಂದರ್ಶಿಸುವುದು. ಈಗಾಗಲೆ ಆರಂಭವಾಗಿರುವ ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವರನ್ನು ಸಂದರ್ಶಿಸಲಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಾಜ್ ಶೋ ಮ್ಯಾನ್' ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದ ಜಯಪ್ರದಾ ಮತ್ತೆ ನಾಪತ್ತೆಯಾಗಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 'ಕೀಚಕ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಆದರೆ ಸದ್ಯಕ್ಕೆ 'ಕೀಚಕ' ತೆರೆಕಾಣುವ ಲಕ್ಷಣಗಳು ಕಾಣುತ್ತಿಲ್ಲ. ಅಣ್ಣಾವ್ರ ಜೊತೆ ಅಭಿನಯದ 'ಕವಿರತ್ನ ಕಾಳಿದಾಸ' ಚಿತ್ರ ಜಯಪ್ರದಾ ಅಭಿನಯದ ಅತ್ಯುತ್ತಮ ಚಿತ್ರಗಳಲ್ಲಿ ಒಂದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada