Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್ ಜೋಡಿ ಬಿಗ್ ಬಾಸ್ ಮನೆಗೆ ಬರ್ರಲಾ
ಕಲರ್ಸ್ ವಾಹಿನಿಯ ರಿಯಾಲಿಟಿ ಷೋ ಬಿಗ್ ಬಾಸ್ ನ ನಾಲ್ಕನೇ ಆವೃತ್ತಿಗೆ ಇಂದು ರಾತ್ರಿ 9 ಗಂಟೆಗೆ ಚಾಲನೆ ದೊರೆಯಲಿದೆ. ಬಾಲಿವುಡ್ ನ ಬಿಂದಾಸ್ ನಾಯಕ ಸಲ್ಮಾನ್ ಖಾನ್ ಹೊಸ ಆವೃತ್ತಿಯ ಸಾರಥ್ಯವಹಿಸಿಕೊಂಡಿದ್ದು, ಬಿಗ್ ಬಿ ಅಮಿತಾಬ್ ಕೆಬಿಸಿ ಕಡೆ ಮುಖ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾವ ವಿಶೇಷ ಉಳಿಯುತ್ತಾರೆ ಎಂಬುದು ಈಗಾಗಲೆ ಬೆಟ್ಟಿಂಗ್ ನಡೆದಿದೆಯಂತೆ. ಮೂಲಗಳ ಪ್ರಕಾರ 26/11 ದಾಳಿ ರುವಾರಿ ಉಗ್ರ ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ಹಾಗೂ ಮಾಜಿ ಡಕಾಯಿತ ರಾಣಿ ಸೀಮಾ ಪರಿಹಾರ್ ಬಿಗ್ ಬಾಸ್ ನಲ್ಲಿ ಭಾಗವಹಿಸಲಿದ್ದಾರೆ.
ಕಸಬ್ ಪರ ವಾದಿಸಿದ ವಕೀಲ ಕಜ್ಮಿ ನಂತರ ಕೇಸ್ ನಿಂದ ಹೊರಬಿದ್ದಿದ್ದರು. ಈಗ ಸಾರ್ವಜನಿಕವಾಗಿ ತಮ್ಮ ಇಮೇಜ್ ಹೊಸದಾಗಿ ರೂಪಿಸಿಕೊಳ್ಳಲು ಬಿಗ್ ಬಾಸ್ ನ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಭಯಾನಕ ಡಕಾಯಿತಿ ರಾಣಿ ಸೀಮಾ ಪರಿಹಾರ್, ಶರಣಾಗತಿ ಹೊಂದಿದ ಮೇಲೆ, ಹೊಸ ಇಮೇಜ್ ಬೆಳೆಸಿಕೊಳ್ಳಲು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ.
ಉಳಿದಂತೆ ಆ ಕಾಲದ ಸೆಕ್ಸ್ ಸಿಂಬಲ್ ಜೀನತ್ ಅಮಾನ್ ಪ್ರಮುಖ ಆಕರ್ಷಣೆ ಆಗಬಲ್ಲರು. ಬುಕ್ಕಿಗಳ ಜಾಲದಲ್ಲಿ ಸಿಲುಕಿರುವ ಪಾಕಿಸ್ತಾನದ ವೇಗಿ ಆಸಿಫ್ ಗೆಳತಿ ವೀಣಾ ಮಲಿಕ್ ಕೂಡಾ ಬಿಗ್ ಬಾಸ್ ಮೂಲಕ ಹಿಂದಿ ಕಿರುತೆರೆಗೆ ಕಾಲಿಡುತ್ತಿದ್ದಾರೆ.
ಬೇ ವಾಚ್ ಖ್ಯಾತಿಯ ಪಮೇಲಾ ಆಂಡರ್ಸನ್ ಕೂಡಾ ಬಿಗ್ ಬಾಸ್ ನ ಸುಸಜ್ಜಿತ ಮನೆಗೆ ಬರುವ ನಿರೀಕ್ಷೆಯಿದೆ. ಉಳಿದಂತೆ ಕಿರುತೆರೆ ಕ್ವೀನ್ ಶ್ವೇತಾ ತಿವಾರಿ, ಗಾಯಕ ಶಾನ್, ನಟ ಸಮೀರ್ ಸೋನಿ, ಭೋಜ್ ಪುರಿ ನಟ ಮನೋಜ್ ತಿವಾರಿ, ನಟ ಅಶ್ಮಿತ್ ಪಟೇಲ್, ಕಿರುತೆರೆ ನಟಿ ಸಾರಾ ಖಾನ್, ಮಹೇಶ್ ಭಟ್ ಮಗ ರಾಹುಲ್ ಭಟ್, ರೂಪದರ್ಶಿ ರಿಶತ್ ಗೋಸ್ವಾನಿ, ಎಂಟಿವಿ ಸ್ಪರ್ಧೆ ವಿಜೇತೆ ಸಾಕ್ಷಿ ಪ್ರಧಾನ್, ಸಿಮೋನ್ ಸಿಂಗ್, ಚಂಕಿ ಪಾಂಡೆ, ಡಿಂಪಿ ಗಂಗೂಲಿ, ದವಿಂದೆರ್ ಸಿಂಗ್, ರಾಜೇಶ್ ಖನ್ನ, ಅವಿಕಾ ಗೌರ್ ಅಲ್ಲದೆ, ಶೈನಿ ಅಹುಜಾ ಹಾಗೂ ಸ್ನೇಹಾ ಉಲ್ಲಾಳ್ ಕೂಡಾ ಸ್ಪರ್ಧಿಸುವ ನಿರೀಕ್ಷೆಯಿದೆ. ಅಂತಿಮ ಪಟ್ಟಿ ಕೊನೆ ವೇಳೆಯಲ್ಲಿ ಬದಲಾಗಬಹುದು. ಯಾವುದಕ್ಕೂ ಕಲರ್ಸ್ ವಾಹಿನಿ ನೋಡಿ.