ಕನ್ನಡ ಟಿವಿ ಚಾನಲ್ಲುಗಳ ಪ್ರೊಗ್ರೆಸ್ ಕಾರ್ಡ್

ವಿಶಾಲ ಕರ್ನಾಟಕ (ROK) : ಜನಶ್ರೀ (60.31), ಸುವರ್ಣ 24x7 (53.96), ಟಿವಿ9 (172.7) ಮತ್ತು ಸಮಯ ಟಿವಿ (29.12)
ಬರೀ ಬೆಂಗಳೂರು (BNG) : ಸುವರ್ಣ 24x7 (56.42), ಜನಶ್ರೀ (30.54), ಟಿವಿ9 (230.71), ಸಮಯ 26.98
ಒಟ್ಟು ಮಾರುಕಟ್ಟೆ : ಜನಶ್ರೀ 44.7, ಸುವರ್ಣ 55.28, ಟಿವಿ9 203, ಸಮಯ 27.89, ಉದಯ ನ್ಯೂಸ್ 4.48.
ತಾತ್ಪರ್ಯ : ಮುನ್ನಡೆ ಕಾಯ್ದುಕೊಂಡ ಟಿವಿ9, ಎರಡನೇ ಸ್ಥಾನಕ್ಕೆ ಸುವರ್ಣ ಮತ್ತು ಜನಶ್ರೀ ನಡುವೆ ತೀವ್ರ ಪೈಪೋಟಿ. ಸುವರ್ಣ ರಾಜಧಾನಿಯಲ್ಲಿ ಮುಂದೆ, ಜನಶ್ರೀ ವಿಶಾಲ ಕರ್ನಾಟಕ ವ್ಯಾಪ್ತಿಯಲ್ಲಿ ದಾಪುಗಾಲು. ಸಮಯ ಟಿವಿ ಅಷ್ಟಕ್ಕಷ್ಟೆ. ಉದಯ ನ್ಯೂಸ್ ಸಿಂಗಲ್ ಡಿಜಿಟ್ ಸಾಧನೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ!
ನೀತಿ : ಸುದ್ದಿಯನ್ನು ಕೇವಲ ಸುದ್ದಿಯಾಗಿ ಬಿಂಬಿಸುವುದರ ಮೂಲಕ ಜನಮನಗೆಲ್ಲಬಹುದೇ ವಿನಾ, ಸುದ್ದಿಯನ್ನೇ ಮನರಂಜನೆಯ ಸರಕಾಗಿ ಬಳಸುತ್ತೇನೆ ಎಂಬ ನಿಲುವಿಗೆ ಮಾರುಕಟ್ಟೆ ಒಲಿಯುವುದಿಲ್ಲ.
ಎಚ್ಚರ : ಪ್ರತಿಯೊಂದು ಸುದ್ದಿಯನ್ನೂ ಬ್ರೇಕಿಂಗ್ ಸುದ್ದಿ ಎಂದು ಬಿಂಬಿಸಿ ಅದನ್ನೇ ಗಂಟೆಗಟ್ಟಳೆ ಚಚ್ಚುತ್ತಿದ್ದರೆ ತಲೆ ಚಿಟ್ಟುಹಿಡಿಯುತ್ತದೆ ಎನ್ನುವುದು ಕನ್ನಡ ಜನಮಾನಸದ ಪ್ರತಿಕ್ರಿಯೆ. ದೈನಂದಿನ ಬದುಕಿನಲ್ಲಿ ಜನತೆ ಬಳಕೆ ಮಾಡುವಂಥ ಸುದ್ದಿ ಮಾಹಿತಿಗಳನ್ನೂ ಕೊಡುವುದನ್ನು ವಾಹಿನಿಗಳು ಕಲಿಯುವುದು ಯಾವಾಗ? ಉದಾ : ನಿಮ್ಮ ಮನೆಯ ಓವರ್ ಹೆಡ್ ಟ್ಯಾಂಕ್ ಅನ್ನು ನೀವೇ ಕ್ಲೀನ್ ಮಾಳ್ಪುದು ಹೇಗೆ?
ನಾಳೆ, ಅಂದರೆ, ಭಾನುವಾರ ಡಿಸೆಂಬರ್ 4ರಂದು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಶುಕ್ರವಾರ ನಡೆದ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಇತ್ತೀಚಿನ ದಶಕಗಳಲ್ಲಿ ನಡೆದ ಎಲ್ಲ ಉಪ ಚುನಾವಣೆಗಳ ಪೈಕಿ ಅತ್ಯಂತ ಹೈ ಓಲ್ಟೇಜ್ ಚುನಾವಣೆ ಆಗಿರುವ ಇದನ್ನು ನಮ್ಮ ಸುದ್ದಿ ವಾಹಿನಿಗಳು ಎಷ್ಟು ಸ್ಪೀಡಾಗಿ, ಎಷ್ಟು ಕರಾರುವಾಕ್ಕಾಗಿ, ಎಷ್ಟು ಬ್ಯಾಲೆನ್ಸ್ ಆಗಿ ಬಿತ್ತರಿಸುತ್ತದೆ ಎನ್ನುವುದರ ಮೇಲೆ 49ನೇ ವಾರದ TRP ಅಂಕಿಅಂಶಗಳು ನಿಂತಿವೆ.


Click it and Unblock the Notifications











