»   » ಬೆಳ್ಳಿತೆರೆಗೆ ಗುಡ್ ಬೈ, ಟಿವಿಗೆ ಹಾಯ್: ನಾರಾಯಣ್

ಬೆಳ್ಳಿತೆರೆಗೆ ಗುಡ್ ಬೈ, ಟಿವಿಗೆ ಹಾಯ್: ನಾರಾಯಣ್

Posted By:
Subscribe to Filmibeat Kannada
S Narayan
ಇತ್ತೀಚಿಗಷ್ಟೇ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನಕ್ಕೆ ಗುಡ್ ಬೈ ಹೇಳಿರುವ ಎಸ್ ನಾರಾಯಣ್ ಮುಂದೇನು ಮಾಡುತ್ತಾರೆ ಎಂಬುದು ಎಲ್ಲರಿಗೂ ರಹಸ್ಯವಾಗಿ ಕಾಡಿತ್ತು. ಆದರೆ ಈಗ ಅದಕ್ಕೆ ಉತ್ತರ ಸಿಕ್ಕಿದೆ. ನಾರಾಯಣ್ ಸದ್ಯದಲ್ಲೇ ಹಳೇ ಗಂಡನ ಪಾದವೇ ಗತಿ ಎಂದು ಕಿರುತೆರೆಯತ್ತ ಮುಖ ಮಾಡಲಿದ್ದಾರೆ.

ಕಿರುತೆರೆ, ನಾರಾಯಣ್ ಅವರಿಗೆ ಹೊಸದೇನೂ ಅಲ್ಲ. ಈ ಮೊದಲು ಅವರು ನಿರ್ದೇಶಿಸಿದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿ ಡಬ್ಬಾ ಸೇರಿಕೊಳ್ಳುತ್ತಿದ್ದಂತೆ ಅವರು ಕಿರಿತೆರೆಯಲ್ಲಿ 'ಪಾರ್ವತಿ' ಎಂಬ ಧಾರಾವಾಹಿ ಮಾಡಿ ಮನೆಮನೆಯಲ್ಲಿಯೂ ಮಹಿಳೆಯರ ಕಣ್ಣೀರ ನದಿ ಹರಿಸಿದ್ದರು. ಅಲ್ಲಿ ಕ್ಲಿಕ್ ಆದ ನಾರಾಯಣ್ ಮತ್ತೆ ಹಿರಿತೆರೆಗೆ ಮರಳಿದ್ದರು.

ಅದೇಕೋ ಏನೋ ಮತ್ತೆ ನಾರಾಯಣ್ ಅವರಿಗೆ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಕೈಕೊಟ್ಟಿದೆ. ಚಿತ್ರರಂಗದಲ್ಲಿ ಸಾಕಷ್ಟು ಕಳೆದುಕೊಂಡು ಕಂಗಾಲಾಗಿರುವ ನಾರಾಯಣ್, ಮತ್ತೆ ಕಿರುತೆರೆಯಲ್ಲಿ ಸದ್ಯದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಉದಯ ವಾಹಿನಿ ಹಾಗೂ ಸುವರ್ಣ ವಾಹಿನಿಯಲ್ಲಿ ಧಾರಾವಾಹಿ ನಿರ್ಮಾಣಕ್ಕೆ ನಾರಾಯಣ್ ಮುಂದಾಗಿರುವ ಗುಟ್ಟು ಈಗ ರಟ್ಟಾಗಿದೆ.

ಒಟ್ಟಿನಲ್ಲಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂಬಂತೆ ನಾರಾಯಣ್ ಹಿರಿತೆರೆ ಹಾಗೂ ಕಿರುತೆರೆಗೆ 'ಜಂಪಿಂಗ್' ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಮತ್ತೆ ಸಕ್ಸಸ್ ಸಿಕ್ಕರೆ ಇದೇ ನಾರಾಯಣ್ ಪುನಃ ಸಿನಿಮಾ ನಿರ್ದೇಶನ, ನಿರ್ಮಾಣಕ್ಕೆ ಮುಂದಾದರೆ ಆಶ್ಚರ್ಯವೇನೂ ಇಲ್ಲ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Director S Narayan Turned to-words TV Serial after his retirement announcement on movie direction and production. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X