For Quick Alerts
ALLOW NOTIFICATIONS  
For Daily Alerts

ಚಲನಚಿತ್ರ ನಿರ್ದೇಶಕ ಓಂ ಪ್ರಕಾಶ್ ಈಗ ಕ್ರೀಡಾ ವರದಿಗಾರ

By Vinayakaram Kalagaru
|

ಬರೀ ಲೋ ಬಜೆಟ್ ಸಿನಿಮಾ ಮಾಡಿ, ಒಂದಷ್ಟು ಸುದ್ದಿ ಮಾಡುವ ನಿರ್ದೇಶಕ ಓಂ ಪ್ರಕಾಶ್ ನಾಯಕ್ ಸದ್ಯ ನಿರ್ದೇಶನ ವೃತ್ತಿಗೆ ಗುಡ್‌ಬಾಯ್ ಹೇಳಿದ್ದಾರೆ!

ಹೌದು, ಸಾಹಿತಿ, ಮಾಜಿ ರಾಜಕಾರಣಿ ಬಿ.ಟಿ. ಲಲಿತಾ ನಾಯಕ್ ಅವರ ಮಗಧೀರ ಓಂ ಪ್ರಕಾಶ್ ಬೆಟ್ಟದಾಪುರದ ದಿಟ್ಟ ಮಕ್ಕಳು, ಒಂದು ಕೊಲೆಯ ಸುತ್ತ, ಅಶಾಂತಿ, ಪುಟಾಣಿ ಫೋರ್ಸ್ ಮೊದಲಾದ ಕಡಿಮೆ ಬಜೆಟ್, ಕ್ವಾಲಿಟಿ ಚಿತ್ರಗಳನ್ನು ಮಾಡಿ "ಹೆಸರು" ಮಾಡಿದವರು.

ಸ್ವಪ್ನ, ಕೈಲಾಶ್‌ನಂಥ ಮಿನಿ ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರಗಳನ್ನು ಎರಡು, ಮೂರು ದಿನಕ್ಕೆ ಸೀಮಿತಗೊಳಿಸಿ, ಬಿಡುಗಡೆ ಮಾಡಿದ ಕೀರ್ತಿ ಓಂ ಪ್ರಕಾಶ್ ಅವರಿಗಷ್ಟೇ ಸಲ್ಲುತ್ತದೆ! ಕನ್ನಡದ ಲೋ ಬಜೆಟ್ ನಿರ್ದೇಶಕರಾದ ಬಿ.ಆರ್. ಕೇಶವ ಅವರಿಗೇ ಕಾಂಪಿಟೇಷನ್ ಕೊಡುವಷ್ಟು ತಯಾರಾಗುತ್ತಿದ್ದಾರೆ ಓಂ ಪ್ರಕಾಶ್ ಎಂಬ ಮಾತು ಗಾಂಧೀನಗರದಲ್ಲಿ ಮಾಮೂಲಿಯಾಗಿಬಿಟ್ಟಿತ್ತು. ಅದೇ ಓಂ ಪ್ರಕಾಶ್ ನಾಯಕ್ ಈಗ ಸುದ್ದಿವಾಹಿನಿಯೊಂದಕ್ಕೆ ವರದಿಗಾರನಾಗಿ ಸೇರ್ಪಡೆಯಾಗಿದ್ದಾರೆ.

ಇತ್ತೀಚೆಗಷ್ಟೇ ಸುದ್ದಿ ಲೋಕದಲ್ಲಿ ಹೊಸ ಕಿರಣವಾಗಿ ಹೊರಹೊಮ್ಮಿರುವ ಜನಾರ್ಧನ ರೆಡ್ಡಿಯವರ ಜನಶ್ರೀ ವಾಹಿನಿಯಲ್ಲಿ ಅವರು ಕ್ರೀಡಾ ವರದಿಗಾರರಾಗಿ ಕೆಲಸಕ್ಕೆ ಜಾಯಿನ್ ಆಗಿದ್ದಾರೆ!ಕಾಲೇಜು ದಿನಗಳಲ್ಲಿ ಕ್ರಿಕೆಟ್ ಮತ್ತಿತರ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ಅವರು, ಈಗ ಪೂರ್ಣಪ್ರಮಾಣದ ಕ್ರೀಡಾ ವರದಿಗಾರ.

ಅಲ್ಲದೇ ಶಂಕರನಾಗ್ ಅಭಿನಯ ತರಬೇತಿ ಸಂಸ್ಥೆ ಓಪನ್ ಮಾಡಿರುವ ಅವರು, ಸಿನಿಮಾ ನಿರ್ದೇಶನದ ಕುರಿತು ಐನೂರು ರು. ಮುಖಬೆಲೆಯ ಪುಸ್ತಕವನ್ನೂ ಹೊರತಂದಿದ್ದಾರೆ. ಒಂದು ಮೂಲದ ಮಾಹಿತಿಯ ಪ್ರಕಾರ ಒಬ್ಬ ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ, ಕತೆಗಾರ ಇದೇ ಮೊದಲ ಬಾರಿಗೆ ಕ್ರೀಡಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವುದು!

English summary
Director Om Prakash Nayak, who is best known as low budget filmmaker in Kannada film industry, is now working as sports reporter in Janashree news channel. Earlier, he has directed films such as Bettadapurada Ditta Makkalu, Ondu Koleya Sutta, Ashanthi, Putani Force etc. Now, the director has started new career as sports reporter.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more