»   »  ಸಾಯಿಕುಮಾರ್ ಜತೆ ಡೀಲ್ ಆರ್ ನೋ ಡೀಲ್!

ಸಾಯಿಕುಮಾರ್ ಜತೆ ಡೀಲ್ ಆರ್ ನೋ ಡೀಲ್!

Subscribe to Filmibeat Kannada

ಸನ್ ನೆಟ್‌ವರ್ಕ್ ಸಂಸ್ಥೆಯ ಉದಯ ಟಿವಿಯಲ್ಲಿ ನ.7ರಿಂದ ರಿಯಾಲಿಟಿ ಶೋ ಮಾದರಿಯಲ್ಲಿ ನಗದು ಹಣ ಗಳಿಸುವ 'ಡೀಲ್ ಆರ್ ನೋ ಡೀಲ್' ಎಂಬ ವಿನೂತನ ಕಾರ್ಯಕ್ರಮ ಪ್ರಸಾರ ವಾಗಲಿದೆ. ಇದೇ ಮೊದಲ ಬಾರಿಗೆ ವಿಶಿಷ್ಟ ರೂಪದಲ್ಲಿ ಸಿದ್ಧಪಡಿಸಿರುವ ಕಾರ್ಯಕ್ರಮ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ರಾತ್ರಿ 8.30 ರಿಂದ 9.30ರವರೆಗೆ ಬಿತ್ತರವಾಗಲಿದೆ.

26 ಕಂತುಗಳ ಕಾರ್ಯಕ್ರಮದ ಪ್ರತಿ ಧಾರಾವಾಹಿಯಲ್ಲಿ ವೀಕ್ಷಕರು ಡೀಲ್ ಆರ್ ನೋ ಡೀಲ್‌ನಲ್ಲಿ ಭಾಗವಹಿಸಿ ಸ್ಥಳದಲ್ಲೇ ದೊಡ್ಡ ಮೊತ್ತದ ಬಹುಮಾನ ಗೆಲ್ಲಬಹುದು. 50 ಲಕ್ಷ ರು.ಗಳವರೆಗಿನ ಬಹುಮಾನ ಗಳಿಸುವ ಅವಕಾಶವಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳು ನಿರೂಪಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಸ್ಥಳದಲ್ಲಿ ತೋರಿಸುವ ಸೂಟ್ ಕೇಸ್‌ನಲ್ಲಿ ನಮೂದಾಗಿರುವ ಮೊತ್ತದ ಸರಿ ಉತ್ತರ ತಿಳಿಸಿದರೆ ಅಷ್ಟೂ ಹಣ ಸಿಗಲಿದೆ.

ಈ ರೀತಿ 1 ರು. ನಿಂದ 50 ಲಕ್ಷ ರು. ವರೆಗೆ ನಗದು ಬಹುಮಾನ ಗೆಲ್ಲಬಹುದಾಗಿದೆ ಎಂದು ಸನ್ ನಟ್‌ವರ್ಕ್‌ನ ಮುಖ್ಯ ಕಾಯನಿರ್ವಾಹಕ ಅಧಿ ಕಾರಿ ಅಜಯ್ ವಿದ್ಯಾಸಾಗರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 'ಡೀಲ್ ಆರೋ ನೋ ಡೀಲ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 8 ಲಕ್ಷ ಮಂದಿ ವೀಕ್ಷಕರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಾರ್ಯಕ್ರಮವನ್ನು ಡೈಲಾಗ್ ಕಿಂಗ್ ಸಾಯಿಕುಮಾರ್ ನಡೆಸಿಕೊಡಲಿದ್ದಾರೆ. ತೆಲುಗಿನಲ್ಲೂ ಸಹ ಇದೇ ಕಾರ್ಯಕ್ರಮವನ್ನು ಸಾಯಿಕುಮಾರ್, ತಮಿಳಿನಲ್ಲಿ ರಿಷಿ ಹಾಗೂ ಮಲೆಯಾಳಂ ಚಾನಲ್‌ನಲ್ಲಿ ಮುಖೇಶ್ ನಡೆಸಿಕೊಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸನ್ ನಟ್‌ವರ್ಕ್ ಸಂಸ್ಥೆಯ ವಿಜಯಕುಮಾರ್ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada