For Quick Alerts
  ALLOW NOTIFICATIONS  
  For Daily Alerts

  ರಿಯಲ್ ರಿಯಾಲಿಟಿ ಶೋ ಶಭಾಷ್ ಇಂಡಿಯಾ

  By Rajendra
  |

  ಕನ್ನಡದ ಕಿರುತೆರೆ ಮಾಧ್ಯಮದಲ್ಲಿ ರಿಯಾಲಿಟಿ ಶೋಗಳಿಗೆ ಸಂಬಂಧಿಸಿದಂತೆ ಹೊಸತನ ಹುಟ್ಟುಹಾಕಿದ ಘನತೆ ಜೀ ಕನ್ನಡ ವಾಹಿನಿಗೆ ಸಲ್ಲುತ್ತದೆ. ಇದೀಗ 'ಶಭಾಷ್ ಇಂಡಿಯಯಾ' ಎಂಬ ನೂತನ ರಿಯಲ್ ರಿಯಾಲಿಟಿ ಶೋ ನಿರ್ಮಿಸಿದ್ದು, ಈ ಕಾರ್ಯಕ್ರಮ ಜನವರಿ 3ರಿಂದ ಸೋಮವಾರ ಮತ್ತು ಮಂಗಳವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

  ನೈಜ ಘಟನೆಗಳನ್ನು ಆಧರಿಸಿದ ಈ ಕಾರ್ಯಕ್ರಮದಲ್ಲಿ ಅಪರೂಪ ಹಾಗೂ ಆಶ್ಚರ್ಯಕರವಾದ ಸಾಧನೆ ಹಾಗೂ ಸಾಹಸ ಮಾಡುತ್ತಿರುವಂತಹ ವ್ಯಕ್ತಿಗಳನ್ನು ಪರಿಚಯಿಸಲಾಗುವುದು. ದೇಶದಲ್ಲಿ ಇಂತಹ ಸಾಹಸ ಮಾಡಿರುವವರ ದೊಡ್ಡ ಪಟ್ಟಿಯೇ ಇದ್ದು, ಅಂತಹ ಕಣ್ಮಣಿಗಳನ್ನು ಜನತೆಗೆ ಪರಿಚಯಿಸುವ ಉದ್ದೇಶವನ್ನು 'ಶಭಾಷ್ ಇಂಡಿಯಾ' ಹೊಂದಿದೆ.

  ಈ ಸೋಮವಾರ ಜೋದ್‌ಪುರದ ಸಾಹಸಿಯನ್ನು ಪರಿಚಯಿಸಲಾಯಿತು. ಅಲ್ಲಿನ ಗೋವರ್ ಆಜಾದ್ ಆಸಿಡ್‌ನಲ್ಲಿ ಸ್ನಾನ ಮಾಡಲಿರುವ ರೋಚಕ ದೃಶ್ಯಗಳನ್ನು ಈ ಸಂಚಿಕೆಯಲ್ಲಿ ವೀಕ್ಷಿಸಿದ ಪ್ರೇಕ್ಷಕರು ಪುಳಕಗೊಂಡಿದ್ದಾರೆ. ಜೊತೆಗೆ 45 ಸಾವಿರ ಕೆಜಿ ತೂಕದ ವಿಮಾನವನ್ನು ರಾಜಸ್ಥಾನದ ಮಹೇಂದ್ರ ಜೋಷಿ ತನ್ನ ಕೂದಲಿಗೆ ಕಟ್ಟಿ ಎಳೆಯುವ ಸಾಹಸ ವೂ ಪ್ರಸಾರವಾಯಿತು.

  ನಮ್ಮ ಕೊಪ್ಪಳದ ಸಾಹಸಿ ಗಣೇಶ್ ಬೈಕ್ ಮೇಲೆಯೇ ತನ್ನ ನಿತ್ಯ ಕಾರ್ಯಗಳನ್ನು ಮಾಡುವ ರೋಮಾಂಚಕ ದೃಶ್ಯಗಳನ್ನು ಪ್ರೇಕ್ಷಕರು ಸವಿದಿದ್ದಾರೆ. 'ಶಭಾಷ್ ಇಂಡಿಯಾ' ಕಾರ್ಯಕ್ರಮವನ್ನು ಚಿತ್ರನಟ ರಾಜೇಶ್ ನಿರೂಪಿಸಲಿದ್ದಾರೆ. ಇದಿಷ್ಟೇ ಅಲ್ಲದೆ ಇನ್ನೂ ಒಂದೆರಡು ನೂತನ ಕಾರ್ಯಕ್ರಮಗಳು ಜನವರಿ ತಿಂಗಳಲ್ಲಿಯೇ ಜೀ ಕನ್ನಡದಲ್ಲಿ ತೆರೆಕಾಣಲಿವೆ ಎಂದು ವಾಹಿನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ರಿಯಾಲಿಟಿ ಶೋ]

  English summary
  Zee Kannada starts real reality show Shabash India. Which will be aired from 03rd January 2011 at 9 PM.Kannada films veteran actor Rajesh hosted the show, which is all about adventurous people, real events, daredevils.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X