For Quick Alerts
  ALLOW NOTIFICATIONS  
  For Daily Alerts

  ನನಗೆ ಇಬ್ಬರು ಹೆಂಡಿರು, 4 ಮಕ್ಕಳು: ರವಿ ಬೆಳಗೆರೆ

  By Srinath
  |

  ಬೆಂಗಳೂರು, ಏ.9: ಇದು ಅಧಿಕೃತ! 'ನನಗೆ ಇಬ್ಬರು ಹೆಂಡಿರು, ನಾಲ್ಕು ಮಕ್ಕಳು' ಎಂದು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು ನಿರ್ಭಿಡೆಯಿಂದ ಹೇಳಿಕೊಂಡಿದ್ದಾರೆ. ನಿನ್ನೆ ರಾತ್ರಿ TV9 ಚಾನೆಲಿನ 'ಚಕ್ರವ್ಯೂಹ' ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಬೆಳಗೆರೆ ಈ ವಿಷಯವನ್ನು ದೃಢಸಿದ್ದಾರೆ.

  ಲಿವಿಂಗ್ ಟುಗೆದರ್: ಇದರೊಂದಿಗೆ ರವಿ ಬೆಳಗೆರೆ ತಮ್ಮ ವೈವಾಹಿಕ ಬದುಕಿನ ಬಗ್ಗೆ ಎದ್ದಿದ್ದ ಗಾಳಿಸುದ್ದಿಗೂ ಗುದ್ದುಕೊಟ್ಟಿದ್ದಾರೆ. 'ತನಗಿಬ್ಬರು ಹೆಂಡಿರು, ನಾಲ್ಕು ಮಕ್ಕಳು' ಎಂದು ಬೆಳಗೆರೆ ಈ ಹಿಂದೆ ಇದನ್ನು ಸ್ಪಷ್ಟಪಡಿಸಿದ್ದರಾದರೂ ಅದು ಅವರ ಆತ್ಮೀಯ ವಲಯಗಳಿಗೆ ಸೀಮಿತವಾಗಿತ್ತು. ಆದರೆ ಈ ಬಾರಿ ಸಾರ್ವಜನಿಕವಾಗಿ, ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ.

  ಮುಖ್ಯವಾಗಿ, ತಮ್ಮ ಎರಡನೆಯ ಪತ್ನಿಯ ಬಗ್ಗೆ ಹೇಳಿಕೊಂಡ ರವಿ, ತಮ್ಮ ದಾಂಪತ್ಯಕ್ಕೆ ಹುಟ್ಟಿದ ಮಗು ಹಿಮವಂತನಿಗೆ ತಾನು ಅಪ್ಪ. ಶಾಲಾ ದಾಖಲಾತಿ ಸೇರಿದಂತೆ ಎಲ್ಲೆಡೆ ತಾನೇ ಅಪ್ಪ ಎಂದು ನಮೂದಿಸಿರುವುದಾಗಿ ಅವರು ಘೋಷಿಸಿದರು. ಈ ರೀತಿ ಎರಡೆರಡು ಮದುವೆ ಮಾಡಿಕೊಂಡಿರುವ ಬಗ್ಗೆ ತಾನು ತನ್ನ ಮೊದಲ ಪತ್ನಿ, ಮತ್ತು ಮೂವರು ಮಕ್ಕಳ ಬಳಿ ಕ್ಷಮೆಯಾಚಿಸಿದ್ದೇನೆ. and there ends the matter ಎಂದು ರವಿ ವ್ಯಾಖ್ಯಾನಿಸಿದರು.

  250 ಕೋಟಿ ರು ಆಸ್ತಿಯ ಒಡೆಯ:ಗಮನಾರ್ಹವೆಂದರೆ, ತಾನೀಗ 250 ಕೋಟಿ ರುಪಾಯಿ ಆಸ್ತಿಯ ಒಡೆಯ ಎಂದೂ ರವಿ ಇದೇ ಸಂದರ್ಶನದಲ್ಲಿ ತಿಳಿಸಿದರು. ಇದರಲ್ಲಿ ಒಂದೇ ಒಂದು ಪೈಸೆ ಅನ್ಯಾಯದ ದುಡ್ಡು ಇಲ್ಲ. ದಿನಕ್ಕೆ ತಾನು 1 ಲಕ್ಷ ರುಪಾಯಿ ದುಡಿಯುತ್ತಿರುವುದಾಗಿಯೂ ರವಿ ಬೆಳಗೆರೆ ವಿವರಿಸಿದರು.

  English summary
  In an interveiw given to TV9, Hi Bangalore Kannada weekly editor Ravi Belagere has clarified that he is married twice and has 4 children. Also he said that he has amassed Rs. 250 crores but all legally.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X