»   » ಸನ್ ನೆಟ್ ವರ್ಕ್: ಹೆಚ್ಚಿನ ಮೂರು ಪೇ ಚಾನೆಲ್ ಆರಂಭ

ಸನ್ ನೆಟ್ ವರ್ಕ್: ಹೆಚ್ಚಿನ ಮೂರು ಪೇ ಚಾನೆಲ್ ಆರಂಭ

Posted By:
Subscribe to Filmibeat Kannada
Sun TV Network
ಸನ್ ಟಿವಿ ನೆಟ್ ವರ್ಕ್, ಇಂದಿನಿಂದ (ಜನವರಿ 8, 2012) ಇನ್ನೂ 3 ಹೆಚ್ಚಿನ ಟಿವಿ ಚಾನೆಲ್ ಬಿಡುಗಡೆ ಮಾಡುತ್ತಿದೆ. ಲೈಫ್ ಸ್ಟೈಲ್ ಕೇಂದ್ರೀಕರಿಸಿದ 'ಸನ್ ಲೈಫ್ (Sun Life)' ಮತ್ತು 'ಜೆಮಿನಿ ಲೈಫ್ (Gemini Life)' ಎಂಬ ಎರಡು ಚಾನೆಲ್ ಗಳ ಜೊತೆ 'ರೆಸ್ಟ್ ಆಫ್ ಇಂಡಿಯಾ (Sun TV RI) ಉಳಿದ ಭಾರತದ ರಾಜ್ಯಗಳನ್ನು ಕೇಂದ್ರೀಕರಿಸಿದ ಚಾನೆಲ್ ಬಿಡುಗಡೆ ಮಾಡುತ್ತಿದೆ.

ಈ ತಮಿಳು ಮತ್ತು ತೆಲುಗಿನ ಸನ್ ಲೈಫ್ ಹೆಸರಿನ ವಾಹಿನಿಗಳು ಅಲ್ಲಿನ ಜೀವನ ಶೈಲಿ, ಧರ್ಮ, ಆರೋಗ್ಯ ಮತ್ತು ಶಿಕ್ಷಣಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿವೆ. ಆದರೆ ಸನ್ ಟಿವಿ RI, ಇದೇ ಕಾರ್ಯಕ್ರಮಗಳನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶ ಹೊರತುಪಡಿಸಿ ಭಾರತದ ಉಳಿದ ಪ್ರದೇಶಗಳ ಜೀವನಶೈಲಿಯ ಮೇಲೆ ಬೆಳಕು ಚೆಲ್ಲಿ ಪ್ರಸಾರ ಮಾಡಲಿದೆ.

ಈ ಹೊಸ ವಾಹಿನಿಗಳ ಮೂಲಕ ಸನ್ ಟಿವಿಯಲ್ಲಿ ಸಾಮಾನ್ಯ ಮನರಂಜನೆ ಜೊತೆಗೆ ಸಂಗೀತ, ಸುದ್ದಿ, ಮಕ್ಕಳಿಗಾಗಿ ಮನರಂಜನೆ, ಹಾಸ್ಯ ಮತ್ತು ಸಾಹಸ ಈ ಎಲ್ಲಾ ಕಾರ್ಕ್ಮಗಳು ಇನ್ನೂ ಹೆಚ್ಚು ಸೇರ್ಪಡೆ ಆಗಲಿವೆ. ಕಳೆದ ವಾರವಷ್ಟೇ, 24 ಗಂಟೆಗಳ ಪ್ರಸಾರದ, ಜಾಹೀರಾತುಗಳಿಲ್ಲದ ಆಕ್ಷನ್ ಸಿನಿಮಾಗಳ ಪ್ರೀಮಿಯರ್ ಪೇ ಚಾನೆಲ್ಸ್ ಗಳನ್ನು ಲಾಂಚ್ ಮಾಡಿತ್ತು.

ಇದೀಗ ಸನ್ ನೆಟ್ ವರ್ಕ್ ಬಳಗದಿಂದ ತಮಿಳು ಭಾಷೆಯ 12, ತೆಲುಗಿನ 9, ಕನ್ನಡದ 7 ಹಾಗೂ ಮಲೆಯಾಳಂ ಭಾಷೆಯ 4, ಹೀಗೆ ಒಟ್ಟೂ 32 ಚಾನೆಲ್ ಗಳು ಕಾರ್ಯನಿರ್ವಹಿಸುತ್ತಿವೆ. ಇಈ ಮೂಲಕ ಸನ್ ಟಿವಿ ಎಲ್ಲಾ ವರ್ಗದ ಹಾಗೂ ಎಲ್ಲಾ ಪ್ರದೇಶಗಳ ಜನರನ್ನು ಮುಟ್ಟುವ ಪ್ರಯತ್ನ ನಡೆಸಿದೆ. (ಒನ್ ಇಂಡಿಯಾ ಕನ್ನಡ)

English summary
Sun TV launches 3 more pay channels today, Jan. 08, 2012. Two channels – Sun Life and Gemini Life – will focus on lifestyle while Sun TV RI will have a ‘Rest of India’ focus.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada