»   »  ಕಣ್ಣೀರ ಕೋಡಿ ಹರಿಸುತ್ತಿರುವ ಕನ್ನಡ ಟಿವಿಗಳು!

ಕಣ್ಣೀರ ಕೋಡಿ ಹರಿಸುತ್ತಿರುವ ಕನ್ನಡ ಟಿವಿಗಳು!

By: *ಪಂಡರಿಬಾಯಿ, ಬೆಂಗಳೂರು
Subscribe to Filmibeat Kannada

ಮೂರ್ಖರ ಪೆಟ್ಟಿಗೆ ಇದೀಗ ಪ್ರೇಕ್ಷಕರ ಪಾಲಿಗೆ ಕಣ್ಣೀರ ಪೆಟ್ಟಿಗೆಯಾಗಿದೆ! ಸಲಿಂಗಕಾಮ, ವ್ಯಭಿಚಾರ, ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಹದಿಹರಯದ ಸಮಸ್ಯೆಗಳು, ಏಡ್ಸ್ ,ಪತಿಯ ದಬ್ಬಾಳಿಕೆಯಂತಹ ಸಮಸ್ಯೆಗಳು ಸಂಜೆಯಾಗುತ್ತಿದ್ದಂತೆ ಪ್ರಸಾರವಾಗಲು ಪ್ರಾರಂಭಿಸುತ್ತವೆ. ಒಂದಾದ ನಂತರ ಒಂದು ರಿಯಾಲಿಟಿ ಕಾರ್ಯಕ್ರಮಗಳ ನಡುವೆ ಪೈಪೋಟಿ ಆರಂಭವಾಗುತ್ತದೆ.

ಸಂಜೆ 7 ಗಂಟೆಯಾಗುತ್ತಿದ್ದಂತೆ ಜೀ ಕನ್ನಡಲ್ಲಿ ಮಾಳವಿಕಾ ನಡೆಸಿಕೊಡುವ 'ಬದುಕು ಜಟಕಾ ಬಂಡಿ' ಗೋಳಿನ ಕತೆಗಳನ್ನು ಬಿಚ್ಚ್ಚಿಡುತ್ತದೆ. ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸುವರ್ಣ ವಾಹಿನಿ ಚಾಲು ಮಾಡಿದರೆ 'ಇದು ಕತೆಯಲ್ಲ ಜೀವನ' ಶುರುವಾಗಿರುತ್ತ್ತದೆ. ಇದನ್ನು ಹಿರಿಯ ನಟಿ ಲಕ್ಷ್ಮಿ ನಡೆಸಿಕೊಡುತ್ತಾರೆ.

ಇದಾದ ಬಳಿಕ ಕಸ್ತೂರಿ ವಾಹಿಯಲ್ಲಿ ರಾತ್ರಿ 9ರಿಂದ 10 ಗಂಟೆಯವರೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ನಡೆಸಿಕೊಡುವ ಮತ್ತೊಂದು ಕಣ್ಣೀರ ಕಾರ್ಯಕ್ರಮ 'ಇದು ಯಾರು ಬರೆದ ಕತೆಯೋ' ಪ್ರಾರಂಭವಾಗುತ್ತದೆ. ಮುಖ್ಯವಾಗಿ ಮಹಿಳೆಯರು ಈ ಕಾರ್ಯಕ್ರಮಗಳ ಪ್ರಮುಖ ಪ್ರೇಕ್ಷಕರು.

ಕನ್ನ್ನಡ ಟಿವಿ ವಾಹಿನಿಗಳಲ್ಲಿ ಮೊದಲು ಕರುಣಾರಸ ಆನಂತರವೇನಿದ್ದರೂಹಾಸ್ಯ ರಸ ಪ್ರಸಾರವಾಗುತ್ತಿದೆ. ಸುವರ್ಣ ವಾಹಿನಿಯಲ್ಲಿ ರಾತ್ರಿ 10ಕ್ಕೆ ಹಾಸ್ಯ ಧಾರಾವಾಹಿ 'ಎಸ್ಸೆಸ್ಸೆಲ್ಸಿ ನನ್ ಮಕ್ಕಳು' ಪ್ರಸಾರವಾಗುತ್ತದೆ. ಪ್ರೇಕ್ಷಕರು ನಕ್ಕುನಲಿಯಲು ಮನೆಮಂದಿಯಲ್ಲಾ ಕೂತು ನೋಡಬೇಕಾದರೆ 10.30ರವರೆಗೂ ಕಾಯಬೇಕು. ಆಗ ಜೀ ಕನ್ನಡದಲ್ಲಿ 'ಪಾರ್ವತಿ ಪರಮೇಶ್ವರ' ಪ್ರತ್ಯಕ್ಷವಾಗುವ ಸಮಯ!

ಒಟ್ಟಿನಲ್ಲಿ ಮೂರು ಗಂಟೆಗಳ ಕಾಲ ಕಣ್ಣೀರ ಕತೆಗಳು ನಂತರ ನಕ್ಕು ನಲಿಯಲು ಒಂದು ಗಂಟೆ! ಹೀಗಿದೆ ಕನ್ನಡ ಟಿವಿ ಕಾರ್ಯಕ್ರಮಗಳ ಪಟ್ಟಿ. ಪ್ರೇಕ್ಷಕರು 'ಇದು ಯಾರು ಬರೆದ ಕತೆಯೋ...ನನಗಾಗಿ ಬಂದ ವ್ಯಥೆಯೋ' ಎಂದು ಪರಿತಪಿಸುವಂತಾಗಿದೆ. ದಯವಿಟ್ಟು ಈ ರೀತಿಯ ಕಾರ್ಯಕ್ರಮಗಳ ಪ್ರಸಾರವನ್ನು ಕಡಿಮೆ ಮಾಡಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada