»   » ದಾಖಲೆ ಮೊತ್ತಕ್ಕೆ ಸೋನಿ ಟಿವಿ ಪಾಲದ 3 ಈಡಿಯಟ್ಸ್

ದಾಖಲೆ ಮೊತ್ತಕ್ಕೆ ಸೋನಿ ಟಿವಿ ಪಾಲದ 3 ಈಡಿಯಟ್ಸ್

Posted By:
Subscribe to Filmibeat Kannada

ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿದ್ದ ಅಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದ '3 ಈಡಿಯೇಟ್ಸ್' ಚಿತ್ರ ತನ್ನ ಜಾದೂವನ್ನು ಮತ್ತೆ ಮುಂದುವರಿಸಿದೆ. ಭಾರತದ ಕಿರುತೆರೆಯ ಮಟ್ಟಿಗೆ ಇದುವರೆಗಿನ ಆಲ್ ಟೈಮ್ ರೆಕಾರ್ಡ್ ಮೊತ್ತಕ್ಕೆ ಈ ಚಿತ್ರ ಮಾರಾಟವಾಗಿದೆ. ಸೋನಿ ಎಂಟರ್ ಟೈನ್ ಮೆಂಟ್ ಚಾನೆಲ್ ಈ ಚಿತ್ರವನ್ನು ಬರೋಬ್ಬರಿ ರು.21 ಕೋಟಿ ಕೊಟ್ಟು ಖರೀದಿಸಿದೆ.

ಇದೇ ಜುಲೈ 25ರ ಭಾನುವಾರ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಇಷ್ಟು ಭಾರೀ ಮೊತ್ತಕ್ಕೆ ಚಿತ್ರ ಖರೀದಿಸಿದ ನಂತರ ಸೋನಿ ಚಾನಲ್ ಹಾಕಿರುವ ಹಣವನ್ನು ವಾಪಾಸ್ ಪಡೆಯ ಬೇಕಲ್ಲವೇ? ಅದನ್ನು ಜಾಹೀರಾತುದಾರರ ಮೇಲೆ ವಿಧಿಸದೆ ಚಾನಲ್ ಗೆ ಬೇರೆ ದಾರಿ ಇಲ್ಲ. ತಮ್ಮ ತಮ್ಮ ಉತ್ಪನ್ನಗಳ ಜಾಹೀರಾತಿಗೆ ಸೋನಿ ಚಾನಲ್ ನಿಗದಿ ಪಡಿಸಿದ ಮೊತ್ತ ಎಷ್ಟು ಗೊತ್ತೇ? 10 ಸೆಕೆಂಡ್ ನ ಸ್ಲಾಟ್ ಗೆ ರು.2 .2 ಲಕ್ಷ. ಇದು ಕೂಡಾ ಒಂದು ದಾಖಲೆ.

ಶಾರೂಖ್ ಅಭಿನಯದ 'ಮೈ ನೇಮ್ ಇಸ್ ಖಾನ್' ಚಿತ್ರದ ಜಾಹೀರಾತಿಗೆ ಎರಡು ಲಕ್ಷ ರುಪಾಯಿ ಇದ್ದಿದ್ದು ಇದುವರೆಗಿನ ಗರಿಷ್ಠ ಮೊತ್ತ. '3 ಈಡಿಯಟ್ಸ್' ಚಿತ್ರದ ಜಾಹೀರಾತಿಗೆ ಇಷ್ಟು ಭಾರಿ ಮೊತ್ತವಿದ್ದರೂ ಎಲ್ಲಾ ಸ್ಲಾಟ್ ಗಳು ಸೋಲ್ಡ್ ಔಟ್ ಆಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರೋಹಿತ್ ವರ್ಮ ಹೇಳಿಕೆ ನೀಡಿದ್ದಾರೆ. '3 ಈಡಿಯಟ್ಸ್' ಚಿತ್ರ ಪ್ರಪಂಚದಾದ್ಯಂತ ಸುಮಾರು 400 ಕೋಟಿ ವ್ಯವಹಾರ ನಡೆಸಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada