»   »  ಕಿರುತೆರೆಯಲ್ಲಿ ಹಿಟ್ ಚಿತ್ರಗಳ ಸುಗ್ಗಿ

ಕಿರುತೆರೆಯಲ್ಲಿ ಹಿಟ್ ಚಿತ್ರಗಳ ಸುಗ್ಗಿ

Subscribe to Filmibeat Kannada
Sankranthi Special: Hit movies on TV channels
ಈ ಬಾರಿಯ ಮಕರಸಂಕ್ರಾಂತಿಯಂದು ( ಜನವರಿ 14, ಬುಧವಾರ) ಕನ್ನಡ ಸಿನಿರಸಿಕರಿಗೆ ಕಿರುತೆರೆಯಲ್ಲಿ ಸುಗ್ಗಿಯೋ ಸುಗ್ಗಿ. ಕನ್ನಡ ಟಿವಿ ಚಾನಲುಗಳು ಪೈಪೋಟಿಯಂತೆ ಹಿಟ್ ಚಿತ್ರಗಳನ್ನು ಅಂದು ಪ್ರಸಾರಮಾಡುತ್ತಿವೆ. ರಿಮೋಟ್ ಕೈಯಲ್ಲಿಟ್ಟುಕೊಳ್ಳಿರಿ, ನಿಮಗೆ ಯಾವುದು ಬೇಕೋ ಅದನ್ನು ಆರಿಸಿಕೊಂಡು ಕ್ಲಿಕ್ ಮಾಡಿ.


1. ಸುವರ್ಣ ವಾಹಿನಿ

ಚಿತ್ರ : ಮುಂಗಾರು ಮಳೆ
ಸಮಯ: ಸಂಜೆ 4.00ಕ್ಕೆ
2007 ರಲ್ಲಿ ಬಿಡುಗಡೆಯಾಗಿ, ಕನ್ನಡ ಚಿತ್ರರಂಗಲ್ಲಿ ಹೊಸ ಇತಿಹಾಸವನ್ನು ಸೃಸ್ಟಿಸಿದ ಚಿತ್ರ. ಗಣೇಶ್, ಪೂಜಾ ಗಾಂಧಿ, ಅನಂತನಾಗ್ ಮುಂತಾದವರ ಉತ್ತಮ ಅಭಿನಯ, ಸಾಹಿತ್ಯ, ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಪ್ಲಸ್ ಪ್ಲಸ್ ಪ್ಲಸ್ ಪಾಯಿಂಟ್.

2. ಕಸ್ತೂರಿ
ಚಿತ್ರ : ಅಜಯ್
ಸಮಯ: ಸಂಜೆ 4.05ಕ್ಕೆ
ಪುನೀತ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ, 2006 ರಲ್ಲಿ ಬಿಡುಗಡೆಗೊಂಡು ಯಶಸ್ಸು ಗಳಿಸಿತ್ತು. ಉತ್ತರ ಕರ್ನಾಟಕ ಶೈಲಿಯಲ್ಲಿ ಅಭಿನಯಿಸಿದ್ದ ಪ್ರಕಾಶ್ ರೈ ಅವರ ನಟನೆ ಭಾರಿ ಪ್ರಶಂಶೆಗೆ ಒಳಗಾಗಿತ್ತು.

3. ಉದಯ
ಚಿತ್ರ: ರಾಮ ಶಾಮ ಭಾಮ
ಸಮಯ: ಸಂಜೆ 6.00ಕ್ಕೆ
ಬಹಳ ವರ್ಷಗಳ ನಂತರ ಕಮಲಹಾಸನ್ ಕನ್ನಡದಲ್ಲಿ ನಟಿಸಿದ ಚಿತ್ರ. ಹಾಸ್ಯ ಪ್ರಧಾನವಾದ ಈ ಚಿತ್ರದಲ್ಲಿ ರಮೇಶ್, ಊರ್ವಶಿ, ಡೈಸಿ ಬೋಪಣ್ಣ, ಶೃತಿ, ಅನಿರುದ್ದ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರ 2007ರ ನಕ್ಕುನಲಿಸುವ ಚಿತ್ರಗಳಲ್ಲೊಂದು.

4. ಝೀ ಕನ್ನಡ
ಚಿತ್ರ: ಮಿಲನ
ಸಮಯ: ಸಂಜೆ 4.00ಕ್ಕೆ
ಪುನೀತ್, ಪಾರ್ವತೀ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ. ಚಿತ್ರದ ಯಶಸ್ಸಿಗೆ ಮನೋಮೂರ್ತಿ ಅವರ ಉತ್ತಮ ಸಂಗೀತ ಕೂಡ ಕಾರಣ. ಬಿಡುಗಡೆಯಾದ ಎಲ್ಲ ಕಡೆ ಉತ್ತಮ ಪ್ರದರ್ಶನ ಕಂಡಿದ್ದ ಚಿತ್ರ. ಪುನೀತ್ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭ್ಯವಾದ ಚಿತ್ರ. ಬಿಡುಗಡೆ ಆದ ದಿನದಿಂದ ಇಂದಿನವರೆಗೂ ಬೆಂಗಳೂರಿನ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನ ಕಾಣುತ್ತಿದೆ.

( ದಟ್ಸ್ ಕನ್ನಡ ಸುದ್ದಿಮನೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada