For Quick Alerts
  ALLOW NOTIFICATIONS  
  For Daily Alerts

  ಭಗ್ನ ಪ್ರೇಮಿ, ಕನ್ನಡ ಸಿನಿ ಕಲಾವಿದೆ ಆತ್ಮಹತ್ಯೆ

  By Mahesh
  |

  ಪತಿಯನ್ನು ಪ್ರಿಯಕರನ ಜೊತೆ ಬಂದಿದ್ದ ಸಿನಿ ಕಲಾವಿದೆಯೊಬ್ಬಳು ದುರಂತ ಸಾವನ್ನಪ್ಪಿದ್ದಾಳೆ. ಪ್ರಿಯಕರ ಬೇರೆ ಮದುವೆಯಾಗಿ ಕಲಾವಿದೆಗೆ ಕೈ ಕೊಟ್ಟಿದ್ದಾನೆ. ಅತ್ತ ಪತಿಯೂ ಇಲ್ಲ, ಪ್ರಿಯಕರನ ಪ್ರೀತಿಯೂ ಇಲ್ಲದೆ ಬೇಸತ್ತ ನೃತ್ಯಪಟು ಸವಿತಾರಾಣಿ(32) ನೇಣಿಗೆ ಶರಣಾಗಿದ್ದಾಳೆ.

  ಮೈಕೋ ಲೇಔಟ್ ಪೊಲೀಸ್ ಠಾಣೆಯ ಬಿಟಿಎಂ ಲೇಔಟ್ 1ನೇಹಂತದಲ್ಲಿ ವಾಸವಾಗಿದ್ದ ಸವಿತಾಳಿಗೆ ವಿವಾಹವಾಗಿತ್ತು. ಆದರೆ, ಪತಿ ಶಶಿಕುಮಾರ್ ಗೆ ವಿಚ್ಛೇದನ ನೀಡಿ, ಪ್ರಿಯಕರ ದೀಪಕ್ ಹಿಂದೆ ಓಡಿ ಬಂದಿದ್ದಳು. ಆದರೆ, ಕೆಲ ತಿಂಗಳುಗಳ ನಂತರ ದೀಪಕ್ ತನ್ನನ್ನೇ ನಂಬಿ ಬಂದಿದ್ದ ಸವಿತಾಳಿಗೆ ಕೈ ಕೊಟ್ಟು ಮತ್ತೊಬ್ಬಳನ್ನು ವರಿಸಿದ್ದಾನೆ.

  ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನರ್ತಕಿಯಾಗಿ ಕಾಣಿಸಿಕೊಂಡಿದ್ದ ಸವಿತಾಳಿಗೆ ದೀಪಕ್ ಮಾಡಿದ ಮೋಸದಿಂದ ತುಂಬಾ ನೋವಾಗಿದೆ. ಲಕ್ಕಸಂದ್ರದಲ್ಲಿರುವ ತನ್ನ ತಂದೆಗೆ ಎಲ್ಲಾ ವಿಷಯ ಹೇಳಲು ನಿರ್ಧರಿಸಿದ್ದಾಳೆ.

  ಆದರೆ, ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ, ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಡುತ್ತಾಳೆ. ಕೊಳೆತು ನಾರುತ್ತಿದ್ದ ಸವಿತಾ ಶವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೌಟುಂಬಿಕ ಕಲಹ, ಪ್ರೇಮ ವೈಫಲ್ಯದಿಂದ ಹೊರ ಬರಲಾರದ ಸವಿತಾ ಸಾವಿಗೆ ಶರಣಾಗಿದ್ದಾಳೆ.

  English summary
  Movie artist Savita Rani committed suicide after she was dejected by her boy friend. 30 Year Old Savita was a co-artiste and a choreographer in Kannada, Telugu, Tamil and Hindi movies and TV Serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X