»   » ಪಬ್ಲಿಕ್ ಟಿವಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸುದ್ದಿ

ಪಬ್ಲಿಕ್ ಟಿವಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸುದ್ದಿ

Posted By:
Subscribe to Filmibeat Kannada
Ravichandran
ಇಂದು (ಫೆಬ್ರವರಿ 12, 2012) 'ಜನರಿಗಾಗಿ ಜನರಿಗೋಸ್ಕರ ಪಬ್ಲಿಕ್ ಟಿವಿ' ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಗಿದೆ ಪಬ್ಲಿಕ್ ಟಿವಿ. ಎಚ್ ಆರ್ ರಂಗನಾಥ್ ಸಾರಥ್ಯದ ಈ ವಾಹಿನಿಯ ಸುದ್ದಿ ಪ್ರಸಾರವನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸದಾನಂದ ಗೌಡ ಸುದ್ದಿ ಓದುವುದರ ಮೂಲಕ ಉದ್ಘಾಟಿಸಿದರು. ನಂತರ ಸಂತೋಷ್ ಹೆಗಡೆ, ತರಳಬಾಳು ಶ್ರೀಗಳು ಸುದ್ದಿ ಓದಿದರು.

ಕ್ರೇಜಿ ಸ್ಟಾರ್ ನಟ ರವಿಚಂದ್ರನ್ ಕೂಡ ಪಬ್ಲಿಕ್ ಟಿವಿ ವಾಹಿನಿಯ ಸುದ್ದಿ ನಿರೂಪಕರಾಗಿ ಗಮನಸೆಳೆದರು. 'ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ... ಎಂಬ ಹಿನ್ನೆಲೆ ಹಾಡು, ರವಿಚಂದ್ರನ್ ಮಾತು, ನಗು.. ಗಮನ ಸೆಳೆದವು. ಹುಬ್ಬಳ್ಳಿಯ ಕ್ರಿಕೆಟ್ ಗಲಾಟೆ, ನಟಿ ರಮ್ಯಾ-ಗಣೇಶ್ ಗಲಾಟೆ, ಐಂದ್ರಿತಾ ರೇ-ನಾಗತಿಹಳ್ಳಿ ಮನಸ್ತಾಪ, ಹೀಗೆ ಕಳೆದ ವರ್ಷದ ಕೆಲವು ಕಹಿಘಟನೆಗಳು ರವಿಚಂದ್ರನ್ ಮಾತಿನ ಮೂಲಕ ನೋವಿನ ಧ್ವನಿಯಾಗಿ ಹಾದು ಹೋದವು.

ನಗುನಗುತ್ತಾ ಮಾತನಾಡಿದ ರವಿಚಂದ್ರನ್, ಈ ವರ್ಷ ಸಿನಿಮಾ ಪ್ರಯಾಣ 'ಸುಖಕರವಾಗಿರಲಿ' ಎಂಬ ಆಶಯ ಹಾಗೂ 'ಇರುತ್ತೆ' ಎಂಬ ಆತ್ಮವಿಶ್ವಾಸದೊಂದಿಗೆ ಮಾತಿಗೆ ಮಂಗಳ ಹಾಡಿದ್ದು ವಿಶೇಷವಾಗಿತ್ತು. ಕ್ರೇಜಿ ಸ್ಟಾರ್ ಬಿರುದಾಂಕಿತ ರವಿಮಾಮ ಕನಸುಗಳ ಬೆನ್ನತ್ತಿ ಹೋಗುವ ಜಾಯಮಾನದವರು. ಅವರ ಸುದ್ದಿ ನಿರೂಪಣೆಯಲ್ಲೂ ಅದು ವ್ಯಕ್ತವಾಯಿತು. ಒಟ್ಟಿನಲ್ಲಿ ರವಿಚಂದ್ರನ್ ಸುದ್ದಿ ನಿರೂಪಣೆ ವಿಭಿನ್ನ ಹಾಗೂ ವಿಶೇಷವಾಗಿತ್ತು. (ಒನ್ ಇಂಡಿಯಾ ಕನ್ನಡ)

English summary
Public TV a Kannada news channel has started today, on 12th February 12, 2012. Launch Starts from Crazy Star Ravichandran, as one of the VIP. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X